ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಿಕ ರೂ. 70ರಿಂದ 120ಕ್ಕೆ ಏರಿಕೆ

Last Updated 17 ಜನವರಿ 2012, 9:35 IST
ಅಕ್ಷರ ಗಾತ್ರ

ಮಂಡ್ಯ: ನಗರದಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿನ ದರವನ್ನು ಪರಿಷ್ಕರಿಸಿದ್ದು, ಪರಿಷ್ಕರಣೆಯಂತೆ ಗೃಹ ಬಳಕೆ ಸಂಪರ್ಕಗಳಿಗೆ ಮಾಸಿಕ ಈಗಿನ ರೂ. 70ರ ಬದಲಾಗಿ ರೂ. 120 ಆಗಿದೆ.

ಅಂತೆಯೇ, ಗೃಹಯೇತರ ಬಳಕೆಗೆ ಮಾಸಿಕ  ರೂ. 240, ವಾಣಿಜ್ಯ/ಕೈಗಾರಿಕೆ ಬಳಕೆಗೆ ಮಾಸಿಕ ರೂ. 480 ನಿಗದಿಪಡಿಸಿದ್ದು, ಪರಿಷ್ಕೃತ ದರಗಳು ಜನವರಿ 1ರಿಂದಲೇ ಅನ್ವಯಾಗುವಂತೆ ಜಾರಿಗೆ ಬರಲಿದೆ ಎಂದು  ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಅವರ ಹೇಳಿಕೆ ತಿಳಿಸಿದೆ.

ಹುಲ್ಲಿನ ಮೆದೆ ತೆರವುಗೊಳಿಸಲು ಸೂಚನೆ: ನಗರಸಭಾ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನಗಳಲ್ಲಿ ಇರುವ ಹುಲ್ಲಿನ ಮೆದೆ ಹಾಗೂ ತಿಪ್ಪೆ ಗುಂಡಿಗಳು ನೈರ್ಮಲ್ಯಕ್ಕೆ ಕಾರಣವಾಗಿದ್ದು, ಇವನ್ನು ಜ.20ರೊಳಗೆ ತೆರವು ಗೊಳಿಸಬೇಕು.

ಇಲ್ಲವಾದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಕಾಮಗಾರಿಗೆ ಚಾಲನೆ
ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಬ್ಬನಹಳ್ಳಿ ಗ್ರಾಮ ದಲ್ಲಿ ಎಸ್‌ಇಪಿ ಯೋಜನೆಯಡಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಎ.ಬಿ.ರಮೇಶ್‌ಬಾಬು ಸೋಮವಾರ ಚಾಲನೆ ನೀಡಿ ದರು.

ಕೋಲಕಾರನದೊಡ್ಡಿ, ತಗ್ಗಹಳ್ಳಿ ಸೇರುವ ರಸ್ತೆಗೆ ಚಾಲನೆ ನೀಡಿದ್ದು, ಇತರ ರಸ್ತೆಗಳ ದುರಸ್ತಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ತಾಪಂ ಸದಸ್ಯ ಪ್ರಕಾಶ್, ಮಾಜಿ ಸದಸ್ಯ ಜಯರಾಂ, ಜೆಡಿಎಸ್‌ನ ಶಿವನಂಜು, ಸುರೇಶ್, ರಮೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT