ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಶನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 20 ಅಕ್ಟೋಬರ್ 2012, 7:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಂಗವಿಕಲ, ಸಂಧ್ಯಾ, ಸುರಕ್ಷಾ, ವಿಧವೆಯರಿಗೆ ನೀಡುತ್ತಿರುವ ಮಾಸಾಶನವನ್ನು ಪ್ರತಿ ತಿಂಗಳಿಗೆ ರೂ 2 ಸಾವಿರದಂತೆ ಹೆಚ್ಚಿಸಿ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಅಂಗವಿಕಲರು, ವೃದ್ಧರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಅಂಗವಿಕಲರ, ವೃದ್ಧರ, ವಿಧವೆಯರಿಗೆ ಮಾಸಾಶನದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗಾಗಿ ಅನೇಕ ಯೋಜನೆಗಳ ಮೂಲಕ ಮಾಸಾಶನ ನೀಡುತ್ತಿದ್ದು, ಕಳೆದ ಐದಾರು ತಿಂಗಳಿನಿಂದಲೂ ಅನೇಕರಿಗೆ ಮಾಸಾಶನ ಸಮಯಕ್ಕೆ ಸರಿಯಾಗಿ ತಲುಪದೆ ತೊಂದರೆಗೊಳಗಾಗಿದ್ದಾರೆ.
 
ಸೌಲಭ್ಯ ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದ್ದು, ಇದರಲ್ಲೂ ಸಹ ರಾಜಕೀಯ ಮಾಡಲಾಗುತ್ತಿದೆ. ಭ್ರಷ್ಟರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿದು ಅಧಿಕಾರಿಗಳು ಸಹ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸಿ ಅರ್ಹರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಧ್ಯಯನದ ಹೆಸರಿನಲ್ಲಿ ದೇಶ ವಿದೇಶಗಳ ಪ್ರವಾಸಿ ಸ್ಥಳಗಳಿಗೆ ತಮ್ಮ ಕುಟುಂಬಗಳ ಸಮೇತ ಮೋಜು ಮಸ್ತಿಗಾಗಿ ಸಾರ್ವಜನಿಕರ ಹಣ ನೀರಿನಂತೆ ಖರ್ಚು ಮಾಡಲು ಸರ್ಕಾರದಲ್ಲಿ ಹಣವಿರುತ್ತದೆ. ಆದರೆ ಮಾಸಾಶನವನ್ನೇ ನಂಬಿಕೊಂಡ ಬಡವರ್ಗದ ಜನರಿಗೆ ಪ್ರತಿ ತಿಂಗಳು ನೀಡಲು ಹಣವಿಲ್ಲವೆಂದು ಹೇಳಿ ದ್ವಂದ್ವ ನೀತಿ ಅನುಸರಿಸುವ ಇಂತಹ ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಮೇಲಿರುವ ಕಾಳಜಿ ಎಂತಹುದು ಎಂದು ಗೊತ್ತಾಗುತ್ತಿದ್ದು, ಇಂತಹ ದ್ವಿಮುಖ ನೀತಿ ಬಿಟ್ಟು ಕೂಡಲೇ ಎಲ್ಲರಿಗೂ ಸಮನಾದ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದರು.

ನೆರೆಯ ಗೋವಾ ಸರ್ಕಾರ ಅಲ್ಲಿನ ಗೃಹಿಣಿಯರಿಗೆ ್ಙ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಪ್ರತಿ ತಿಂಗಳು ್ಙ  1ಸಾವಿರ ಭತ್ಯೆ ನೀಡುವ ಗೃಹ ಆಧಾರ್ ಯೋಜನೆಯನ್ನು ಜಾರಿಮಾಡಿದೆ. ಇದರಿಂದಾಗಿ ಅಲ್ಲಿನ 18 ವಯಸ್ಸು ಮೀರಿದ ವಿವಾಹಿತರಿಗೆ, ವಿಧವೆಯರಿಗೆ, ವಿಚ್ಚೇದಿತ ಮಹಿಳೆಯರಿಗೆ ಅನುಕೂಲ ಮಾಡಿದ್ದು, ಅದರಂತೆ ನಮ್ಮ ರಾಜ್ಯದಲ್ಲೂ ಸಹ ರೂ. 2ಸಾವಿರದಂತೆ ಎಲ್ಲ ಅರ್ಹ ಫಲಾನುಭವಿಗಳಿಗೂ ಜಾರಿ ಮಾಡಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಬಡವರಿಗೆ ಕೊಡಬೇಕಾದ ಮಾಸಾಶನ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವಿತರಣೆಯಾಗಬೇಕು. ಈಗಾಗಲೇ ಬಿಟ್ಟು ಹೋಗಿರುವ ಅರ್ಹ ಫಲಾನುಭವಿಗಳ ಮಾಸಾಶನದ ಬಗ್ಗೆ ಮರು ಪರಿಶೀಲಿಸಿ ಅವರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು. ಬ್ಯಾಂಕ್ ಅಧಿಕಾರಿಗಳು ಸರಿಯಾದ ಸಮಯಕ್ಕೆ ಮಾಸಾಶನ ವಿತರಣೆ ಮಾಡುತ್ತಿಲ್ಲವಾದ್ದರಿಂದ ಮೊದಲಿನಂತೆ ಗ್ರಾಮೀಣ ಅಂಚೆ ಕಚೇರಿ ಮೂಲಕವೇ ಹಣ ಸಂದಾಯ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಬೆಳಗಲ್ ಈಶ್ವರ ಸ್ವಾಮಿ, ಗುರುಸ್ವಾಮಿಗೌಡ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ,ಶಿವನಕೆರೆ ಸಿದ್ಧಬಸಪ್ಪ, ನೇರ‌್ಲಕುಂಟೆ ಬಾಬು, ಬೋರಯ್ಯ, ಡಿ. ಮೈಲಾರಿ, ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್, ರವಿಕುಮಾರ್ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT