ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರೆದ ಜೆಎಸ್ಎಸ್‌ ಕ್ರೀಡಾಳುಗಳ ಪ್ರಾಬಲ್ಯ

ಮುಂದುವರೆದ ಜೆಎಸ್ಎಸ್‌ ಕ್ರೀಡಾಳುಗಳ ಪ್ರಾಬಲ್ಯ
Last Updated 7 ಡಿಸೆಂಬರ್ 2013, 8:14 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 63ನೇ ಅಂತರ್‌ ಕಾಲೇಜು ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಎರಡನೇ ದಿನವಾದ ಶುಕ್ರವಾರವೂ ಯಾವುದೇ ನೂತನ ದಾಖಲೆಗಳು ಸೃಷ್ಟಿಯಾಗಲಿಲ್ಲ. ಆದರೆ, ಜೆಎಸ್‌ಎಸ್‌ ಕಾಲೇಜು ತನ್ನ ಚಿನ್ನದ ಬೇಟೆಯನ್ನು ಮುಂದುವರೆಸಿದ್ದು, ಶುಕ್ರವಾರ ಮತ್ತೆ ಐದು ಚಿನ್ನದ ಪದಕಗಳನ್ನು ಬಾಚಿಕೊಂಡು ಒಟ್ಟಾರೆ 9 ಚಿನ್ನ­ದೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.

ಕರ್ನಾಟಕ ಕಾಲೇಜು 3 ಚಿನ್ನ ಪಡೆಯುವ ಮೂಲಕ ಆರು ಚಿನ್ನದ ಪದಕದೊಂದಿಗೆ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಮಹಿಳಾ ಜಾವೆಲಿನ್‌ ಥ್ರೋ ಹಾಗೂ ಪುರುಷರ ಟ್ರಿಪಲ್‌ ಜಂಪ್‌ನಲ್ಲಿ ದಾಖಲೆ ಮುರಿಯುವ ಭರವಸೆ ಕಾಣಿಸಿತಾದರೂ ಅದು ಯಶಸ್ವಿಯಾಗಲಿಲ್ಲ.

ಫಲಿತಾಂಶ; ಪುರುಷರ ವಿಭಾಗ: 1000 ಮೀಟರ್‌ ಓಟ: ಪರಸಪ್ಪ ಹಳಿಜೋಳ, ಕರ್ನಾಟಕ ಕಲಾ ಕಾಲೇಜು–1; ಕೆ.ಎಸ್‌.ದೊನ್ನಿ, ಕೆಎಲ್‌ಇ ಸಂಸ್ಥೆಯ ಕಲಾ, ವಾಣಿಜ್ಯ ಕಾಲೇಜು, ಗದಗ–2; ಅಶೋಕ ಯಲ್ಲಪ್ಪ ತೋಟದ, ಕೆಎಸ್‌ಎಸ್‌ ಸಂಸ್ಥೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಗದಗ–3.

110 ಮೀಟರ್‌ ಹರ್ಡಲ್ಸ್‌: ಸಿದ್ಧಾಂತ ಮಗದುಂ, ಕರ್ನಾಟಕ ಕಲಾ ಕಾಲೇಜು, ಧಾರವಾಡ–1; ಜಿ.ವಿನಾಯಕ, ಎಸ್‌ಡಿಎಂ ಕಾಲೇಜು, ಹೊನ್ನಾವರ–2; ನಾಗರಾಜ ಜಿ. ನಾಯ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾವರ–3

1500 ಮೀಟರ್‌ ಓಟ: ರವಿ ಎನ್.ಬಂಡಿವಡ್ಡರ, ಜೆಎಸ್‌ಎಸ್‌ ಬನಶಂಕರಿ, ಎಸ್‌.ಕೆ.ಗುಬ್ಬಿ ಕಾಲೇಜು–1; ಲಿಂಗರಾಜ ಹಳಿಯಾಳ, ಕೆಸಿಡಿ, ಧಾರವಾಡ–2; ತಿರುಪತಿ ಬಿ.ಧನವಾಡೆ, ಎಸ್‌ಕೆವಿಪಿ ಸಮಿತಿಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಹೊಳೆಆಲೂರು–3

400 ಮೀಟರ್‌ ಓಟ: ಗಣೇಶ ನಾಯ್ಕ, ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಯುಜಿ ಅಂಡ್‌ ಪಿಜಿ ಸಂಸ್ಥೆ–1; ಸಂಜು ಫೆರ್ನಾಂಡೀಸ್‌, ಎಸ್‌ಡಿಎಂ ಕಾಲೇಜು, ಹೊನ್ನಾವರ–2; ಪ್ರವೀಣ ಕೆ.ಲಮಾಣಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರೇಕೆರೂರ–3

ಜಾವೆಲಿನ್‌ ಥ್ರೋ: ಗಣೇಶ ಗೌಡ, ಪಿಜಿ ಜಿಮ್ಖಾನಾ, ಧಾರವಾಡ–1; ರಾಜೀವ ಹೆಗ್ಡೆ, ಎಂ.ಎಂ. ಕಲಾ, ವಿಜ್ಞಾನ ಕಾಲೇಜು, ಶಿರಸಿ–2; ಶಶಾಂಕ್‌ ನಾಯ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿ–3

ಟ್ರಿಪಲ್ ಜಂಪ್: ಡಿ.ಆರ್ವುಸೆಲ್ವಂ, ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಯುಜಿ ಅಂಡ್‌ ಪಿಜಿ ಸಂಸ್ಥೆ–1; ಸಿದ್ಧಾಂತ ಮಗದುಂ, ಕರ್ನಾಟಕ ಕಲಾ ಕಾಲೇಜು–2; ಮೇಘಶ್ಯಾಮ ಭಟ್‌, ಎಂ.ಎಂ. ಕಲಾ, ವಿಜ್ಞಾನ ಕಾಲೇಜು–3

ಮಹಿಳೆಯರ ವಿಭಾಗ: 10,000 ಮೀಟರ್‌ ಓಟ: ಅಲ್ಫಗೋನಾ, ನೆಹರು ಕಲಾ,ವಿಜ್ಞಾನ, ವಾಣಿಜ್ಯ ಕಾಲೇಜು, ಹುಬ್ಬಳ್ಳಿ–1; ರೇಖಾ ಎಚ್‌.ಮುತಗಾರ, ಎಸ್‌ಎಸ್ಎನ್‌ಸಿ, ಡಾ.ಅಂಬೇಡ್ಕರ್‌ ಕಲಾ, ವಾಣಿಜ್ಯ ಕಾಲೇಜು, ಹುಬ್ಬಳ್ಳಿ–2; ಹನುಮವ್ವ ಈರಪ್ಪ ಹುಡೇದ, ಕೆಎಸ್‌ಎಸ್‌ ಸಂಸ್ಥೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಗದಗ–3

1500 ಮೀಟರ್‌ ಓಟ: ಅಪೇಕ್ಷಾ ನಾಯ್ಕ, ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಯುಜಿ ಅಂಡ್‌ ಪಿಜಿ ಸಂಸ್ಥೆ–1; ರಂಜಿತಾ ಜೆ.ನಾಯ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಮಟಾ–2; ಗಂಗೂಬಾಯಿ ಎನ್.ಮೇಗನಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳಿಯಾಳ–3

400 ಮೀಟರ್‌ ಓಟ: ಪೂಜಾ ಸಾವಂತ್‌, ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಯುಜಿ ಅಂಡ್‌ ಪಿಜಿ ಸಂಸ್ಥೆ–1; ರಜಿತಾ ನಾಯ್ಕ, ಕೆಎಲ್ಇ ಸಂಸ್ಥೆಯ ಕಲಾ, ವಾಣಿಜ್ಯ ಕಾಲೇಜು, ಅಂಕೋಲಾ–2; ಗಾಯತ್ರಿ ಎಸ್.ನಾಯ್ಕ, ಎಂಇಎಸ್‌ ವಾಣಿಜ್ಯ ಕಾಲೇಜು, ಶಿರಸಿ–3

ಜಾವೆಲಿನ್‌ ಥ್ರೋ: ಸುಷ್ಮಾ ಭಂಡಾರಿ, ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಯುಜಿ ಅಂಡ್‌ ಪಿಜಿ ಸಂಸ್ಥೆ–1; ದೀಪಾ ಡಿ.ಗೌಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಂಕೋಲಾ–2; ನಮ್ರತಾ ಎಂ.ಅಂತಲಮರದ, ಶ್ರೀ ಕೆ.ಜಿ.ನಾಡಗೀರ ದೈಹಿಕ ಶಿಕ್ಷಣ ಸಂಸ್ಥೆ–3

ಟ್ರಿಪಲ್‌ ಜಂಪ್‌: ಸುರೇಖಾ ಪಾಟೀಲ, ಶ್ರೀ ಕೆ.ಜಿ.ನಾಡಗೀರ ದೈಹಿಕ ಶಿಕ್ಷಣ ಸಂಸ್ಥೆ–1; ಪೂಜಾ ಎನ್‌.ನಾಯ್ಕ, ಶಿವಾಜಿ ಕಲಾ, ವಾಣಿಜ್ಯ ಕಾಲೇಜು, ಬಾಡ, ಕಾರವಾರ–2; ಎಚ್‌.ಕೆ.ಕೀರ್ತಿಲಕ್ಷ್ಮಿ, ಡಾ.ಎ.ವಿ.ಬಾಳಿಗಾ ವಾಣಿಜ್ಯ, ಬಿಬಿಎ ಕಾಲೇಜು–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT