ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡ್ ನೈಟ್... ಶಾಲಭಂಜಿಕೆ

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಂತರಂಗ, ರಂಗಶಂಕರ:  ಗುರುವಾರ ಡಾ. ಜಿ.ವಿ. ಗಣೇಶಯ್ಯ ಅವರ ಕಥೆಯನ್ನು ಆಧರಿಸಿದ `ಶಾಲಭಂಜಿಕೆ~ ಐತಿಹಾಸಿಕ ನಾಟಕ ಪ್ರದರ್ಶನ (ರಂಗರೂಪ: ಎಸ್. ಆರ್.ಗಿರೀಶ್. ವಿನ್ಯಾಸ ಮತ್ತು ನಿರ್ದೇಶನ: ಅರ್ಚನಾ ಶ್ಯಾಂ. ನಿರ್ವಹಣೆ: ಅಂಕಲ್‌ಶ್ಯಾಂ).

ಹವ್ಯಾಸಿ ರಂಗಭೂಮಿಯಲ್ಲಿ 30ವರ್ಷಗಳಿಂದ ಕ್ರಿಯಾಶೀಲವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅಂತರಂಗ ತಂಡವು ಶಾಲಭಂಜಿಕೆ ಚಾರಿತ್ರಿಕ ನಾಟಕ ಪ್ರದರ್ಶಿಸುತ್ತಿದೆ. ಇದು ಮೊದಲು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಇತಿಹಾಸದ ಗರ್ಭದಲ್ಲಿ ಅಡಗಿರುವ ಸಂಗತಿಗಳನ್ನು ಹೊರಕ್ಕೆಳೆದು, ಹೊಸ ವರ್ತಮಾನದೊಂದಿಗೆ ಬೆರೆಸಿ ಕಲಾತ್ಮಕ ವಾಗಿ ನಾಟಕವನ್ನು ಹೆಣೆಯಲಾಗಿದೆ. ಚರಿತ್ರೆಯ ಪುಟಗಳಲ್ಲಿ ಮರೆಯಾದ ಕೆಲ ಸತ್ಯಗಳನ್ನು ಹೆಕ್ಕಿ ತೆಗೆಯುವುದು ಹೊಸ ಇತಿಹಾಸ ರಚಿಸುವುದಷ್ಟೆ ಸಾಹಸ ಮಯ ಎಂಬುದನ್ನು ನಾಟಕದಲ್ಲಿ ಕಾಣಬಹುದು. ಟಿಕೆಟ್ ದರ 50ರೂ. ಮಾಹಿತಿಗೆ: 98809 140509

ಶುಕ್ರವಾರ ಇಂಡಿಯನೋಸ್ಟ್ರಂ ಥಿಯೇಟರ್ ತಂಡದಿಂದ `ಮಿಡ್‌ನೈಟ್ ಟ್ರಾವೆಲರ್~ ಬಹುಭಾಷಾ ನಾಟಕ ಪ್ರದರ್ಶನ (ನಿರ್ದೇಶನ: ಕೊಮರಾನೆ ವಾಲ್ವಾನೆ).
ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ನಿತ್ಯ ಸಂಜೆ 7.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT