ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ಚಾಂದ್: ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಗೆಲುವು

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್ (ಪಿಟಿಐ): ಉನ್ಮುಕ್ತ್ ಚಾಂದ್ (40, 27ಎಸೆತ, 4ಬೌಂಡರಿ, 2 ಸಿಕ್ಸರ್) ಹಾಗೂ ಯೂಸುಫ್ ಪಠಾಣ್ (19ಕ್ಕೆ2) ಅವರ ಉತ್ತಮ ಪ್ರದರ್ಶನದ ನೆರವಿನಿಂದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಇಲ್ಲಿ ಶನಿವಾರ ತಡರಾತ್ರಿ ನಡೆದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು 52 ರನ್‌ಗಳ ಗೆಲುವು ಪಡೆಯಿತು.

ಸೂಪರ್‌ಸ್ಪೋರ್ಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 160 ರನ್ ಗಳಿಸಿತ್ತು. ಈ ಗುರಿ ಮುಟ್ಟಲು ಚಡಪಡಿಸಿದ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 108 ರನ್ ಮಾತ್ರ ಗಳಿಸಿತು.

ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣ: `ಬೌಲರ್‌ಗಳು ಸಮರ್ಥ ಪ್ರದರ್ಶನ ನೀಡಿದರಾದರೂ, ಬ್ಯಾಟಿಂಗ್‌ನಲ್ಲಿ ಅನುಭವಿಸಿದ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು~ ಎಂದು ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಸಂಕ್ಷಿಪ್ತ ಸ್ಕೋರು: ಡೆಲ್ಲಿ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 160 (ಮಾಹೇಲ ಜಯವರ್ಧನೆ 21, ವೀರೇಂದ್ರ ಸೆಹ್ವಾಗ್ 22, ಕೆವಿನ್ ಪೀಟರ್ಸನ್ 14, ಉನ್ಮುಕ್ತ್ ಚಾಂದ್ 40, ರಾಸ್ ಟೇಲರ್ 36; ಬ್ರೆಟ್ ಲೀ 19ಕ್ಕೆ1, ಲಕ್ಷ್ಮೀಪತಿ ಬಾಲಾಜಿ 61ಕ್ಕೆ2, ಜಾಕ್ ಕಾಲಿಸ್ 25ಕ್ಕೆ1, ಸುನಿಲ್ ನಾರಾಯಣ್ 21ಕ್ಕೆ3, ಪ್ರದೀಪ್ ಸಾಂಗ್ವಾನ್ 22ಕ್ಕೆ1). ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 108 (ಮನೋಜ್ ತಿವಾರಿ 33, ರಜತ್ ಭಾಟಿಯಾ 22, ಬ್ರೆಟ್ ಲೀ 13; ಇರ್ಫಾನ್ ಪಠಾಣ್ 19ಕ್ಕೆ2, ಮಾರ್ನೆ ಮಾರ್ಕೆಲ್ 25ಕ್ಕೆ2,  ಉಮೇಶ್ ಯಾದವ್ 13ಕ್ಕೆ2). ಫಲಿತಾಂಶ: ಡೆಲ್ಲಿ ಡೇರ್   ಡೆವಿಲ್ಸ್‌ಗೆ 52 ರನ್ ಜಯ. ಪಂದ್ಯ ಶ್ರೇಷ್ಠ: ಇರ್ಫಾನ್ ಪಠಾಣ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT