ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮುಂದಿನ ಬಜೆಟ್‌ನಲ್ಲಿ ಮಠಗಳಿಗೆ ಅನುದಾನ'

Last Updated 15 ಜುಲೈ 2013, 3:56 IST
ಅಕ್ಷರ ಗಾತ್ರ

ಸಿರುಗುಪ್ಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ದಿನಗಳ ಬಜೆಟ್‌ನಲ್ಲಿ ಮಠ-ಮಾನ್ಯಗಳಿಗೆ ಸರ್ಕಾರದ ಅನುದಾನ ನೀಡುವ ಬಗ್ಗೆ ಪರಿಗಣಿಸಬಹುದು ಎಂದು ಉಡುಪಿಯ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳು ಆಶಯ ವ್ಯಕ್ತಪಡಿಸಿದರು.

2014 ಜನವರಿ 18 ರಂದು ಉಡುಪಿಯಲ್ಲಿ ನಡೆಯುವ ಪರ್ಯಾಯ ಮಹೋತ್ಸವದ ಪೂರ್ವ ಸಿದ್ಧತೆಗಾಗಿ ಪಟ್ಟಣಕ್ಕೆ ಭಾನುವಾರ ಆಗಮಿಸಿದ್ದ ಶ್ರೀಗಳು, ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದರು.

ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಮಠಗಳಿಗೆ ಅನುದಾನ ನೀಡದಿರುವ ಬಗ್ಗೆ ಗಮನಸೆಳೆದಾಗ, ಮಠಗಳು ಅನುದಾನ ಬೇಕು ಅಂತಾ ಅರ್ಜಿ ಸಲ್ಲಿಸಿದರೆ ಮಾತ್ರ ಸರ್ಕಾರ ಕೊಡಬಹುದು ಎಂಬುದನ್ನು ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಶ್ರೀಗಳು ಈ ವಿಷಯದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

`ಇಲ್ಲಿಯ ಭಕ್ತರು ಉಡುಪಿಯ ಮಠದ ಮೇಲೆ ಅಪಾರ ಭಕ್ತಿಯುಳ್ಳವರಾಗಿದ್ದಾರೆ, ನಮಗೆ ಭವ್ಯವಾದ ಸ್ವಾಗತ ನೀಡಿ ಭಕ್ತಿಯನ್ನು ಅರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ. ಮುಂದಿನ ಪರ್ಯಾಯ ಮಹೋತ್ಸವಕ್ಕೆ ಈ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದೇವೆ' ಎಂದರು.

ಶತಾಯುಷಿಗೆ ಆಶೀರ್ವಾದ: ಪಟ್ಟಣದ ನಿವಾಸಿ ಬಲಕುಂದಿ ಸಣ್ಣಪ್ಪಶೆಟ್ಟಿ ಅವರಿಗೆ 100ರ ಸಂಭ್ರಮ. ಅವರು ಕುಟುಂಬದೊಂದಿಗೆ ಭಾನುವಾರ 100ನೇ ವರ್ಷದ ಜನ್ಮದಿನವನ್ನು ಜನ್ಮದಿನವನ್ನು ಆಚರಿಸಿಕೊಂಡರು. ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳು ಶತಾಯುಷಿ ಸಣ್ಣಪ್ಪಶೆಟ್ಟಿ ಅವರಿಗೆ ಆಶೀರ್ವದಿಸಿದರು.

ಸಂಸ್ಥಾನ ಪೂಜೆ: ಪಟ್ಟಣದ ಶ್ರೀನಿವಾಸ- ಆಂಜಿನೇಯ- ಶನೈಶ್ವರ ದೇವಸ್ಥಾನದಲ್ಲಿ ಭಾನುವಾರ ಶ್ರೀಪಾದಂಗಳು ಸಂಸ್ಥಾನ ಪೂಜೆ ನೆರವೇರಿಸಿದರು. ಬಲಕುಂದಿ ಕುಟುಂಬದವರು ಶ್ರೀಗಳಪಾದ ಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.

ಬಲಕುಂದಿ ಲಿಂಗಣ್ಣಶೆಟ್ಟಿ, ಎಚ್.ಜೆ. ಹನುಮಂತಯ್ಯಶೆಟ್ಟಿ, ಬಿ. ರಾಜಶೇಖರಶೆಟ್ಟಿ, ಮುತ್ತಾಲಯ್ಯಶೆಟ್ಟಿ, ಅರ್ಚಕ ಎಚ್. ವೆಂಕಟೇಶ್‌ಆಚಾರ್, ಜೆ. ನರಸಿಂಹಮೂರ್ತಿ, ಡಿ. ಮಂಜುನಾಥಶೆಟ್ಟಿ, ಪಿ. ಮಲ್ಲಿಕಾರ್ಜುನ ಮತ್ತು ವಿಪ್ರ ಸಮಾಜದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT