ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿರಜ್- ಯಶವಂತಪುರ ರೈಲಿಗೆ ಸ್ವಾಗತ

Last Updated 9 ಅಕ್ಟೋಬರ್ 2012, 10:25 IST
ಅಕ್ಷರ ಗಾತ್ರ

ಕುಡಚಿ (ರಾಯಬಾಗ): ವಾರದಲ್ಲಿ ಮೂರು ದಿನ ಸಂಚರಿಸುವ ಮಿರಜ್- ಯಶವಂತಪುರ ರೈಲು ಕುಡಚಿ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಅದೇ ರೀತಿ ಸದರಿ ರೈಲನ್ನು ರಾಯಬಾಗ ಹಾಗೂ ಉಗಾರದಲ್ಲಿ ಸಹ ನಿಲುಗಡೆ ಮಾಡಲು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡುವುದಾಗಿ ಶಾಸಕ ಎಸ್. ಬಿ. ಘಾಟಗೆ ಹೇಳಿದರು.

ಸೋಮವಾರ ಕುಡಚಿ ರೈಲ್ವೆ ನಿಲ್ದಾಣದಲ್ಲಿ ನೂತನ ಮೀರಜ್- ಯಶವಂತಪುರ - ಮಿರಜ್ ರೈಲಿಗೆ ಪೂಜೆ ನೆರವೇರಿಸಿ ಬರಮಾಡಿಕೊಂಡು, ಬೀಳ್ಕೊಟ್ಟು ಅವರು ಮಾತನಾಡಿದರು.

ಬೆಂಗಳೂರಿನಿಂದ ಬರುವಾಗ ರಾತ್ರಿ ಸಾಧ್ಯವಾದಷ್ಟು ಬೇಗ ಯಶವಂತಪುರ ಬಿಡುವಂತೆ ಸಹ ಮನವಿ ಮಾಡಲಾಗುವುದು ಎಂದು ಶಾಸಕರಾದ ಪ್ರಕಾಶ ಹುಕ್ಕೇರಿ, ದುರ್ಯೋಧನ ಐಹೊಳೆ, ರಾಜು ಕಾಗೆ ಹೇಳಿದರು.

ವಿಧಾನಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಸಾಹೇಬಲಾಲ ರೋಹಿಲೆ, ಮಹೇಶ ಕೊರವಿ, ರಾಜು ಶಿರಗಾವಿ, ಸುಭಾಷ ಪೂಜಾರಿ, ಪರಮೇಶ್ವರ ಮುಳ್ಳೂರ, ಮುರಾರಿ ಬಾನೆ. ಈರಗೌಡ ಪಾಟೀಲ ಅರ್ಜುನ ಬಂಡಗಾರ, ದಿಲೀಪ ಜಮಾದಾರ, ಶ್ರೀನಿವಾಸ ಭಟ್, ಎ. ಎ. ಬಾಗೆ, ಸುಕುಮಾರ ಪಾಟೀಲ, ಎಸ್. ಎಸ್. ಬಾಗೇವಾಡಿ, ಸಾದಿಕ ಸಜ್ಜನ ಮತ್ತಿತರರು ಈ ಸಂದರ್ಭಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT