ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರಿಗೆ ಶೇ.1ರ ಬಡ್ಡಿ ಸಾಲ ನೀಡಿ

Last Updated 19 ಜನವರಿ 2012, 8:20 IST
ಅಕ್ಷರ ಗಾತ್ರ

ಕಾರವಾರ: ಮೀನುಗಾರಿಕೆಯೂ ಕೃಷಿ ಚಟುವಟಿಕೆಯಡಿ ಬರುತ್ತಿದ್ದು ಮೀನು ಗಾರರಿಗೂ ಶೇ. 1 ಬಡ್ಡಿದರದಲ್ಲಿ ಸಾಲ ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು  ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋ ಟಿಕರ್ ಹೇಳಿದರು.

ಇಲ್ಲಿಯ ಕೋಡಿಬಾಗದಲ್ಲಿರುವ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಮೀನುಗಾರಿಕೆ ಸರ್ವೇಕ್ಷಣಾ ಕೇಂದ್ರ ಬುಧವಾರ ಮೀನುಗಾರರಿಗೆ ಹಮ್ಮಿ ಕೊಂಡ ಕಡಲ ಮೀನುಗಾರಿಕೆ ಸಂಪ ನ್ಮೂಲಗಳು ಹಾಗೂ ಸುಸ್ಥಿರ ಬಳಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮೀನುಗಾರಿಕೆ ಬಂದರುಗಳ ಅಭಿ ವೃದ್ಧಿ ಮತ್ತು ಮೂಲಭೂತ ಸೌಲಭ್ಯ ಗಳನ್ನು ದೊರಕಿಸಲು ಒತ್ತು ನೀಡಲಾ ಗುವುದು ಎಂದ ಅವರು, ರೂ. 70 ಕೋಟಿ ವೆಚ್ಚದಲ್ಲಿ ಅಂಕೋಲಾ ತಾಲ್ಲೂ ಕಿನ ಕೇಣಿ ಮತ್ತು ಮಾಜಾಳಿ ಬಂದರು ನಿರ್ಮಿಸಲಾಗುವುದು ಎಂದರು.

ಚಿಕನ್, ಮಟನ್‌ಗಿಂತಲೂ ಮೀನಿ ನಲ್ಲಿ ಪ್ರೋಟಿನ್ ಪ್ರಮಾಣ ಹೆಚ್ಚಿರುವು ದರಿಂದ ಮೀನಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿದೆ, ಆದರೆ ಮೀನಿನ ಹಿಡುವಳಿ ಕಡಿಮೆ ಆಗುತ್ತಿದೆ ಎಂದರು.

ಮೀನಿನ ಉಪಯೋಗ ಜಾಸ್ತಿ ಆಗುತ್ತಿರುವುದರಿಂದ ಬೇಡಿಕೆಯೂ ಹೆಚ್ಚುತ್ತಿದೆ.  ಮೀನಿನ ಉತ್ಪನ್ನಗಳ ರಫ್ತು ಕೂಡ ಹೆಚ್ಚಿದೆ. ಮೀನಿನಿಂದ ಓಮೆಗಾ-3 ಎನ್ನುವ ತೈಲ ಉತ್ಪಾದನೆ ಮಾಡಲಾಗುತ್ತಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ ಎಂದರು.

ಉಡುಪಿ, ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮೀನು ಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಮೀನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನದ ಉಪಯೋಗ ಮಾಡು ತ್ತಿಲ್ಲ ಎಂದು ಸಚಿವರು ನುಡಿದರು.

ಮೀನುಗಾರರ ಸಮುದಾಯದ ಬದುಕಿಗೆ ಭದ್ರತೆ ನೀಡಲು ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಮುಖ್ಯಮಂತ್ರಿಗಳೊಡನೆ ಚರ್ಚೆ ನಡೆಸುತ್ತೇನೆ ಎಂದು ಸಚಿವ ಅಸ್ನೋಟಿಕರ್ ಭರವಸೆ ನೀಡಿದರು.

ಮೀನುಗಾರರ ಮುಖಂಡ ಪಿ.ಎಂ. ತಾಂಡೇಲ್, ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ ದರು. ಕೆಡಿಎ ಅಧ್ಯಕ್ಷ ಆರ್.ಜಿ.ನಾಯ್ಕ ವೇದಿಕೆಯಲ್ಲಿದ್ದರು.

ಭಾರತೀಯ ಮೀನುಗಾರಿಕೆ ಸರ್ವೇಕ್ಷಣಾ ಕೇಂದ್ರ ಮುಂಬೈ- ಗೋವಾ ವಲಯದ ನಿರ್ದೇಶಕ ಡಾ. ಎ.ಕೆ.ಭಾರ್ಗವ ಸ್ವಾಗತಿಸಿದರು. ವಿಜ್ಞಾನ ಕೇಂದ್ರದ ವಿ.ಎನ್.ನಾಯಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT