ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಮುರಿದು ಬಿದ್ದ ಧ್ವಜ ಸ್ತಂಭ:ಅಪಾಯದಿಂದ ಪಾರಾದ ಬಾಲಕ

Last Updated 16 ಆಗಸ್ಟ್ 2012, 5:55 IST
ಅಕ್ಷರ ಗಾತ್ರ

ಮುಂಡರಗಿ: ಸ್ವಾತಂತ್ರ್ಯೋತ್ಸವ ದಿನ ದಂದು ಧ್ವಜಾರೋಹಣ ಪೂರ್ವದಲ್ಲಿ ಕಬ್ಬಿಣದಿಂದ ನಿರ್ಮಿಸಿದ್ದ ಧ್ವಜ ಸ್ತಂಭ ಮುರಿದು ಬಿದ್ದಿದ್ದರಿಂದ ಧ್ವಜಾ ರೋಹಣಕ್ಕೆ ಕೆಲಕಾಲ ಅಡಚಣಿ ಯಾದ ಘಟನೆ ಮುಂಡರಗಿ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ. ಧ್ವಜವನ್ನು ಕಟ್ಟುವ ಹಗ್ಗವನ್ನು ಪೋಣಿಸಲು ಮೇಲೇರಿದ್ದ ಬಾಲಕ ಯಾವುದೇ ಅಪಾಯವಿಲ್ಲದೆ ಸುರಕ್ಷಿತ ವಾಗಿ ನೆಲಕ್ಕಿಳಿದಿದ್ದಾನೆ.

ತಾಲ್ಲೂಕು ಆಡಳಿತವು ಪ್ರತಿ ವರ್ಷದಂತೆ ಈ ವರ್ಷವೂ ಪುರಸಭೆ ಮುಂಭಾಗದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋ ತ್ಸವದ ನಿಮಿತ್ತ ಧ್ವಜಾರೋಹಣ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಮುಂಜಾನೆ ಇಡೀ ಆವರಣವನ್ನು ಶುಚಿಗೊಳಿಸಿ ಧ್ವಜ ಕಟ್ಟೆಯ ಮೇಲೆ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರವನ್ನು ಇಟ್ಟು ಪೂಜೆಗೆ ಅಣಿಗೊಳಿಸಲಾಗಿತ್ತು.

ಪೊಲೀಸ್ ಪರೇಡ್ ಮೈದಾನದ ಮುಂಭಾಗದಲ್ಲಿ ಧ್ವಜಾರೋಹಣ ಕ್ಕಾಗಿಯೇ ಒಂದು ಕಟ್ಟೆಯನ್ನು ನಿರ್ಮಿಸಲಾಗಿದ್ದು, ಕಟ್ಟೆಯ ಮೇಲೆ ಸುಮಾರು 25-30 ಅಡಿ ಕಬ್ಬಿಣದ ಧ್ವಜ ಕಂಬ (ಪೈಪ್)ವನ್ನು ನೆಡಲಾ ಗಿದೆ. ಬುಧವಾರ ಬೆಳಿಗ್ಗೆ 8.30 ಗಂಟೆಗೆ ತಾಲ್ಲೂಕು ಆಡಳಿತದ ಧ್ವಜಾ ರೋಹಣಕ್ಕಾಗಿ ಧ್ವಜವನ್ನು ಕಂಬದ ಮೇಲೆ ಏರಿಸಬೇಕಾಗಿತ್ತು.
 
ಧ್ವಜ ಕಂಬ ವನ್ನು ಏರಿ ಧ್ವಜಕ್ಕೆ ಕಟ್ಟುವ ಹಗ್ಗ ವನ್ನು ಧ್ವಜ ಕಂಬದ ತುತ್ತ ತುದಿ ಯಲ್ಲಿದ್ದ ಬಳೆಯ ಮೂಲಕ ಈಚೆಗೆ ತರಬೇಕಾ ಗಿತ್ತು. ಅದಕ್ಕಾಗಿ ಧ್ವಜಕಂಬವನ್ನು ಹತ್ತುವಂತೆ  ಸ್ಥಳದಲ್ಲಿದ್ದ ಸಿಬ್ಬಂದಿ ಧ್ವಜ ಕಂಬದ ಪಕ್ಕದಲ್ಲಿ ನಿಂತಿದ್ದ ಸುಮಾರು 10-11 ವರ್ಷಗಳ ಬಾಲಕನೆಗೆ ಸೂಚಿಸಿದ್ದಾರೆ.

ಸಿಬ್ಬಂದಿ ಅಣತೆಯಂತೆ ಪುಟ್ಟ ಬಾಲಕ ಧ್ವಜಕ್ಕೆ ಕಟ್ಟುವ ಹಗ್ಗವನ್ನು ಹಿಡಿದುಕೊಂಡು ಧ್ವಜಕಂಬದ ತುತ್ತ ತುದಿಗೆ ಏರಿದ್ದಾನೆ. ಈ ಸಂದರ್ಭದಲ್ಲಿ ಮಧ್ಯಭಾಗದಲ್ಲಿ ಸಡಿಲಗೊಂಡಿದ್ದ ಕಬ್ಬಿಣದ ಧ್ವಜಕಂಬವು ಮಧ್ಯಭಾಗ ದಲ್ಲಿ ನಿಧಾನವಾಗಿ ಬೆಂಡಾಗುತ್ತಾ ನೆಲದೆಡೆಗೆ ಬಾಗತೊಡಗಿದೆ. ಇದರಿಂದ ಆಘಾತಕ್ಕೆ ಒಳಗಾದ ಪುಟ್ಟ ಬಾಲಕ ತಕ್ಷಣ ಕೆಳಗೆ ಜಿಗಿಯದೆ ನಿಧಾನವಾಗಿ ಬಾಗುತ್ತಿದ್ದ ಧ್ವಜಕಂಬ ವನ್ನು ಹಿಡಿದುಕೊಂಡು ಧ್ವಜಕಂಬದ ಗುಂಟ ನೆಲಕ್ಕಿಳಿದು ನೆಲ ಸಮೀಪಿಸು ತ್ತಿದ್ದಂತೆಯೆ ಕೆಳಗೆ ಜಿಗಿದಿದ್ದಾನೆ.

 ಕ್ಷಣಾರ್ಧದಲ್ಲಿ ಸಂಭವಿಸಿದ ಈ ಘಟನೆಯಿಂದ ಪೊಲೀಸ್ ಪರೇಡ್ ಮೈದಾನದಲ್ಲಿ ಬೆಳಿಗ್ಗೆ ಧ್ವಜಾ ರೋಹಣಕ್ಕಾಗಿ ನೆರೆದಿದ್ದ ಪಟ್ಟಣದ ಹಲವಾರು ಶಾಲಾ ಕಾಲೇಜುಗಳ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿ ಯರು, ಶಿಕ್ಷಕ ಸಮುದಾಯ ಹಾಗೂ ಸಾರ್ವಜನಿಕರು ತಕ್ಷಣ ಕೆಲವು ಕಾಲ ಆಘಾತಕ್ಕೆ ಒಳಗಾದರು. ಅಪಘಾತ ಸಂಭವಿಸುತ್ತಿದ್ದಂತೆಯೆ ಸಮಯ ಪ್ರಜ್ಞೆಯನ್ನು ಮೆರೆದ ಬಾಲಕ ಸಂಭವಿ ಸಬಹುದಾಗಿದ್ದ ಅಪಘಾತದಿಂದ ಪಾರಾಗಿದ್ದಾನೆ.

ನಂತರ ಆವರಣದಲ್ಲಿ ನೆರದಿದ್ದ ವಿವಿಧ ಇಲಾಖೆಗಳು ಸಿಬ್ಬಂದಿಯ ವರು ತಕ್ಷಣ ಮುರಿದು ತುಂಡಾಗಿದ್ದ ಅರ್ಧ ಧ್ವಜಕಂಬವನ್ನು ದುರಸ್ಥಿ ಗೊಳಿಸಿ ಧ್ವಜಾರೋಹಣಕ್ಕೆ ವ್ಯವಸ್ಥೆ ಮಾಡಿದರು.ನಂತರ ಯಥಾ ರೀತಿ ಸ್ವಾತಂತ್ರ್ಯೋ ತ್ಸವದ ಎಲ್ಲ ಕಾರ್ಯ ಕ್ರಮಗಳು ಸುಗಮವಾಗಿ ಜರುಗಿದವು. ಧ್ವಜಾ ರೋಹಣ ಪೂರ್ವದಲ್ಲಿ ಧ್ವಜ ಕಂಬ ಮುರಿದು ಬಿದ್ದಿದ್ದಕ್ಕೆ ತಹಶೀಲ್ದಾರ ಎ.ಟಿ.ನರೇಗಲ್ಲ ತಮ್ಮ ಭಾಷಣದಲ್ಲಿ ತೀವ್ರ ವಿಷಾದ ವ್ಯಕ್ತಪಡಿಸಿದರು.

ಯಾವಗಲ್: ಜೋಡಿ ರಥೋತ್ಸವ ಇಂದು 
ನರಗುಂದ: ಸಮೀಪದ ಯಾವಗಲ್ ಗ್ರಾಮದಲ್ಲಿ ಇದೇ ದಿ.16ರಂದು ಸಂಜೆ 5 ಗಂಟೆಗೆ ವೀರಭದ್ರೇಶ್ವರ ಹಾಗೂ ಬಸವೇಶ್ವರ ಜೋಡಿ ರಥೋತ್ಸವ ನಡೆ ಯಲಿದೆ. ರಾತ್ರಿ 10.30ಕ್ಕೆ ಸ್ಥಳೀಯ ಕಲಾವಿದರಿಂದ ಕೃಷ್ಣಾರ್ಜುನರ ಕಾಳಗ ದೊಡ್ಡಾಟ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಭೆ ಇಂದು: ಪಟ್ಟಣದ ನರಗುಂದ  ಬಾಬಾಸಾಹೇಬ ಕೋ-ಆಫ್ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಮಹಾಸಭೆ  ಇದೇ 16ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಜಿ.ಬಿ.ಕುಲಕರ್ಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT