ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಕಾರ್ಯತಂತ್ರ: ಶನಿವಾರ ಅಣ್ಣಾ ತಂಡದ ಸಭೆ

Last Updated 9 ಸೆಪ್ಟೆಂಬರ್ 2011, 9:25 IST
ಅಕ್ಷರ ಗಾತ್ರ

 ಮುಂಬೈ (ಪಿಟಿಐ): ಟೀಮ್ ಅಣ್ಣಾ ತಂಡದ ಪ್ರಮುಖ ಸದಸ್ಯರ ಎರಡು ದಿನಗಳ ಸಭೆ ಶನಿವಾರ ಅವರ ಗ್ರಾಮ ರಾಳೇಗಣ ಸಿದ್ಧಿಯಲ್ಲಿ ಆರಂಭವಾಗಲಿದೆ.

~ಅರವಿಂದ ಕೇಜ್ರಿವಾಲ್ ಅವರು ಈದಿನ ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿದ್ದು, ಕಿರಣ್ ಬೇಡಿ ಮತ್ತು ಪ್ರಶಾಂತ ಭೂಷಣ್ ಅವರು ಶನಿವಾರ ಬೆಳಗಿನ ವೇಳೆಗೆ ತಲುಪಲಿದ್ದಾರೆ~ ಎಂದು ಹಜಾರೆ ನಿಕಟವರ್ತಿ ದತ್ತ ಅವರಿ ಪಿಟಿಐಗೆ ರಾಳೇಗಣ ಸಿದ್ಧಿಯಿಂದ ದೂರವಾಣಿ ಮೂಲಕ ತಿಳಿಸಿದರು.

ತಮ್ಮ ತಂಡದ ಸದಸ್ಯರನ್ನು ಗುರಿಯಾಗಿರಿಸಿಕೊಂಡ ಸರ್ಕಾರ ನಡೆಸುತ್ತಿರುವ ದಾಳಿಗಳ ಬಗ್ಗೆ ಹಜಾರೆ ಅವರು ತಮ್ಮ ಅಸಮಾಧಾನವನ್ನು ಹೊರಗೆಡಹಿದ ಹಿನ್ನೆಲೆಯಲ್ಲಿ ಈ ಸಭೆ ನಡೆಯುತ್ತಿದೆ.

ಬೇಡಿ, ಭೂಷಣ್ ಮತ್ತು ಕೇಜ್ರಿವಾಲ್ ಅವರಿಗೆ ಹಕ್ಕುಚ್ಯುತಿ ನೋಟಿಸ್ ನೀಡಲಾಗಿದ್ದರೆ, ಕೇಜ್ರಿವಾಲ್ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದಲೂ ನೋಟಿಸ್ ಜಾರಿ ಮಾಡಲಾಗಿದೆ.

ಕೇಂದ್ರ ಸರ್ಕಾರದಿಂದ ನೀಡಲಾಗಿರುವ ನೋಟಿಸ್ ಸೇರಿದಂತೆ ಪ್ರಸ್ತುತ ವಿಷಯಗಳ
ಬಗ್ಗೆ ಚರ್ಚಿಸಿ, ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧರಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಸೆಪ್ಟೆಂಬರ್ 2ರಂದು ರಾಳೇಗಣ ಸಿದ್ಧಿಯಲ್ಲಿ ಗ್ರಾಮಸಭೆಯಲ್ಲಿ ಮಾತನಾಡುತ್ತಾ ಕೇಂದ್ರದ ಯುಪಿಎ ಸರ್ಕಾರದ ಮೇಲೆ ಹರಿಹಾಯ್ದಿದ್ದ ಅಣ್ಣಾ ಹಜಾರೆ, ಸರ್ಕಾರದ ಅರ್ಧದಷ್ಟು ಮಂದಿ ~ಸುಳ್ಳುಗಾರರು~ ಎಂದು ಟೀಕಿಸಿದ್ದರು.

ಕೇಂದ್ರ ಸಚಿವ ಚಿದಂಬರಂ ಅವರನ್ನು ~ಕಿಡಿಗೇಡಿ~ ಎಂದು ಬಣ್ಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT