ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮುಂಗಾರು

Last Updated 16 ಜುಲೈ 2013, 9:41 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಸೋಮವಾರ ಸಾಧಾರಣ ಮಳೆ ಸುರಿದಿದೆ. ವಾಡಿಕೆ ಮಳೆಗಿಂತ ಈ ಬಾರಿ ದಾಖಲೆ ಪ್ರಮಾಣದಲ್ಲಿ ಅಧಿಕ ಮಳೆ ಸುರಿದಿದೆ.

ಮಡಿಕೇರಿ, ಭಾಗಮಂಡಲ, ಶ್ರೀಮಂಗಲ, ನಾಪೋಕ್ಲು, ಶಾಂತಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಹಾರಂಗಿ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ  ನೀರನ್ನು ಹೊರಬಿಡಲಾಗುತ್ತಿದೆ. ಇದನ್ನು ವೀಕ್ಷಿಸಲು ಜಲಾಶಯದ ಬಳಿ ಸಾವಿರಾರು ಜನ ಪ್ರವಾಸಿಗರ ದಂಡು ದಿನನಿತ್ಯ ಆಗಮಿಸುತ್ತಿದೆ.

ಮಡಿಕೇರಿಯಲ್ಲೂ ಸೋಮವಾರ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ಆರಂಭವಾದ ಮಳೆ ದಿನವಿಡೀ ಹಾಗೆಯೇ ಮುಂದುವರೆದಿದೆ. ಮಧ್ಯಾಹ್ನದ ಸುಮಾರಿಗೆ ಕೊಂಚ ಮಳೆ ಕಡಿಮೆಯಾಗಿದ್ದು, ಮಂಜು ಕವಿದ ವಾತಾವರಣವಿತ್ತು.

ಸೋಮವಾರದ ಮಳೆ ವಿವರ
ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8ಗಂಟೆ ಅವಧಿ ಅಂತ್ಯಗೊಂಡಂತೆ 24 ಗಂಟೆಯಲ್ಲಿ 13.55 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 1513.51 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 708.76 ಮಿ.ಮೀ ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 21.55 ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 13.28 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 5.83 ಮಿ.ಮೀ. ಮಳೆ ದಾಖಲಾಗಿದೆ.

ಹೋಬಳಿವಾರು ಮಳೆ: ಮಡಿಕೇರಿ ಕಸಬಾ 22.6 ಮಿ.ಮೀ., ನಾಪೋಕ್ಲು 8.8 ಮಿ.ಮೀ., ಸಂಪಾಜೆ 20.4 ಮಿ.ಮೀ., ಭಾಗಮಂಡಲ 34.4 ಮಿ.ಮೀ., ವೀರಾಜಪೇಟೆ ಕಸಬಾ 9.8 ಮಿ.ಮೀ., ಹುದಿಕೇರಿ 24.1 ಮಿ.ಮೀ., ಶ್ರಿಮಂಗಲ 17.4 ಮಿ.ಮೀ., ಪೊನ್ನಂಪೇಟೆ 8.4 ಮಿ.ಮೀ., ಅಮ್ಮತ್ತಿ 6 ಮಿ.ಮೀ., ಬಾಳಲೆ 14 ಮಿ.ಮೀ., ಸೋಮವಾರಪೇಟೆ ಕಸಬಾ 4.6 ಮಿ.ಮೀ., ಶನಿವಾರಸಂತೆ 4 ಮಿ.ಮೀ., ಶಾಂತಳ್ಳಿ 13.2 ಮಿ.ಮೀ., ಕುಶಾಲನಗರ 3.2 ಮಿ.ಮೀ., ಸುಂಟಿಕೊಪ್ಪ 10 ಮಿ.ಮೀ. ಮಳೆಯಾಗಿದೆ. 

ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2855.65 ಅಡಿಗಳು, ಕಳೆದ ವರ್ಷ ಇದೇ ದಿನ 2825.73 ಅಡಿ ನೀರಿತ್ತು. ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 5.2 ಮಿ.ಮೀ. ಮಳೆಯಾಗಿದೆ. ಜಲಾಶಯಕ್ಕೆ ಇಂದಿನ ನೀರಿನ ಒಳ ಹರಿವು 6586 ಕ್ಯೂಸೆಕ್ ಆಗಿದೆ. ಇಂದಿನ ನೀರಿನ ಹೊರ ಹರಿವು ನದಿಗೆ 5288 ಕ್ಯೂಸೆಕ್, ನಾಲೆಗೆ 813 ಕ್ಯೂಸೆಕ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT