ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರತಳಿ ಶಾರ್ಕ್ ಪ್ರಭೇದ ಪತ್ತೆ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಪ್ರಪಂಚದ ಮೊದಲ ಮಿಶ್ರತಳಿ ಶಾರ್ಕ್ ಮೀನನ್ನು ಪತ್ತೆಹಚ್ಚಿರುವುದಾಗಿ ಸಾಗರ ಜೀವಶಾಸ್ತ್ರ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಮತ್ತು ನ್ಯೂ ಸೌತ್ ವೇಲ್ಸ್‌ನ 2,000 ಕಿ.ಮೀ ಉದ್ದದ ಕರಾವಳಿಯಲ್ಲಿ 57 ಮಿಶ್ರ ತಳಿ ಶಾರ್ಕ್‌ಗಳನ್ನು ಗುರುತಿಸಿರುವುದಾಗಿ ಸಂಶೋಧಕರು ಹೇಳಿದ್ದಾರೆ.

ಈ ಬೃಹತ್ ಜೀವಿಗಳು ತಮ್ಮ ಉಳಿವಿಗಾಗಿ ಬದಲಾಗುತ್ತಿರುವ ವಾತಾವರಣಕ್ಕೆಒಗ್ಗಿಕೊಳ್ಳುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

 ಈ ಶಾರ್ಕ್‌ಗಳು ಕಪ್ಪು ಮೂತಿಯ ಸಾಮಾನ್ಯ ಶಾರ್ಕ್ ಮತ್ತು ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಕಪ್ಪು ಮೂತಿಯ ಶಾರ್ಕ್‌ಗಳ ಸಮ್ಮಿಲನದಿಂದ ಜನಿಸಿರಬಹುದು ಎಂದು  ಅಂದಾಜಿಸಲಾಗಿದೆ.ಈ ಎರಡೂ ಪ್ರಭೇದಗಳ ನಡುವೆ ಹೋಲಿಕೆ ಇದ್ದರೂ ತಳಿ ಸೂತ್ರಗಳಲ್ಲಿ ಸಾಕಷ್ಟು ಭಿನ್ನತೆ ಇದೆ.

ಬದಲಾಗುತ್ತಿರುವ ತಾಪಮಾನಕ್ಕೆ ಹೇಗೆ ಈ ಜೀವಿಗಳು ತಮ್ಮನ್ನು ಮಾರ್ಪಾಡು ಮಾಡಿಕೊಂಡಿವೆ ಎಂಬುದನ್ನು ಈ ಹೈಬ್ರೀಡ್ ಶಾರ್ಕ್‌ಗಳು ತೋರಿಸುತ್ತವೆ. ಈ ಪಕ್ರಿಯೆಯು ಶಾರ್ಕ್ ಮೀನುಗಳನ್ನು ಮತ್ತಷ್ಟು ಸದೃಢವನ್ನಾಗಿ ಮಾಡಲಿವೆ ಎಂದೂ ತಜ್ಞರು ಹೇಳಿದ್ದಾರೆ.

`ಮಿಶ್ರ ಶಾರ್ಕ್‌ಗಳನ್ನು ಪತ್ತೆ ಹಚ್ಚುವುದು ಬಲು ಕಷ್ಟದ ಕೆಲಸ. ಅಂತಹುದರಲ್ಲಿ ಈಗ ಅವುಗಳ ಸಂತತಿಯನ್ನೇ ಪತ್ತೆ ಹಚ್ಚಿರುವುದು ನಿಜಕ್ಕೂ ಅದ್ಭುತ ಕಾರ್ಯ. 2000 ಕಿ.ಮೀ ಉದ್ದದ ಕರಾವಳಿಯಲ್ಲಿ ಒಟ್ಟು 57 ಮಿಶ್ರ ತಳಿ ಶಾರ್ಕ್‌ಗಳನ್ನು ಪತ್ತೆ ಹಚ್ಚಿರುವುದು ಅಭೂತಪೂರ್ವ~ ಎಂದು ಕ್ವೀನ್ಸ್‌ಲ್ಯಾಂಡ್‌ನ ಪ್ರಾಥಮಿಕ ಕೈಗಾರಿಕೆ ಮತ್ತು ಮತ್ಸ್ಯೋದ್ಯಮ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆನಿಫರ್ ಒವೆನ್‌ಡೆನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT