ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿರಿಕ್ ಝಲಕ್

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಗೆ ಸೇರಿದ ಈ ಊರಿನ ಹೆಸರು ಮಿರಿಕ್.

ಇದೊಂದು ಸಣ್ಣ ಪಟ್ಟಣ ಹಾಗೂ ಸುಂದರ ಗಿರಿಧಾಮ. ಅಲ್ಲಿ ಒಂದೂಕಾಲು ಕಿ.ಮೀ ಉದ್ದದ ಸುಮೆಂದು ಹೆಸರಿನ ಸರೋವರ ಇದೆ. ಸರೋವರದ ನಡುವೆ ನೀರು ಚಿಮ್ಮಿಸುವ ಕಾರಂಜಿಯ ಸಿಂಚನ ಮಾಡಿಸಿಕೊಂಡು ದೋಣಿ ವಿಹಾರ ಮಾಡಲು ಅವಕಾಶವೂ ಇದೆ. ಸರೋವರದ ಮೇಲೆ ಕಾಮನಬಿಲ್ಲಿನ ವಿನ್ಯಾಸದ 80 ಅಡಿ ಉದ್ದದ ಸೇತುವೆ ಇದ್ದು, ಅದರ ಮೂಲಕ ಹೂವಿನ ತೋಟಕ್ಕೆ ಹೋಗಬಹುದು.

ಸರೋವರದ ಪಶ್ಚಿಮ ಭಾಗದಲ್ಲಿ ಸಿಂಘ ದೇವಿ ಮಂದಿರ ಇದೆ. ಸರೋವರದ ಒಂದು ಭಾಗದಲ್ಲಿ ಪೈನ್ ಮರಗಳ ಸಾಲು ಕಾಣುತ್ತದೆ. ಈ ಎಲ್ಲಾ ವಿಶೇಷಗಳನ್ನು ಒಳಗೊಂಡ ಈ ಪುಟ್ಟ ಊರು ವರ್ಷವಿಡೀ ತಂಪಾಗಿರುವ ಪ್ರದೇಶ. ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಇಲ್ಲಿಗೆ ಹೆಚ್ಚು ಬರುತ್ತಾರೆ. ಬೇಸಿಗೆಯಲ್ಲಿ ಗರಿಷ್ಠ 30 ಡಿಗ್ರಿ ಸೆಂಟಿಗ್ರೇಡ್ ಮತ್ತು ಚಳಿಗಾಲದಲ್ಲಿ ಕನಿಷ್ಠ 2 ಡಿಗ್ರಿ ಸೆಂಟಿಗ್ರೇಟ್ ಉಷ್ಣಾಂಶ ಇಲ್ಲಿಯದು.

ಇಲ್ಲಿನ ರಮೀತೇ ದಾರಾ ಪಾಯಿಂಟ್‌ನಿಂದ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡಬಹುದು. ಹಾಗೆಯೇ ಡಿಯೊಸಿ ದಾರಾ ಪಾಯಿಂಟ್‌ನಿಂದ ಬೆಟ್ಟ ಗುಡ್ಡಗಳ ಅಂದವನ್ನು ಸವಿಯಬಹುದು.

ಸಿಲಿಗುರಿಯಿಂದ 55 ಕಿಮೀ, ಡಾರ್ಜಿಲಿಂಗ್‌ನಿಂದ 50 ಕಿ.ಮೀ ದೂರದಲ್ಲಿರುವ ಈ ಪುಟ್ಟ ಊರಿಗೆ  ಹೊಸ ಜಾಲ್‌ಪೈಗುರಿ ರೈಲು ನಿಲ್ದಾಣ ಮತ್ತು ಬಗ್ದೊಗ್ರ ವಿಮಾನ ನಿಲ್ದಾಣ ಹತ್ತಿರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT