ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರಿಕೆಗೆ ಅವಕಾಶವಿಲ್ಲ

Last Updated 14 ಅಕ್ಟೋಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: `ಬಿಬಿಎಂಪಿ ನಿರ್ವಹಿಸುತ್ತಿರುವ ಕೆರೆಗಳಲ್ಲಿ ಇನ್ನು ಮುಂದೆ ಮೀನುಗಾರಿಕೆಗೆ ಅವಕಾಶ ನೀಡದಂತೆ ನಿರ್ಣಯವೊಂದನ್ನು ಅಂಗೀಕರಿಸಲಾಗುವುದು~ ಎಂದು ಉಪಮೇಯರ್ ಎಸ್.ಹರೀಶ್ ನುಡಿದರು.

ನಗರದ ಸರ್ಜಾಪುರ ರಸ್ತೆಯಲ್ಲಿರುವ ಕೈಕೊಂಡ್ರಹಳ್ಳಿ ಕೆರೆಯಲ್ಲಿ ಶುಕ್ರವಾರ ಮೂರು ನೀರು ಹಾವು ಮತ್ತು ಒಂದು ಕಲ್ಲು ಆಮೆಯನ್ನು ಕೆರೆಗೆ ಬಿಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮೀನುಗಾರಿಕೆ ಇಲಾಖೆಯು ವಿವಿಧ ಕೆರೆಗಳಲ್ಲಿ ಖಾಸಗಿಯವರು ಮೀನುಗಾರಿಕೆ ನೀಡಲು ಗುತ್ತಿಗೆ ನೀಡಿದೆ. ಮೀನುಗಾರರು ಬೃಹತ್ ಬಲೆಗಳನ್ನು ಕೆರೆಯಲ್ಲಿ ಅಳವಡಿಸುತ್ತಿರುವುದರಿಂದ ಹಾವು, ಆಮೆಯಂತ ಜಲಚರಗಳೂ ಆ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಇದನ್ನು ತಡೆಗಟ್ಟಲು ನಿರ್ಣಯ ಕೈಗೊಳ್ಳುವ ಸಂಬಂಧ ಮುಂದಿನ ಪಾಲಿಕೆ ಸಭೆಯಲ್ಲಿ ಚರ್ಚಿಸಲಾಗುವುದು~ ಎಂದರು.

ಬಲೆಗಳನ್ನು ಹಾಕಿ ಜಲಚರಗಳನ್ನು ಕೊಲ್ಲುವ ಪ್ರಕ್ರಿಯೆ ಒಂದೆಡೆ ನಡೆಯುತ್ತಿದ್ದರೆ ನೀವು ಅವುಗಳನ್ನೇ ಹಿಡಿದು ಅದೇ ಕೆರೆಯಲ್ಲಿ ಬಿಡುತ್ತಿದ್ದಿರಲ್ಲಾ ಎಂಬ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ ಅವರು, `ಬಿಬಿಎಂಪಿ ನಿರ್ವಹಣೆಯಲ್ಲಿರುವ ಕೆರೆಗಳಲ್ಲಿ ಇಲಾಖೆ ನೀಡಿದ ಗುತ್ತಿಗೆ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಕೆರೆಯ ಪಕ್ಕದಲ್ಲಿಯೇ ಇರುವ ಶ್ರೀ ರೇಣುಕಾ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಹರೀಶ್,  ಹಾವುಗಳು ಕಂಡುಬಂದಲ್ಲಿ ಕೂಡಲೇ ಬಿಬಿಎಂಪಿಯ ಅರಣ್ಯ ಘಟಕಕ್ಕೆ ತಿಳಿಸಬೇಕು. ಘಟಕದ ಸ್ವಯಂಸೇವಕರು ಅವುಗಳನ್ನು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುತ್ತಾರೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT