ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಮ್ಯಾರಥಾನ್: ಇಥಿಯೋಪಿಯ ಸ್ಪರ್ಧಿಗಳ ಪ್ರಭುತ್ವ

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್): ಇಥಿಯೋಪಿಯಾದ ಗಿರ್ಮಾ ಅಸೆಫಾ ಅವರು ಇಲ್ಲಿ ನಡೆದ ಎಂಟನೇ ಸ್ಟ್ಯಾಂಡರ್ಡ್ ಚಾರ್ಟರ್ಡ್ ಮುಂಬೈ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ನೂತನ ದಾಖಲೆಯೊಂದಿಗೆ ಸ್ವರ್ಣ ಗೆದ್ದರು.

ಭಾನುವಾರ ನಡೆದ 42.195 ಕಿ.ಮೀ ದೂರದ ಮ್ಯಾರಥಾನ್ ಸ್ಪರ್ಧೆಯಲ್ಲಿ ಗಿರ್ಮಾ 2 ಗಂಟೆ 9 ನಿಮಿಷ 54 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಈ ಮೊದಲು ಕೀನ್ಯಾದ ಕೆನ್ನೆತ್ ಮುಗಾರ ಅವರ ಹೆಸರಿನಲ್ಲಿದ್ದ ದಾಖಲೆಯಲ್ಲಿ ಅಳಿಸಿ ಹಾಕಿದರು. ಎರಡು ವರ್ಷಗಳ ಹಿಂದೆ ಕೆನ್ನೆತ್ 2 ಗಂಟೆ 11:54 ಸೆ.ಗಳಲ್ಲಿ ಗುರಿ ತಲುಪಿದ್ದರು. ಇಥಿಯೋಪಿಯಾದ ಬೊಟೊರ್ ಸೆಗಾಯಿ  (ಕಾಲ: 2:09:57ಸೆ) ಹಾಗೂ ಕೀನ್ಯಾದ ಪ್ಯಾಟ್ರಿಕ್ ಮುರುಯಿಕಿ (ಕಾಲ: 2:10:00ಸೆ) ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಇಥಿಯೋಪಿಯಾದ ಅಥ್ಲೀಟ್‌ಗಳು ಮೊದಲ ಮೂರು ಸ್ಥಾನಗಳನ್ನು ಪಡೆದರು. ಕೊರೆನ್ ಯಾಲ್ (ಕಾಲ: 2:26:56 ಸೆ), ಮೆರಿಮಾ ಮೊಹಮ್ಮದ್ (ಕಾಲ: 2:26:57ಸೆ) ಹಾಗೂ ಎಲ್‌ಫೆನೆಶ್ ಅಲಿಮು (ಕಾಲ: 2:29:04ಸೆ) ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದರು.

ಪುರುಷರ ವಿಭಾಗದಲ್ಲಿ ಭಾರತದ ಸ್ಪರ್ಧಿಗಳಲ್ಲಿ ಮೊದಲಿಗರಾದ ಬಿನ್ನಿಂಗ್ ಲಿಂಗ್ಕಾಯ್ (2:21:16) ಅವರು ಒಟ್ಟಾರೆಯಾಗಿ 20ನೇ ಸ್ಥಾನ ತಮ್ಮದಾಗಿಸಿಕೊಂಡರು. ಮಹಿಳೆಯರ ವಿಭಾಗದಲ್ಲಿ 16ನೇ ಸ್ಥಾನ ಗಳಿಸಿದ ಜ್ಯೋತಿ ಗವಾಟೆ (3:05:30) ಭಾರತದ ಸ್ಪರ್ಧಿಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು.

ಪುರುಷರ ವಿಭಾಗದ ಹಾಫ್ ಮ್ಯಾರಥಾನ್‌ನಲ್ಲಿ (21 ಕಿ.ಮೀ) ಪುಣೆಯ ಆರ್ಮಿ ಸ್ಪೋರ್ಟ್ಸ್‌ನ ಬಿ.ಸಿ ತಿಲಕ್ ಪ್ರಥಮ (ಕಾಲ: 1:04:45ಸೆ) ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಇಂಡಿಯನ್ ರೈಲ್ವೇಸ್‌ನ ಪ್ರಿಯಾಂಕ ಸಿಂಗ್ ಪಟೇಲ್ (ಕಾಲ: 1:22:34ಸೆ) ಅವರು ಮೊದಲಿಗರಾಗಿ ಗುರಿಮುಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT