ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀರಿದ ಸಮಯ: ಅಭ್ಯರ್ಥಿಗಳ ಪ್ರತಿಭಟನೆ

Last Updated 18 ಏಪ್ರಿಲ್ 2013, 13:00 IST
ಅಕ್ಷರ ಗಾತ್ರ

ಶಿರಹಟ್ಟಿ: ನಿಗದಿತ ಸಮಯಕ್ಕೆ ಆಗಮಿಸಿದರೂ ಚುನಾವಣಾ ಅಧಿಕಾರಿ ಗಳು ತಮ್ಮ ನಾಮಪತ್ರ ಸ್ವೀಕರಿ ಸಿಲಿಲ್ಲ ಎಂದು ಆರೋಪಿಸಿ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಬುಧವಾರ ಶಿರಹಟ್ಟಿಯ ತಹಶೀಲ್ದಾರ್ ಕಾರ್ಯಾಲಯ ಮುಂದೆ ಪ್ರತಿಭಟನೆ ನಡೆಸಿದರು.

ವೇಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ವಿ. ಗಣೇಶ ವಡ್ಡರ, ಕೃಷ್ಣ ನಾಯಕ್, ಕುಬೇರಪ್ಪ ಪೂಜಾರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾ ಕೃಷ್ಣ ನಾಯಕ್ ನಾಮಪತ್ರ ಸಲ್ಲಿಸದೇ ಇರುವ ಅವಕಾಶ ವಂಚಿತ ಪಕ್ಷೇತರ ಅಭ್ಯರ್ಥಿಗಳು.

ಸಮಯಕ್ಕೆ ಸರಿಯಾಗಿ 2 ಘಂಟೆ 35 ನಿಮಿಷಕ್ಕೆ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಇದ್ದರೂ ದಾಖಲೆಗಳ ಪರಿಶೀಲನೆ ನೆಪದಲ್ಲಿ ಸಮಯವನ್ನು ವ್ಯರ್ಥ ಮಾಡಿ ನಂತರ ಸಮಯ ಮೀರಿದೆ ಎಂದು ಪೋಲಿಸರ ಮೂಲಕ ಕೊಠಡಿಯಿಂದ ನಮ್ಮನ್ನು ಹೊರ ಹಾಕಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾಮಪತ್ರಗಳು ರದ್ದಾಗಬೇಕು ಮತ್ತು ಚುನಾವಣೆಯನ್ನು ಮುಂ ದೂಡಬೇಕು. ರಾಜ್ಯ ಚುನಾವಣಾ ಆಯೋಗ ತಪ್ಪಿತಸ್ಥ ಅಧಿಕಾರಿಗಳ ವಿರು ದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳ ಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದರು.

ಸಮಯ ಮೀರಿ ಆಗಮನ:  ನಾಲ್ವರು ಪಕ್ಷೇತರ ಅಭ್ಯರ್ಥಿಗಳು ನಿಗದಿತ ಸಮಯ ಮೀರಿ ಆಗಮಿಸಿದ್ದರಿಂದ ನಾಮ ಪತ್ರವನ್ನು ಸ್ವೀಕರಿಸಲಿಲ್ಲ ಎಂದು ಚುನಾವಣಾಧಿಕಾರಿ ಟಿ. ದಿನೇಶ್ ಈ ಸಂದಭ್ದಲ್ಲಿ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT