ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಶನ ದೋಷ ಸರಿಪಡಿಸಲು ಆಗ್ರಹ

Last Updated 12 ಜನವರಿ 2012, 10:25 IST
ಅಕ್ಷರ ಗಾತ್ರ

ಮುಳಬಾಗಲು: ಮಾಸಾಶನ ಬರದೆ ನಮ್ಮ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಪಟ್ಟಣದ ವೃದ್ಧರು, ಅಂಗವಿಕಲರು ಮತ್ತು ವಿಧವೆಯರು ಮಿನಿವಿಧಾನಸೌಧ ಮುಂದೆ ಬುಧವಾರ ಧರಣಿ ನಡೆಸಿದರು.

ಕಳೆದ ತಿಂಗಳಿಂದಲೂ ಮಾಸಾಶನ ಸ್ಥಗಿತವಾಗಿದೆ. ತಕ್ಷಣ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಧರಣಿನಿರತರಿಗೆ ಬೆಂಬಲವಾಗಿ ಪುರಸಭೆ ಮಾಜಿ ಸದಸ್ಯ ಠಾಕೂರ್‌ಸಿಂಗ್ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಮ್ಮ ಹಾಗೂ ಇತರರು ಪಾಲ್ಗೊಂಡಿದ್ದರು. ವೃದ್ಧಾಪ್ಯವೇತನ. ಸಂಧ್ಯಾಸುರಕ್ಷಾ ಪಡೆಯುತ್ತಿರುವ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಜೀವನದ ನಿರ್ವಹಣೆಗೆ ಮಾಸಾಶನದ ಮೇಲೆ ಆಧಾರಪಟ್ಟಿದ್ದಾರೆ.
ಮಾಸಾಶನದ ತಾಂತ್ರಿಕ ದೋಷ ತಕ್ಷಣ ಸರಿಪಡಿಸಲು ಠಾಕೂರ್‌ಸಿಂಗ್ ಒತ್ತಾಯಿಸಿದರು.

ಮಾಸಾಶನ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ತಹಶೀಲ್ದಾರ್ ಪಿ. ಜಯಮಾಧವ ಭರವಸೆ ನೀಡಿದ ಮೇಲೆ ಧರಣಿ ವಾಪಸ್ ಪಡೆಯಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT