ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ರೈನಾ, ದೋನಿ: ಸೂಪರ್ ಕಿಂಗ್ಸ್‌ಗೆ ಪ್ಲೆಸಿಸ್ ಆಸರೆ

Last Updated 4 ಮೇ 2012, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮುರಳಿ ವಿಜಯ್ ವಿಕೆಟ್ ಬೇಗನೇ ಕಳೆದುಕೊಂಡರೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭಿಕಆಟಗಾರ ಫ್ಲಾಪ್ ಡು ಪ್ಲೆಸಿಸ್ (42, 35 ಎಸೆತ, 2ಬೌಂಡರಿ, 1ಸಿಕ್ಸರ್) ಆಸರೆಯಾದರು. ಈ ಪರಿಣಾಮ ಮಹೇಂದ್ರ ಸಿಂಗ್ ದೋನಿ ಬಳಗ ಡೆಕ್ಕನ್ ಚಾರ್ಜರ್ಸ್ ಎದುರಿನ ಐಪಿಎಲ್ ಪಂದ್ಯದಲ್ಲಿ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡ ಟಾಸ್ ಜಯಿಸಿ ಬ್ಯಾಟಿಂಗ್ ಆರಿಸಿಕೊಂಡಿತು. ಆದರೆ, ತಂಡದ ಒಟ್ಟು ಮೊತ್ತ 15 ಆಗಿದ್ದಾಗ ಮುರಳಿ ವಿಜಯ್ (14) ಅವರಿಗೆ ಪ್ರತಾಪ್ ಸಿಂಗ್ ಪೆವಿಲಿಯನ್ ಹಾದಿ ತೋರಿಸಿದರು. ಸೂಪರ್ ಕಿಂಗ್ಸ್ ನೀಡಿದ ಗೆಲುವಿನ ಗುರಿ ಬೆನ್ನು ಹತ್ತಿದ ಜಾರ್ಜರ್ಸ್ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಮೂರು ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿತ್ತು.

ಎರಡನೇ ವಿಕೆಟ್‌ಗೆ ಪ್ಲೆಸಿಸ್‌ಗೆ ಜೊತೆಯಾದ ಸುರೇಶ್ ರೈನಾ ಜೋಡಿ (32, 24 ಎಸೆತ, 2ಬೌಂ, 2ಸಿಕ್ಸರ್) ಕೇವಲ 44 ಎಸೆತಗಳಲ್ಲಿ 64 ರನ್‌ಗಳನ್ನು ಕಲೆ ಹಾಕಿತು. ದೋನಿ ಸಹ ಬಿರುಸಾಗಿಯೇ ಬ್ಯಾಟ್ ಬೀಸಿದರು. 28 ಎಸೆತಗಳಲ್ಲಿ 2 ಬೌಂಡರಿ ಸೇರಿದಂತೆ 34 ರನ್‌ಗಳನ್ನು ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಕೊನೆಯ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದ ಡ್ವೇನ್ ಬ್ರಾವೊ (ಔಟಾಗದೆ 12, 4ಎಸೆತ, 1ಸಿಕ್ಸರ್) ಸೊಗಸಾದ ಸಿಕ್ಸರ್ ಎತ್ತಿದರು. ಈ ಓವರ್‌ನಲ್ಲಿ ಒಟ್ಟು 13 ರನ್‌ಗಳು ಹರಿದು ಬಂದವು. ಇದರಿಂದ ಚೆನ್ನೈ ತಂಡಕ್ಕೆ 150 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ವೀರ್ ಪ್ರತಾಪ್ ಸಿಂಗ್ (35ಕ್ಕೆ2) ಆತಿಥೇಯ ತಂಡಕ್ಕೆ ಆರಂಭಿಕ ಆಘಾತ ಒಡ್ಡುವಲ್ಲಿ ಯಶ ಕಂಡರು.

ಸ್ಕೋರ್ ವಿವರ:

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 160
ಫಾಪ್ ಡು ಪ್ಲೆಸಿಸ್ ಸಿ ಶಿಖರ್ ಧವನ್ ಬಿ ಪ್ರತಾಪ್ ಸಿಂಗ್  42
ಮುರಳಿ ವಿಜಯ್ ಸಿ ಅಮಿತ್ ಮಿಶ್ರಾ ಬಿ ಪ್ರತಾಪ್‌ಸಿಂಗ್  14
ಸುರೇಶ್ ರೈನಾ ಸಿ ಅಭಿಷೇಕ್ ಜುಂಜನ್‌ವಾಲಾ ಬಿ ಅಮಿತ್ ಮಿಶ್ರಾ  32
ಮಹೇಂದ್ರ ಸಿಂಗ್ ದೋನಿ ಬಿ ಡೇನಿಯಲ್ ಕ್ರಿಸ್ಟಿಯನ್  34
ಅಲ್ಬಿ ಮಾರ್ಕೆಲ್ ಬಿ ಅಭಿಷೇಕ್ ಜುಂಜನ್‌ವಾಲಾ  13
ರವೀಂದ್ರ ಜಡೇಜ ಸಿ ಕುಮಾರ ಸಂಗಕ್ಕಾರ ಬಿ ಆಶಿಶ್ ರೆಡ್ಡಿ  04
ಡ್ವೇನ್ ಬ್ರಾವೊ ಔಟಾಗದೆ  12
ಎಸ್. ಬದರೀನಾಥ್ ಔಟಾಗದೆ  01
ಇತರೆ: (ಲೆಗ್ ಬೈ-5, ವೈಡ್-2, ನೋ ಬಾಲ್-1)  08
ವಿಕೆಟ್ ಪತನ: 1-15 (ವಿಜಯ್; 2.2), 2-79 (ರೈನಾ; 9.4), 3-109 (ಪ್ಲೆಸಿಸ್; 13.1), 4-124 (ಮಾರ್ಕೆಲ್; 14.6), 5-142 (ಜಡೇಜ; 18.4), 6-147 (ದೋನಿ; 19.1).
ಬೌಲಿಂಗ್ ವಿವರ: ಅಂಕಿತ್ ಶರ್ಮ 2-0-13-0, ಡೇಲ್ ಸ್ಟೈನ್ 4-0-25-0, ವೀರ ಪ್ರತಾಪ ಸಿಂಗ್ 3-0-35-2, ಡೇನಿಯಲ್ ಕ್ರಿಸ್ಟಿಯನ್ 4-0-35-1, ಅಭಿಷೇಕ್ ಜುಂಜನವಾಲಾ 3-0-13-1, ಅಮಿತ್ ಮಿಶ್ರಾ 2-0-18-1, ಆಶಿಶ್ ರೆಡ್ಡಿ 2-0-16-1.
                            ವಿವರ ಅಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT