ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ಹತ್ಯೆ: ಮೊಕದ್ದಮೆ ರದ್ದತಿಗೆ ಇಟಲಿ ಮನವಿ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ/ಕೊಚ್ಚಿ (ಪಿಟಿಐ): ಇಬ್ಬರು ಮೀನುಗಾರರನ್ನು ಗುಂಡಿಕ್ಕಿ ಕೊಂದ ನೌಕಾ ಸಿಬ್ಬಂದಿ ವಿರುದ್ಧ ದಾಖಲಿಸಿರುವ ಮೊಕದ್ದಮೆ ರದ್ದುಪಡಿಸಲು ಕೋರಿ ಇಟಲಿ ಸರ್ಕಾರವು ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

 ಈ ಮಧ್ಯೆ, ಭಾರತಕ್ಕೆ ಭೇಟಿ ನೀಡಿರುವ ಇಟಲಿ ವಿದೇಶಾಂಗ ಖಾತೆ ಉಪಸಚಿವ ಸ್ಟಫನ್ ಡೆ ಮಿಸ್ತುರಾ ಅವರು ಸತ್ಯಾಸತ್ಯೆಯ ಪರಾಮರ್ಶಿಸಿ, ಪ್ರಕರಣ ರದ್ದುಪಡಿಸಬೇಕೆಂದು ಕೋರಿದ್ದಾರೆ. ಆದರೆ ಭಾರತ ಸರ್ಕಾರಿ ಮೂಲಗಳು `ನೆಲದ ಕಾನೂನಿನ ಪ್ರಕಾರ ಮತ್ತು ನ್ಯಾಯಸಮ್ಮತ ರೀತಿ ವಿಚಾರಣೆ ನಡೆಸಲಾಗುತ್ತದೆ~ ಎಂದು ತಿಳಿಸಿವೆ.

ಮಿಸ್ತುರಾ ಭಾರತದ ವಿದೇಶಾಂಗ ರಾಜ್ಯ ಸಚಿವೆ ಪ್ರಣೀತ್ ಕೌರ್ ಅವರ ಜೊತೆ ಮಾತುಕತೆ ನಡೆಸಿದರು. ದೇಶದ ಕಾನೂನಿನನ್ವಯ ನ್ಯಾಯಸಮ್ಮತವಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೌರ್ ಸ್ಪಷ್ಟಪಡಿಸಿದ್ದಾರೆ. 

 `ಘಟನೆ ಅಂತರರಾಷ್ಟ್ರೀಯ ಜಲಗಡಿಯಲ್ಲಿ ಸಂಭವಿಸಿರುವುದರಿಂದ ಭಾರತ ಕ್ರಮ ಜರುಗಿಸುವುದು ಸರಿಯಲ್ಲ~ವೆಂದು ಮಿಸ್ತುರಾ ವಾದಿಸಿದರು ಎನ್ನಲಾಗಿದೆ.

ಘಟನೆಯ ಬಗ್ಗೆ ನಮಗೆ ವಿಷಾದವಿದೆ ಎಂದು ತಿಳಿಸಿರುವ ಅವರು ಸೂಕ್ತ ತನಿಖೆ ನಡೆಸಿದರೆ ಘಟನೆ ನಡೆದಿರುವ ಸ್ಥಳದ ನಿಖರತೆ ಗೊತ್ತಾಗುತ್ತದೆ ಎಂದಿದ್ದಾರೆ.

ಈ ನಡುವೆ, ಗುಂಡೇಟಿನಿಂದ ಸತ್ತ ಮೀನುಗಾರರ ಪೈಕಿ ಒಬ್ಬನ ಕುಟುಂಬದ ಸದಸ್ಯರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಕೋರಿದ್ದಾರೆ.

 ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಹಡಗಿನ ಮಾಲೀಕರಿಗೆ ರೂ 25 ಲಕ್ಷಗಳ ಬ್ಯಾಂಕ್ ಖಾತರಿ ಒದಗಿಸುವಂತೆ ಸೂಚಿಸಿದ್ದು, ಆವರೆಗೂ ಹಡಗನ್ನು ವಶದಲ್ಲಿ ಇಟ್ಟುಕೊಳ್ಳಬೇಕೆಂದು ಬಂದರು ಅಧಿಕಾರಿಗಳಿಗೆ ಆದೇಶಿಸಿದೆ.

ಮೃತನ ಪತ್ನಿಗೆ ನೌಕರಿ
ತಿರುವನಂತಪುರ (ಐಎಎನ್‌ಎಸ್): ಇಟಲಿ ಹಡಗಿನ ಭದ್ರತಾ ಸಿಬ್ಬಂದಿಯಿಂದ ಹತ್ಯೆಗೀಡಾದ  ಕೇರಳದ ಮೀನುಗಾರ ಗೆಲೆಸ್ಟೈನ್ ಪತ್ನಿಗೆ ಸರ್ಕಾರಿ ನೌಕರಿ ನೀಡಲು ಕೇರಳ ಸರ್ಕಾರ ಬುಧವಾರ ನಿರ್ಧರಿಸಿದೆ. ಈ ವಿಧವೆಗೆ ಮೀನುಗಾರಿಕೆ ಇಲಾಖೆಯಲ್ಲಿ ಡಿ ದರ್ಜೆ ನೌಕರಿ ನೀಡಲಾಗುವುದು ಎಂದು ಸಚಿವಾಲಯದ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕೇರಳ ಕ್ರಮ: ಸಿಎಂ ಚಾಂಡಿ
ಈ ಮಧ್ಯೆ, ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಮೀನುಗಾರರನ್ನು ಹತ್ಯೆ ಮಾಡಿದ ಇಟಲಿ ನೌಕಾ ಸಿಬ್ಬಂದಿ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ.`ಇದು ರಾಜ್ಯದ ಹಕ್ಕು ಮತ್ತು ಅಧಿಕಾರ~ ಎಂದಿದ್ದಾರೆ. ಕೇಂದ್ರ ಬೆಂಬಲ ನೀಡಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT