ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ದಾಳಿ: ತಾಜ್‌ ಹೋಟೆಲ್‌ ವಿರುದ್ಧ ದಾವೆಗೆ ಅನುಮತಿ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಮುಂಬೈ ಮೇಲೆ ೨೦೦೮ರ ನವೆಂಬರ್‌ ೨೬ರಂದು ನಡೆದ ದಾಳಿಯಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡ ಬ್ರಿಟಿಷ್‌ ಪ್ರಜೆ ವಿಲ್‌ ಪೈಕ್‌  ತಾಜ್‌ಮಹಲ್‌ ಪ್ಯಾಲೆಸ್‌ ಹೋಟೆಲ್‌ ಮಾಲೀಕರ ವಿರುದ್ಧ ದಾವೆ ಹೂಡಲು  ಕೋರ್ಟ್‌ ಅನುಮತಿ ಪಡೆದುಕೊಂಡಿದ್ದಾರೆ.

ವಿಲ್‌ ಪೈಕ್‌ ಅವರು ತಮ್ಮ  ಆರೋಪದ ಬಗ್ಗೆ ಭಾರತದಲ್ಲಿ ಪ್ರಕರಣ ದಾಖಲಿಸಬೇಕೆಂದು ಟಾಟಾ ಸಮೂಹ ಸಂಸ್ಥೆ ವಾದಿಸಿತು. ಆದರೆ ಭಾರತದ ನ್ಯಾಯಾ­ಲಯಗಳಲ್ಲಿ ವಿಚಾರಣೆ ವರ್ಷಗಟ್ಟಲೆ ವಿಳಂಬ­­ವಾಗುತ್ತದೆ ಎಂಬುದನ್ನು ಒಪ್ಪಿಕೊಂಡ ಇಲ್ಲಿನ ಹೈಕೋರ್ಟ್, ಪೈಕ್‌ ಅವರ ದೂರನ್ನು ವಿಚಾರಣೆಗೆ ಸ್ವೀಕರಿಸಿದೆ. ಆದರೆ ತೀರ್ಮಾನದ ವಿರುದ್ಧ ತಾಜ್‌ ಮಹಲ್‌ ಪ್ಯಾಲೆಸ್‌ ಹೋಟೆಲ್‌ ಮೇಲ್ಮನವಿ ಸಲ್ಲಿಸಲೂ ಕೋರ್ಟ್‌ ಅವಕಾಶ ನೀಡಿತು.

ಇಬ್ಬರು ಸಾಕ್ಷಿಗಳ ಪಾಟೀಸವಾಲು
ಇಸ್ಲಾಮಾಬಾದ್‌ (ಪಿಟಿಐ): 2008ರ ಮುಂಬೈ ದಾಳಿ­­ಯಲ್ಲಿ ಭಾಗವಹಿಸಿದ್ದ ಲಷ್ಕರ್–ಎ–ತೈಯಬಾ ಸಂಘಟನೆಯ 10 ಭಯೋತ್ಪಾದಕರಲ್ಲಿ ಒಬ್ಬ ಸಂಬಂ­ಧಿಕನ ಹೆಸರು ನೀಡಿದ್ದ ಚುನಾವಣಾ ಅಧಿಕಾರಿ ಸೇರಿ­ದಂತೆ ಇಬ್ಬರು ಸಾಕ್ಷಿಗಳ ಪಾಟೀಸವಾಲು ನಡೆಸ­ಲಾಯಿತು. ಭಯೋತ್ಪಾದಕ ಪ್ರಕರಣಗಳ ವಿಚಾ­ರಣೆಯ ವಿಶೇಷ ನ್ಯಾಯಾಲಯ­ದಲ್ಲಿ ಒಕಾರಾ ಜಿಲ್ಲಾ ಚುನಾವಣಾ ಅಧಿಕಾರಿ ಜಾವೇದ್‌ ಮತ್ತು ಮುಸ್ಲಿಂ ಕಮರ್ಷಿಯಲ್‌ ಬ್ಯಾಂಕ್‌ ವ್ಯವಸ್ಥಾಪಕರನ್ನು ಪ್ರತಿವಾದಿ ವಕೀಲರು ಪಾಟೀಸವಾಲಿಗೆ ಗುರಿಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT