ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಮನರಂಜನೆ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ 86ನೇ ವರ್ಷದ ರಾಷ್ಟ್ರೀಯ ಸಮ್ಮೇಳನ `ನ್ಯಾಟ್‌ಕಾನ್ 2011~ ಈಚೆಗೆ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ಮಾಹಿತಿ ಹಾಗೂ ಮನರಂಜನೆ ಎರಡು ಇದ್ದವು. ರಾಜ್ಯದ ಹೊರಗಡೆಯಿಂದ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳು ಬೆಂಗಳೂರು ನಗರಿ, ಇಲ್ಲಿನ ಹಸಿರು, ಊಟ ಎಲ್ಲವನ್ನು ಬಹುವಾಗಿ ಮೆಚ್ಚಿಕೊಂಡರಂತೆ.

ಸಮ್ಮೇಳನದಲ್ಲಿ ನಡೆದ ವಿಚಾರಗೋಷ್ಠಿಯಿಂದ ದಣಿದಿದ್ದ ಮನಸ್ಸಿಗೆ ಸ್ವಲ್ಪ ರಿಲೀಫ್ ನೀಡಿದ್ದು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ. ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನೀಡಿದ ವೈವಿಧ್ಯಮಯ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿದವು. 

ಮನಸೂರೆಗೊಳ್ಳುವ ನೃತ್ಯಗಳು, ಮಧುರ ಕಂಠದ ಗಾಯನ, ಫ್ಯಾಷನ್ ಶೋ ಎಲ್ಲವೂ ಮುದನೀಡಿದವು. ಫ್ಯಾಷನ್ ಶೋಗೆಂದೇ ವಿದ್ಯಾರ್ಥಿಗಳೆಲ್ಲರೂ ಜತೆಗೂಡಿ, ನೂತನ ಯೋಜನೆ ರೂಪಿಸಿಕೊಂಡು, ಸಾಂಪ್ರದಾಯಿಕ ದಿರಿಸು ತೊಟ್ಟುಕೊಂಡು ರ‌್ಯಾಂಪ್‌ಮೇಲೆ ಕ್ಯಾಟ್‌ವಾಕ್ ಮಾಡಿದ್ದು ವಿಶೇಷವಾಗಿತ್ತು. ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಮೂರು ದಿನ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ವಿವಿಧೆಡೆಯಿಂದ 600ಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಇವರೆಲ್ಲರೂ ಕಾರ್ಯಾಗಾರ, ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಂಡರು. ವೈದ್ಯಕೀಯ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿಯ ನಿರ್ವಹಣೆ, ಬದಲಾದ ಸ್ಥಿತಿಗತಿಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ, ರೋಗಪತ್ತೆ ಮತ್ತು ರೋಗಿಯನ್ನು ನೋಡಿಕೊಳ್ಳಬೇಕಾದ ವಿಧಾನ ಹಾಗೂ ವೈದ್ಯಕೀಯ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳನ್ನು ಕುರಿತು ಚರ್ಚಿಸಲಾಯಿತು.

ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಸಮ್ಮೇಳನ ಹೆಚ್ಚು ಉಪಯೋಗಕಾರಿಯಾಗಿತ್ತು. ಸಮ್ಮೇಳನದಲ್ಲಿ ಚರ್ಚೆಗೊಂಡ ವಿಚಾರಗಳು ವೃತ್ತಿಗೆ ಸಂಬಂಧಿಸಿದಂತೆ ವೈದ್ಯರ ಜ್ಞಾನವನ್ನು ಹೆಚ್ಚಿಸಿದವು. ಅಲ್ಲದೇ ವೈದ್ಯಕೀಯ ಕ್ಷೇತ್ರದಲ್ಲಿ ಈಚೆಗೆ ಆಗಿರುವ ಬದಲಾವಣೆಗಳು ಹಾಗೂ ನೂತನ ಅವಿಷ್ಕಾರಗಳನ್ನು ತಿಳಿದುಕೊಳ್ಳಲು ನೆರವಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT