ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಾಜೆಯ ಯಂಗ್ ಚಾಲೆಂಜರ್‍ಸ್

Last Updated 3 ಅಕ್ಟೋಬರ್ 2012, 7:30 IST
ಅಕ್ಷರ ಗಾತ್ರ

ಸುಮಾರು 4000 ಜನಸಂಖ್ಯೆ ಇರುವ ಪುಟ್ಟ ಗ್ರಾಮ ಮುಂಡಾಜೆ. ಬೆಳ್ತಂಗಡಿ ತಾಲ್ಲೂಕಿನ ಈ ಚಿಕ್ಕ ಗ್ರಾಮ ಇಂದು ರಾಜ್ಯ ಮಟ್ಟದಲ್ಲಿ ಪರಿಚಿತ. ಅದಕ್ಕೆ ಪ್ರಮುಖ ಕಾರಣ ಯಂಗ್ ಚಾಲೆಂಜರ್ಸ್‌ ಕ್ರೀಡಾ ಸಂಘ.

1989 ಅಕ್ಟೋಬರ್ 25ರಂದು ನಾಮದೇವ್ ರಾವ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ಈ ಕ್ರೀಡಾ ಸಂಘಕ್ಕೀಗ 23ರ ಹರೆಯ. ಸುಮಾರು 150 ಮಂದಿ ಸದಸ್ಯರನ್ನು ಒಳಗೊಂಡಿರುವ ಈ ಕ್ರೀಡಾ ಸಂಘ 60ಮಂದಿ ಸದಸ್ಯರ ಸಾಂಸ್ಕೃತಿಕ ತಂಡವನ್ನು ಒಳಗೊಂಡಿದೆ. ಈಗಾಗಲೇ ಈ ತಂಡ ಬೆಳ್ತಂಗಡಿಯಿಂದ ಬೆಂಗಳೂರಿನವರೆಗೆ ಸುಮಾರು 35ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಅನೇಕ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಇಲ್ಲಿ ಕ್ರೀಡಾಸಕ್ತ ಯುವಕರಿಗೆ ಪರಿಣಿತರಿಂದ ತರಬೇತಿ ಸಹ ನೀಡಲಾಗುತ್ತದೆ. ಯುವಕರಿಗೆ ವ್ಯಾಯಾಮಕ್ಕಾಗಿ ಸುಸಜ್ಜಿತ ಜಿಮ್ ವ್ಯವಸ್ಥೆಯೂ ಇಲ್ಲಿದೆ. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ ಮಟ್ಟ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ, ಪ್ರಸ್ತುತ ಜಯರಾಮ ಅವರು ಈ ಕ್ರೀಡಾಸಂಘದ ಅಧ್ಯಕ್ಷರಾಗಿದ್ದು, ಸಂಘವು ಎರಡು ಬಾರಿ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಏರ್ಪಡಿಸಿದೆ. ಅಲ್ಲದೇ ಪ್ರತೀ ವರ್ಷವೂ ಗ್ರಾಮದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಅವರ ವಿದ್ಯಾಭ್ಯಾಸದ ಪೂರ್ಣ ಖರ್ಚನ್ನು ಸಂಘವೇ ನೋಡಿಕೊಳ್ಳುತ್ತದೆ.
ಒಟ್ಟಿನಲ್ಲಿ ಯಂಗ್ ಚಾಲೆಂಜರ್ಸ್‌ ತನ್ನ ಉತ್ತಮವಾದ ಕೆಲಸ ಕಾರ‌್ಯಗಳೊಂದಿಗೆ ಇತರರಿಗೆ ಮಾದರಿಯಾಗುವಂತೆ ಸಾಧನೆಯ ಹಾದಿಯಲ್ಲಿ ಮುಂದುವರಿಯುತ್ತಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT