ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಆರಂಭ: ಬಿತ್ತನೆ ಶುರು

Last Updated 2 ಜುಲೈ 2013, 6:18 IST
ಅಕ್ಷರ ಗಾತ್ರ

ಕೆಂಭಾವಿ: ಸತತ ಮೂರು ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿ ಸಂಕಷ್ಟದ ಬದುಕು ಸಾಗಿಸಿದ ಕೆಂಭಾವಿ ವಲಯದ ರೈತ ಸಮೂಹಕ್ಕೆ ಈ ಬಾರಿಯೂ ಬರಗಾಲದ ಹೊಡೆತ ಬೀಳುವ ಲಕ್ಷಣಗಳೂ ಗೋಚರಿಸುತ್ತಿವೆ.

ಈ ಬಾರಿಯೂ ಮಳೆ ಪ್ರಮಾಣ ಸಾಕಷ್ಟಿಲ್ಲ. ಈ ಬಾರಿಯಾದರೂ ಮಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆಯಿಂದ ಮೇಲೆ ಜಮೀನನ್ನು ಹದಗೊಳಿಸಿದ್ದ ರೈತರು, ಸಾಕಷ್ಟು ಖರ್ಚು ಮಾಡಿ ಗೊಬ್ಬರ ಚೆಲ್ಲಿದ್ದಾರೆ. ಆದರೆ ಬಿತ್ತನೆಗೂ ಮುನ್ನ ಬರಬೇಕಾದ ಮೃಗಶಿರಾ ಮಳೆಯ ಮುನಿಸಿಗೆ ಪರಿಹಾರ ಎನ್ನುವಂತೆ ಇದೀಗ ಅಲ್ಲಲ್ಲಿ ಸುರಿಯುತ್ತಿರುವ ತುಂತುರು ಮಳೆ ರೈತರಿಗೆ ಸ್ವಲ್ಪ ಧೈರ್ಯ ತುಂಬುತ್ತಿದೆ.

ವಾಡಿಕೆಯಂತೆ ಇಲ್ಲಿಯವರೆಗೂ ವಲಯದಲ್ಲಿ 163ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 10 ಮಿ.ಮೀ. ಮಳೆ ಬಿದ್ದಿದ್ದು, ರೈತರು ಬಿತ್ತನೆ ಮಾಡದೆ. ಮಳೆಗಾಗಿ ಕಾಯುವಂತಾಗಿದೆ.

ಕೆಂಭಾವಿ ಹೋಬಳಿಯಲ್ಲಿ ಅತಿ ಕಡಿಮೆ ಮಳೆಯಾಗಿದೆ. ಕಳೆದ ಮೂರು ವರ್ಷಗಳಿಂದ ಹೋಬಳಿಯಲ್ಲಿ ಬರಗಾಲ ಆವರಿಸಿದೆ. ಮಳೆಗಾಲದಲ್ಲಿ ಬಿದ್ದ ಒಂದೆರಡು ಮಳೆಗಳನ್ನು ನಂಬಿ ರೈತರು ಬಿತ್ತನೆ ಮಾಡಿದ್ದು, ಇನ್ನಾದರೂ ಒಳ್ಳೆಯ ಮಳೆ ಆಗಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT