ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸದ ಮೆಲುಕು

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪುರಾಣದ ಕತೆಗಳನ್ನು ಎಲ್ಲಾ ವಯೋಮಾನದವರಿಗೆ ತಲುಪಿಸುವ ವಿಶಿಷ್ಟ ಕಲೆ ಯಕ್ಷಗಾನ. ಪಾತ್ರಗಳನ್ನು ವೈವಿಧ್ಯಮಯವಾಗಿ ರೂಪಿಸುವ, ಹಲವು ಕೋನಗಳಲ್ಲಿ ನಿಂತು ತರ್ಕಿಸುವ ಚಾಣಾಕ್ಷ ಕಲಾವಿದರ ಪ್ರತಿಭೆಯಿಂದ ಯಕ್ಷಗಾನ ಈ ಪೌರಾಣಿಕ ಪ್ರಸಂಗಗಳು ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ.
 
ಅಲ್ಲಿನ ಪ್ರತಿಯೊಂದು ಪಾತ್ರಗಳೂ ಕಲಾವಿದನ ಸಾಂದರ್ಭಿಕ ಭಿನ್ನತೆ ಹಾಗೂ ಪಾತ್ರ ಔಚಿತ್ಯವನ್ನು ಬಿಂಬಿಸಿವೆ. ಶಿವರಾತ್ರಿ ಸಂದರ್ಭದಲ್ಲಿ ಪಂಚಾಕ್ಷರಿ ಮಂತ್ರದ ಮಹಿಮೆ ಕುರಿತಾದ ಈ ಕತೆಯನ್ನು ಕಲಾಕದಂಬ ಸಂಸ್ಥೆ ರಾಧಾಕೃಷ್ಣ ಉರಾಳ ನಿರ್ದೇಶನದಲ್ಲಿ ಹಮ್ಮಿಕೊಂಡಿದೆ. 

ಮಾಸದ ಮೆಲುಕು ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜೈನ್ ಹೆರಿಟೇಜ್ ಸ್ಕೂಲ್‌ನ ಪ್ರಾಂಶುಪಾಲರಾದ ಅರ್ಚನಾ ವಿಶ್ವನಾಥ್, ದಸರಾ ಏಕಲವ್ಯ ಪ್ರಶಸ್ತಿ ವಿಜೇತ  ಜಿ.ಕೆ.ವಿಶ್ವನಾಥ್, ಸಚ್ಚಿದಾನಂದಮೂರ್ತಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಅಂಬರೀಷ್ ಭಟ್ (ಶ್ವೇತಕುಮಾರ), ರಾಧಾಕೃಷ್ಣ ಉರಾಳ್ (ತ್ರಿಪುರ ಸುಂದರಿ), ರಾಜೇಶ್ (ಪ್ರೇತ), ದೇವರಾಜ ಕರಬ (ಚಿತ್ರಗುಪ್ತ), ಸದಾನಂದ ಹೆಗಡೆ (ಯಮ), ನಿತ್ಯಾನಂದ ನಾಯಕ್ (ವೀರಭದ್ರ), ಸುರೇಶ್ ತಂತ್ರಾಡಿ (ದುರ್ಜಯ), ರಾಧಾಕೃಷ್ಣ ಬೆಳೆಯೂರು (ರಂಭೆ) ಪಾತ್ರವರ್ಗದಲ್ಲಿರುವರು. ಸುಬ್ರಾಯ ಹೆಬ್ಬಾರ್ (ಭಾಗವತ), ರಾಜೇಶ್ ಆಚಾರ್ಯ (ಮದ್ದಲೆ), ಶ್ರೀನಿವಾಸ ಪ್ರಭು (ಚೆಂಡೆ) ಸಹಕಾರ ನೀಡುವರು.

ಸ್ಥಳ: ಮನೋರಂಜಿನಿ ಸಭಾಂಗಣ, ಸಿದ್ದಿಗಣಪತಿ ದೇವಾಲಯ, ಕೆ.ಎಸ್.ಆರ್.ಟಿ.ಸಿ.ಲೇಔಟ್, ಉತ್ತರಹಳ್ಳಿ ಮುಖ್ಯರಸ್ತೆ, ಚಿಕ್ಕಲಸಂದ್ರ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT