ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿನಲ್ಲಿ 52000 ಹೆಕ್ಟೇರ್ ಬಿತ್ತನೆ ಗುರಿ

Last Updated 4 ಜೂನ್ 2011, 5:30 IST
ಅಕ್ಷರ ಗಾತ್ರ

ಜಮಖಂಡಿ: ತಾಲ್ಲೂಕಿನ 2011-12ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ನೀರಾವರಿಯ 48250 ಹೆಕ್ಟೇರ್ ಮತ್ತು ಖುಷ್ಕಿಯ 3750 ಹೆಕ್ಟೇರ್‌ಕ್ಷೇತ್ರ ಸೇರಿದಂತೆ ಒಟ್ಟು 52 ಸಾವಿರ ಹೆಕ್ಟೇರ್  ಕ್ಷೇತ್ರದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೈ.ಟಿ. ಗುಡ್ಡದ ತಿಳಿಸಿದ್ದಾರೆ.

ನೀರಾವರಿ ಆಶ್ರಯದಲ್ಲಿ 9850 ಹೆಕ್ಟೇರ್  ಕ್ಷೇತ್ರದಲ್ಲಿ ಏಕದಳ ಧಾನ್ಯ, 300 ಹೆಕ್ಟೇರ್‌ಕ್ಷೇತ್ರದಲ್ಲಿ ದ್ವಿದಳ ಧಾನ್ಯ, 2050 ಹೆಕ್ಟೇರ್ ಕ್ಷೇತ್ರದಲ್ಲಿ ಎಣ್ಣೆಕಾಳು ಬೆಳೆ ಹಾಗೂ 36050 ಹೆಕ್ಟೇರ್ ಕ್ಷೇತ್ರದಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ.

ಖುಷ್ಕಿಯಲ್ಲಿ 1550 ಹೆಕ್ಟೇರ್ ಕ್ಷೇತ್ರದಲ್ಲಿ ಏಕದಳ ಧಾನ್ಯ, 1500 ಹೆಕ್ಟೇರ್ ಕ್ಷೇತ್ರದಲ್ಲಿ ದ್ವಿದಳ ಧಾನ್ಯ ಹಾಗೂ 700 ಹೆಕ್ಟೇರ್‌ಕ್ಷೇತ್ರದಲ್ಲಿ ಎಣ್ಣೆಕಾಳು ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ.

ನೀರಾವರಿ ಆಶ್ರಯದಲ್ಲಿ ಜೋಳ(50 ಹೆ.), ಮುಸುಕಿನ ಜೋಳ(9600ಹೆ.), ಸಜ್ಜೆ(200ಹೆ), ತೊಗರಿ(100ಹೆ.), ಹೆಸರು(100ಹೆ.), ಅಲಸಂಧೆ ಹಾಗೂ ಇತರೆ (50 ಹೆ.), ಉದ್ದು(50 ಹೆ.), ಶೇಂಗಾ(250 ಹೆ.), ಸೂರ್ಯಕಾಂತಿ (300 ಹೆ.), ಸೋಯಾಅವರೆ(1500 ಹೆ.), ಹತ್ತಿ(50 ಹೆ.) ಹಾಗೂ ಕಬ್ಬು(36000ಹೆ.) ನಾಟಿ ಮಾಡಲಾಗುವುದು.

ಖುಷ್ಕಿ ಆಶ್ರಯದಲ್ಲಿ ಜೋಳ(50 ಹೆ.), ಸಜ್ಜೆ(1500ಹೆ), ತೊಗರಿ(600ಹೆ.), ಹೆಸರು(800ಹೆ.), ಅಲಸಂಧೆ ಹಾಗೂ ಇತರೆ(50ಹೆ.), ಉದ್ದು(50ಹೆ.), ಶೇಂಗಾ(200ಹೆ.), ಸೂರ್ಯಕಾಂತಿ(500ಹೆ.) ಬಿತ್ತನೆ ಮಾಡಲಾಗುವುದು.

ಸರಾಸರಿ ಮಳೆ:  ಜೂನ್ 2 ರ ಅಂತ್ಯಕ್ಕೆ ತಾಲ್ಲೂಕಿನಲ್ಲಿ ಸರಾಸರಿ 150.4 ಮಿ.ಮೀ. ಮಳೆ ಆಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೈ.ಟಿ.ಗುಡ್ಡದ ತಿಳಿಸಿದ್ದಾರೆ.

ಬಿತ್ತನೆ ಬೀಜ ವಿತರಣೆ ಕೇಂದ್ರಗಳು: 2011-12ನೇ ಸಾಲಿನ ಮುಂಗಾರು ಹಂಗಾಮಿಗೆ ರೈತರಿಗೆ ಬಿತ್ತನೆ ಬೀಜ ವಿತರಣೆಗಾಗಿ ಹೋಬಳಿಯ 3 ರೈತ ಸಂಪರ್ಕ ಕೇಂದ್ರಗಳಲ್ಲದೆ ಹೆಚ್ಚುವರಿಯಾಗಿ ಇನ್ನೂ 3 ಬೀಜ ವಿತರಣೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಹೋಬಳಿವಾರು ಹೆಚ್ಚುವರಿಯಾಗಿ ಸ್ಥಾಪಿಸಲಾಗಿರುವ 3 ಬೀಜ ವಿತರಣೆ ಕೇಂದ್ರಗಳ ಹೆಸರು ಮತ್ತು ಅವುಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಿವರಗಳು ಇಂತಿವೆ.

ತೇರದಾಳ ಹೋಬಳಿ ವ್ಯಾಪ್ತಿಯ ಮಧುರಖಂಡಿ, ಕಲ್ಹಳ್ಳಿ, ನಾವಲಗಿ, ಬಂಡಿಗಣಿ, ಜಗದಾಳ, ಯಲ್ಲಟ್ಟಿ, ಕುಲ್ಹಳ್ಳಿ ಹಾಗೂ ಹಿಪ್ಪರಗಿ ಗ್ರಾಮಗಳ ರೈತರಿಗಾಗಿ ರೈತ ಸಂಪರ್ಕ ಕೇಂದ್ರ ಜಮಖಂಡಿಯ ಬೀಜ ವಿತರಣೆ ಕೇಂದ್ರ.

ಸಾವಳಗಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಿಕ್ಕಲಕಿ, ಬಿದರಿ, ಜನವಾಡ, ಚಿಕ್ಕಪಡಸಲಗಿ, ಕವಟಗಿ, ನಾಗನೂರ, ಹಿರೇಪಡಸಲಗಿ ಹಾಗೂ ತೊದಲಬಾಗಿ ಗ್ರಾಮಸ್ಥರಿಗಾಗಿ ಚಿಕ್ಕಲಕಿ ಕ್ರಾಸ್ ಬೀಜ ವಿತರಣೆ ಕೇಂದ್ರ. ಸಾವಳಗಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗೋಠೆ, ಕಾಜಿಬೀಳಗಿ, ಕಲಬೀಳಗಿ ಹಾಗೂ ಗದ್ಯಾಳ ಗ್ರಾಮಗಳ ಗ್ರಾಮಸ್ಥರಿಗಾಗಿ ಗೋಠೆ ಬೀಜ ವಿತರಣೆ ಕೇಂದ್ರ.

ರಿಯಾಯಿತಿ ದರದಲ್ಲಿ  ಬಿತ್ತನೆ ಬೀಜ
ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯು ರಿಯಾಯಿತಿ ದರದಲ್ಲಿ ಕೆಲವು ಬಿತ್ತನೆ ಬೀಜಗಳನ್ನು  ವಿತರಣೆ ಮಾಡಲಾಗಿದೆ.

ತೊಗರಿ(ರೂ.32.50), ಉದ್ದು(ರೂ.45), ಹೆಸರು(ರೂ.40), ಅಲಸಂಧೆ(ರೂ.25), ನೆಲಗಡಲೆ (ರೂ.12), ಸೋಯಾಅವರೆ (ರೂ.12), ಸೂರ್ಯಕಾಂತಿ (ರೂ.31), ಮುಸುಕಿನ ಜೋಳ (ರೂ.18.5), ಹೈಬ್ರಿಡ್ ಜೋಳ(ಸಂಕರತಳಿ) (ರೂ.23.5) ಹಾಗೂ ಸಜ್ಜೆ(ರೂ.10.5)ಗೆ ರಿಯಾಯಿತಿ ಇದೆ.

ಸೂರ್ಯಕಾಂತಿಯ ಸಂಕರ ತಳಿಗಳ ಬೀಜಗಳಿಗೆ ರೂ.80 ರಿಯಾಯಿತಿ ನೀಡಲಾಗುವುದು. ಸಜ್ಜೆಯ ಖಾಸಗಿ ಸಂಕರ ತಳಿ ಬೀಜಕ್ಕೆ ರೂ.50 ರಿಯಾಯಿತಿ ನೀಡಲಾಗುವುದು.

ತೊಗರಿ, ಉದ್ದು, ಹೆಸರು, ಅಲಸಂಧೆ, ನೆಲಗಡಲೆ, ಸೋಯಾಅವರೆ ಬೀಜಗಳ ಸಾರ್ವಜನಿಕ ತಳಿಗಳನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಎಲ್ಲ ವರ್ಗದ ರೈತರಿಗೆ 2 ಹೆಕ್ಟೇರ್  ಜಮೀನಿಗೆ ಬೇಕಾಗುವ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು.  ಮುಸುಕಿನ ಜೋಳ, ಸೂರ್ಯಕಾಂತಿ, ಹೈಬ್ರಿಡ್ ಜೋಳ ಹಾಗೂ ಸಜ್ಜೆ ಬೆಳೆಗಳ ಸಂಕರ ತಳಿಗಳ ಬಿತ್ತನೆ ಬೀಜಗಳನ್ನು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾತ್ರ ವಿತರಿಸಲಾಗುವುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT