ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಶನ ಬೇಕಾಬಿಟ್ಟಿ ಮಂಜೂರು: ಪರಿಶೀಲನೆ

Last Updated 20 ಜನವರಿ 2011, 9:05 IST
ಅಕ್ಷರ ಗಾತ್ರ

ಕಾರಟಗಿ: ವಿಧಾನಸಭಾ ಚುನಾವಣೆ ಗಳು ಮುಗಿದು ಜನಪ್ರತಿನಿಧಿಗಳು ಆಯ್ಕೆಯಾದಾಗ ಅವರ ಕೆಲ ಅನು ಯಾಯಿಗಳು ಸಮಾಜಸೇವೆಯ ಹೆಸರಲ್ಲಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿಸಿ, ಒತ್ತಡ ಹಾಕಿಸಿ ಮಾಡಿಸುವ ಕೆಲಸಗಳಲ್ಲಿ ವಿವಿಧ ಮಾಸಾಶನಗಳು ಮೊದಲನೆ ಸ್ಥಾನದಲ್ಲಿವೆ ಎನ್ನ ಬಹುದು.
ಹೊಸದಾಗಿ ಆಯ್ಕೆಯಾದವರು ಜನಮೆಚ್ಚುಗೆ ಗಳಿಸಲು ಉತ್ಸುಕತೆ ತೋರಿಸುವುದು, ಅವರ ಹಿಂಬಾ ಲಕರು ನಾವು ಆತ್ಮೀಯರು ಎಂದು ಫೋಜು ನೀಡುವುದು.

ಇದರೊಂದಿಗೆ ಹೊರಗಿನ ಹಾಗೂ ಕಂದಾಯ ಇಲಾಖೆಯ ಕೆಲ ಮದ್ಯವರ್ತಿಗಳು ಹಣ ಮಾಡುವ ಉತ್ಸಾಹದ ಪರಿ ಣಾಮವಾಗಿ ಹಿಂದೆ ವಿವಿಧ ಮಾಶಾ ಸನಗಳು ಭರಪೂರಾಗಿ ಮಂಜೂರಾ ದವು. ಈಗ ಅವು ದುರುಪಯೋಗ ವಾಗಿವೆ, ಅನರ್ಹರಿಗೆ ತಲುಪಿವೆ, ಒಬ್ಬರೇ ಎರಡೆರಡು ಕಡೆ ಮಾಸಾಶನ ಪಡೆಯುತ್ತಿದ್ದಾರೆ. ಮೃತಪಟ್ಟವರ ಮಾಸಾಶನಗಳು ಬಟವಡೆಯಾಗುತ್ತಿವೆ ಸೇರಿದಂತೆ ಅನೇಕ ದೂರುಗಳ ಹಿನ್ನೆಲೆ ಯಲ್ಲಿ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಮಂಜೂರಾದ ಮಾಶಾಸನ ಗಳ ಪರಿಶೀಲಿಸುವ ಕಾರ್ಯ ಕಳೆದ ತಿಂಗಳಿನಿಂದ ನಡೆದಿದೆ.

ಫಲಾನುಭವಿಗಳು ತಮ್ಮ ಮಂಜೂ ರಾತಿಯ ದ್ವಿಪ್ರತಿ ಹಾಗೂ ಭಾವಚಿತ್ರ ವನ್ನು ಕಂದಾಯ ಹಾಗೂ ಅಂಚೆ ಕಛೇರಿಗೆ ಸಲ್ಲಿಸುವ ನಿಯಮವನ್ನು ಜಾರಿಗೊಳಿಸಲಾಗಿದೆ.
ಮಾಸಾಶನಗಳ ಮಂಜೂರಾತಿ ಸಮಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಬೇರೆ ಕೆಲಸಕ್ಕೂ ಆಸ್ಪದವಿರಲಿಲ್ಲ. ಇಂತಿಷ್ಟು ಮಂಜೂರು ಮಾಡಬೇಕೆಂಬ ತಾಕೀತು, ಒತ್ತಡ ಜನಪ್ರತಿನಿಧಿಗಳಿಂದ ಬಂದಿತ್ತು. ಪರಿಣಾಮವಾಗಿ ಅನೇಕ ಅನರ್ಹರು, ಹಿಂದೆ ವಿವಿಧ ಕಾರಣಕ್ಕೆ ತಿರಸ್ಕೃತ ಗೊಂಡ ಅರ್ಜಿಗಳು ಮರುಜೀವ ಪಡೆದು, ಮಂಜೂರಾತಿಯ ಯೋಗ ಪಡೆದವು.

ಈಗ ಪರಿಶೀಲನೆಯ ಕಾರ್ಯ ನಡೆ ದಿದೆ. ಇದರ ಪರಿಣಾಮ ಏನಾಗ ಬಹುದು ಎಂಬುದನ್ನು ಕಾದು ನೋಡಬೇಕಿದೆ. ಕಾರಟಗಿ ಪಟ್ಟಣದಲ್ಲಿ ವಿವಿಧ ಮಾಶಾಸನಗಳ ಫಲಾನುಭವಿ ಗಳ ವಿವರ ಹೀಗಿದೆ. ಸಂಧ್ಯಾ ಸುರಕ್ಷಾ- 550, ವೃದ್ಧಾಪ್ಯ ವೇತನ- 1,086, ವಿಧವಾ- 1,006 ಹಾಗೂ ಅಂಗವಿಕಲ- 260 ಸೇರಿದಂತೆ ಒಟ್ಟು 1, 902 ಹಾಗೂ ಬೇವಿನಾಳ ಗ್ರಾಮ ದಲ್ಲಿ ಒಟ್ಟು  280 ಫಲಾನುಭ ವಿಗಳಿದ್ದಾರೆ ಎಂದು ಗ್ರಾಮ ಲೆಕ್ಕಿಗ ಅಕ್ತರ್‌ಸಾಬ ವಿವರಿಸಿದರು.

ಇಲ್ಲಿಯ ವಿಶೇಷ ತಹಸೀಲ್ದಾರರ ಕಛೇರಿಯಲ್ಲಿ 1986ರಿಂದ ಮಂಜೂ ರಾದ ವಿವಿಧ ಮಾಸಾಶನಗಳ ವಿವರ ಹೀಗಿದೆ. ಸಂಧ್ಯಾ ಸುರಕ್ಷಾ- 2,513, ವಿಧವಾ- 2,954 ಅಂಗವಿಕಲರು- (ಶೇಕಡಾ 75ರ ಒಳಗಿನವರು) 1,120 ಹಾಗೂ (ಶೇಕಡಾ 75ರ ಮೇಲಿನವರು)- 317 ಒಟ್ಟು 6,904.ಮೇಲಿನ ಅವಧಿಯ ಮುಂಚೆ ಗಂಗಾವತಿಯ ತಹಸೀಲ್ ಕಛೇರಿ ಯಿಂದ ಮಂಜೂರಾತಿ ಪಡೆದಿವೆ.

ಅಧಿಕಾರಿಗಳನ್ನು ಕಣ್ತಪ್ಪಿಸಿ, ವೈದ್ಯರ ವರದಿಯನ್ನೂ ತಿರುಚಿ, ಮತದಾರರ ಭಾವಚಿತ್ರದಲ್ಲಿಯ ವಯಸ್ಸನ್ನು ತಿದ್ದಿ ಮಾಶಾಸನ ಪಡೆಯಲು ಆರ್ಥಿಕವಾಗಿ ಸದೃಢರಾದವರೂ ಅರ್ಜಿಗಳನ್ನು ಸಲ್ಲಿಸಿರುವುದನ್ನು, ಅವುಗಳನ್ನು ತಿರಸ್ಕರಿಸಿರುವುದನ್ನು ಪ್ರಭಾರಿ ವಿಶೇಷ ತಹಸೀಲ್ದಾರ ಶ್ರೀನಿವಾಸಮೂರ್ತಿ, ಕಂದಾಯ ನಿರೀಕ್ಷಕ ಮಹಾಂತಗೌಡ ಪ್ರಜಾವಾಣಿ ಮುಂದಿಟ್ಟರು.

ಭ್ರಷ್ಟ ವ್ಯವಸ್ಥೆಯಲ್ಲಿ, ಮಧ್ಯವರ್ತಿ ಗಳ ಹಾವಳಿಯಲ್ಲಿ ಅನೇಕ ಅರ್ಹರು ಮಾಶಾಸನ ಪಡೆಯಲು ಹರಸಾಹಸ ಪಡಬೇಕಾದ ಹಾಗೂ ಅನೇಕ ಅನರ್ಹರು ಸುಲಭವಾಗಿ ಮಾಶಾಸನ ಗಿಟ್ಟಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT