ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಆಂದೋಲನ ನಾಳೆಯಿಂದ

Last Updated 11 ಅಕ್ಟೋಬರ್ 2011, 7:55 IST
ಅಕ್ಷರ ಗಾತ್ರ

ಬ್ಯಾಡಗಿ: ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಅಂದೋಲನ ಮತ್ತು ವಸ್ತು ಪ್ರದರ್ಶನ ಪಟ್ಟಣದ ಸಿಶ್ವರ ಕಲ್ಯಾಣ ಮಂಟಪದಲ್ಲಿ ಇದೇ 12ರಿಂದ ಮೂರು ದಿನಗಳವರೆಗೆ ನಡೆಯಲಿದೆ.

ವಾರ್ತಾ ಇಲಾಖೆ, ಹಾವೇರಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ನಡೆಯಲಿರುವ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಅಂದೋಲನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಹಾಗೂ ವಸ್ತು ಪ್ರದರ್ಶನ ಮಳಿಗೆಗಳನ್ನು ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ಸುರೇಶಗೌಡ್ರ ಪಾಟೀಲ ವಹಿಸುವರು.

ಮುಖ್ಯ ಅತಿಥಿಗಳಾಗಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಅನುಸೂಚಿತ ಜಾತಿ ಹಾಗೂ ಬುಡಕಟ್ಟು ಆಯೋಗದ ಅಧ್ಯಕ್ಷ ಹಾಗೂ ಹಾವೇರಿ ಶಾಸಕ ನೆಹರೂ ಓಲೇಕಾರ, ಶಾಸಕರಾದ ಜಿ.ಶಿವಣ್ಣ ಭಾಗವಹಿಸಲಿದ್ದಾರೆ.

ಜಿ.ಪಂ ಅಧ್ಯಕ್ಷ ಮಂಜುನಾಥ ಓಲೇಕಾರ, ಉಪಾಧ್ಯಕ್ಷೆ ಗದಿಗೆಮ್ಮ ಬಸನಗೌಡ್ರ, ತಾ.ಪಂ ಅಧ್ಯಕ್ಷ ಚನ್ನಬಸಪ್ಪ ದೇಸಾಯಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕರಿಲಿಂಗಪ್ಪನವರ, ಪುರಸಭೆ ಅಧ್ಯಕ್ಷೆ ಪಾರಮ್ಮ ಕೊಪ್ಪದ, ಉಪಾಧ್ಯಕ್ಷ ಬಸವರಾಜ ಹಂಜಿ, ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ, ಜಿ.ಪಂ. ಸಿಇಒ ಉಮೇಶ ಕುಸುಗಲ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಮುಂಜಾನೆ 10ರಿಂದ ಸಂಜೆ 5.30ರವರೆಗೆ ಛಾಯಾ ಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ, ಚಲನಚಿತ್ರ ಪ್ರದರ್ಶನ ನಡೆಯಲಿದೆ. ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.13ರಂದು ಮುಂಜಾನೆ 10.30ಕ್ಕೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ಸಂಪೂರ್ಣ ಸ್ವಚ್ಚತಾ ಅಂದೋಲನ, ತಂಬಾಕು ಸೇವನೆ ಕುರಿತು ನಡೆಯುವ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎಂ. ಜಯಾನಂದ, ಬಿ. ಗೋವಿಂದರಾಜ, ಎಸ್. ಪ್ರಕಾಶ, ಬಸವರಾಜ ಸಜ್ಜನ ಪಾಲ್ಗೊಳ್ಳುವರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತುಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ನಿಸ್ಸಿಮಗೌಡ್ರ ಅಧ್ಯಕ್ಷತೆ ವಹಿಸಲಿದ್ದು, ತಾ.ಪಂ ಅಧ್ಯಕ್ಷ ಚನ್ನಬಸಪ್ಪ ದೇಸಾಯಿ ಉಪಸ್ಥಿತರಿರುವರು. ಮಧ್ಯಾಹ್ನ 3ಕ್ಕೆ ಲಿಂಗ ತಾರತಮ್ಯ ಕುರಿತು ನಡೆಯುವ ಕಾರ್ಯಾಗಾರದಲ್ಲಿ  ಡಾ.ಈಶ್ವರ ಮಾಳೋದೆ ಹಾಗೂ ಪ್ರಭಾವತಿ ಕರ್ನಿಂಗ್ ಮಾಹಿತಿ ನೀಡುವರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸುಜಾತಾ ಕೊಟಗಿಮಠ ಅಧ್ಯಕ್ಷತೆ ವಹಿಸಲಿದ್ದು, ಪುರಸಭೆ ಅಧ್ಯಕ್ಷೆ ಪಾರ್ವ ತೆಮ್ಮ ಕೊಪ್ಪದ ಪಾಲ್ಗೊ ಳ್ಳುವರು.

ಅ.14ರಂದು ಮುಂಜಾನೆ 10.30ಕ್ಕೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಕೃಷಿ, ರಾಷ್ಟ್ರೀಯ ತೋಟ ಗಾರಿಕೆ ಅಭಿಯಾನ ಕುರಿತು ಕಾರ್ಯಾ ಗಾರ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಎಸ್.ಸಜ್ಜನ, ಕೆ.ಡಿ. ಕೊರಚರ, ಡಿ.ಎಸ್.ಮಲ್ಲಿಕಾರ್ಜು ನಪ್ಪಗೌಡ, ಚಿದಾನಂದ ಹಾಗೂ ಎಂ.ಆರ್. ಹಲಗೇರಿ ಪಾಲ್ಗೊ ಳ್ಳುವರು. ಅಧ್ಯಕ್ಷತೆಯನ್ನು ಕೃಷಿ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಭ ಕುಂದಾ ಪೂರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪುರಸಭೆ ಉಪಾಧ್ಯಕ್ಷ ಬಸವರಾಜ ಹಂಜಿ ಉಪಸ್ಥಿತರಿರುವರು ಎಂದು ಭಾರತ ಸರಕಾರದ ವಾರ್ತಾ ಶಾಖೆಯ ಜಂಟಿ ನಿರ್ದೇಶಕ ಜಿ.ಕೆ.ಪೈ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಅಗಡಿಯಲ್ಲಿ ಗ್ರಾಮ ಸ್ವಚ್ಚತಾ ಉತ್ಸವ
ಹಾವೇರಿ:
ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಇತ್ತೀಚೆಗೆ ನಡದ ಗ್ರಾಮ ಸ್ವಚ್ಛತಾ ಉತ್ಸವ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ನಿರ್ವಾಣಮಠ ಹಾಗೂ ಉಪಾಧ್ಯಕ್ಷೆ ಪಕ್ಕೀರವ್ವ ಹರಿಜನ ಬೀದಿಯಲ್ಲಿ ಕಸ ಗೂಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಾ.ಪಂ. ಸದಸ್ಯರಾದ ಗಂಗವ್ವ ಬಿದರಿ, ರತ್ನವ್ವ ಸಣ್ಮನಿ, ಕಾಳವ್ವ ಬಡಿಗೇರ, ನೀಲಮ್ಮ ರಾಮಪೂರ ಅಂಗನವಾಡಿ ಶಿಕ್ಷಕಿ ಮಲ್ಲಮ್ಮ ಕಡ್ಲಿ, ರತ್ನಾ ನೀಲಪ್ಪನವರ, ಹೇಮಾ ಅಗಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT