ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷದಿಂದ ಮೆಟಾ ವಿ.ವಿ ಆರಂಭ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಕೋರ್ಸ್‌ನ ಕಟ್ಟುಪಾಡಿಲ್ಲದೆ ಯಾವೊಬ್ಬ ವಿದ್ಯಾರ್ಥಿ ತನ್ನಿಚ್ಛೆಯ ಪದವಿ ಪಡೆಯಲು ಅವಕಾಶ ಕಲ್ಪಿಸುವ ಅಂತರಜಾಲ ಆಧಾರಿತ ಮೆಟಾ ವಿಶ್ವವಿದ್ಯಾಲಯಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿವೆ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.

ಅಮೆರಿಕ- ಭಾರತ ವಾಣಿಜ್ಯ ಪರಿಷತ್ತು ಜ್ಞಾನ ಸಂಯೋಗ ಕುರಿತು ಶುಕ್ರವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಲವಾರು ವಿಶ್ವವಿದ್ಯಾಲಯಗಳು ಸೇರಿ ಈ ಮೆಟಾ ವಿ.ವಿ ರೂಪುಗೊಳ್ಳಲಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಇಚ್ಛೆಪಟ್ಟರೆ ಸಾಹಿತ್ಯದಲ್ಲಿ ಪದವಿ ಪಡೆಯಲು ಈ ವಿ.ವಿ ಅನುವು ಮಾಡಿಕೊಡುತ್ತದೆ ಎಂದರು.

ಈಗ ಈ ಪರಿಕಲ್ಪನೆಯ ಬಗ್ಗೆ ಏನೆಲ್ಲಾ ಶಂಕೆಗಳು ಇರಬಹುದು. ಆದರೆ ಭವಿಷ್ಯದಲ್ಲಿ ಇವು ಸಾಂಪ್ರದಾಯಿಕ ವಿ.ವಿ ಗಳನ್ನು ಹಿಂದಕ್ಕೆ ಸರಿಸಲಿವೆ ಎಂದು ಭವಿಷ್ಯ ನುಡಿದರು.

ಶಿಕ್ಷಣದ ಸ್ವರೂಪವನ್ನು ಜಾಗತೀಕರಣಗೊಳಿಸಬೇಕೆಂಬುದು ಎಲ್ಲರ ಅಪೇಕ್ಷೆಯಾಗಿದೆ ಎಂದ ಸಿಬಲ್, ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ಮಸೂದೆಗೆ ಶೀಘ್ರವೇ ಅಂಗೀಕಾರ ದೊರೆಯಲಿದೆ ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT