ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಇಂಡಿಯನ್ಸ್‌ಗೆ ತಮೀಮ್: ಸಚಿನ್ ಒಲವು

Last Updated 22 ಫೆಬ್ರುವರಿ 2011, 18:15 IST
ಅಕ್ಷರ ಗಾತ್ರ

ಢಾಕಾ (ಐಎಎನ್‌ಎಸ್) : ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಆವೃತ್ತಿ ಟೂರ್ನಿಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಾಂಗ್ಲಾದ ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಅವರನ್ನು ಸೇರ್ಪಡೆ ಮಾಡಿಕೊಳ್ಳದಿರುವುದರ ಬಗ್ಗೆ ಸಚಿನ್ ತೆಂಡೂಲ್ಕರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ವಿಷಯವನ್ನು ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ಸ್ವತಃ ತಮೀಮ್ ಬಹಿರಂಗಪಡಿಸಿದ್ದಾರೆ.

“ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ನಂತರ ಭಾರತ ತಂಡ ಮರಳುವ ಸಂದರ್ಭದಲ್ಲಿ  ಸಚಿನ್ ಅವರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಚರ್ಚೆ ನಡೆಸುವಾಗ ಮುಂಬೈ ಇಂಡಿಯನ್ಸ್ ತಂಡದ ಹರಾಜು ಪ್ರಕ್ರಿಯೆಯಲ್ಲಿ ತಮ್ಮನ್ನು ಆಯ್ಕೆ ಮಾಡದಿರುವುದು ಸಚಿನ್ ಗಮನಕ್ಕೆ ಬಂತು. ಆಗ ಅಚ್ಚರಿ ವ್ಯಕ್ತಪಡಿಸಿದ ಅವರು, ಈ ಕುರಿತು ತಂಡದ ಫ್ರಾಂಚೈಸಿ ಮಾಲೀಕರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಅಲ್ಲದೇ ನಿಯಮಾವಳಿಯಲ್ಲಿ ಅವಕಾಶವಿದ್ದರೆ ಮರಳಿ ನಿಮ್ಮನ್ನು ಆಯ್ಕೆ ಮಾಡಲು ಶಿಫಾರಸ್ಸು ಮಾಡಲು ಕೋರುವುದಾಗಿ ತಿಳಿಸಿದ್ದಾರೆ” ಎಂದು ತಮೀಮ್ ಹೇಳಿದರು.

“ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಸಚಿನ್ ಭಾರತದಲ್ಲಿ ಇರಲಿಲ್ಲ. ಆದ್ದರಿಂದ ಅವರಿಗೆ ಈ ವಿಷಯ ಗಮನಕ್ಕೆ ಬಂದಿರಲಿಲ್ಲ. ಫ್ರ್ಯಾಂಚೈಸಿ ಆಡಳಿತದೊಂದಿಗೆ ಮಾತನಾಡಿ, ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಮನವಿ ಮಾಡುವುದಾಗಿ ಅವರು (ಸಚಿನ್) ವಾಗ್ದಾನ ನೀಡಿದ್ದಾರೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೊಹಮ್ಮಡಾನ್ ಸ್ಪೋರ್ಟ್ಸ್ ಕ್ಲಬ್‌ನ ಕ್ರಿಕೆಟ್ ಅಧ್ಯಕ ಲುತ್ಫಾರ್ ರೆಹಮಾನ್ ಬಾದಲ್, “ತಮೀಮ್ ಪ್ರತಿಭೆ ಮತ್ತು ಆಟದ ಬಗ್ಗೆ ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್‌ನ ಈ ಋತುವಿನ ಬಜೆಟ್‌ನಲ್ಲಿ ಇನ್ನೂ 1.25, 000 ಡಾಲರ್‌ಗೆ ಅವಕಾಶವಿದೆ. ಇದರಲ್ಲಿ ಭಾರತದ ಆಟಗಾರರನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಅವರಿಗೆ ಇದೆ. ತಮೀಮ್‌ಗೆ ಅವಕಾಶ ಸಿಗುವುದೊ ಇಲ್ಲವೋ ಕಾದು ನೋಡಬೇಕು” ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT