ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕೇಶ್‌ಗೆ ಸ್ವರ ಶ್ರದ್ಧಾಂಜಲಿ

Last Updated 15 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

`ದೋಸ್ತ್ ದೋಸ್ತ್ ನಾ ರಹಾ ಪ್ಯಾರ್ ಪ್ಯಾರ್ ನಾ ರಹಾ
ಜಿಂದಗೀ ಹಮೇ ತೇರಾ ಏತ್ಬಾರ್ ನಾ ರಹಾ...
ಏತ್ಬಾರ್ ನಾ ರಹಾ... (ಸಂಗಮ್).

`ಕಭಿ ಕಭಿ ಮೇರೆ ದಿಲ್ ಮೆ ಖಯಾಲ್ ಆತಾ ಹೈ... ಕೆ ಜೈಸೆ ತ್ುಕೋ ಬನಾಯಾ ಗಯಾ ಹೈ ಮೇರೆ ಲಿಯೇ~ (ಕಭಿ ಕಭಿ)...

ಹೀಗೆ ಮುಕೇಶ್ ಅವರ ಕಂಠದಿಂದ ಹೊರಹೊಮ್ಮಿದ ಈ ಗೀತೆಗಳು ಸಂಗೀತ ಪ್ರೇಮಿಗಳ ಕಿವಿಮೇಲೆ ಬಿದ್ದೊಡನೆ ಮೈಮನ ಪುಳಕಗೊಳ್ಳದೆ ಇರದು.

1950ರಿಂದ 70ರ ದಶಕದಲ್ಲಿ ಹಿಂದಿ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯದ ಹೆಸರು ಹಿನ್ನೆಲೆ ಗಾಯಕ ಮುಕೇಶ್ ಅವರದ್ದು. ಪಂಜಾಬ್‌ನವರಾದ ಮುಕೇಶ್ ಪೂರ್ಣ ಹೆಸರು ಮುಕೇಶ್ ಚಂದ್ರ ಮಾಥುರ್.

ಮನ್ನಾಡೇ, ಮಹಮ್ಮದ್ ರಫಿ, ತಲತ್ ಮೆಹಮೂದ್‌ರಂಥ ಗಾಯಕರ ಸಾಲಿನಲ್ಲಿ ಮುಕೇಶ್ ಸಹ ಅಗ್ರಗಣ್ಯರು. 1976ರಲ್ಲಿ ಅಮೆರಿಕಾದಲ್ಲಿ ಸಂಗೀತ ಕಛೇರಿ ನಡೆಸುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದರು. 200ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಿನ್ನೆಲೆ ಗಾಯನ ನೀಡಿರುವ ಮುಕೇಶ್ ಅವರ ಗೀತೆಗಳು ಇಂದಿಗೂ ಹಚ್ಚಹಸುರಾಗಿವೆ.

ಆಗಸ್ಟ್ 27ರಂದು ಅವರ ಪುಣ್ಯಸ್ಮರಣೆ. ಆ ದಿನವನ್ನು ಮೇರು ಗಾಯಕ ಮುಕೇಶ್ ಅವರಿಗೆ ಸಮರ್ಪಿಸುವ ಉದ್ದೇಶದಿಂದ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ಇದೇ ಆ.27ರಂದು (ಸೋಮವಾರ) ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಆ ಮೂಲಕ ಬೆಂಗಳೂರಿಗರಿಗೆ 70ರ ದಶಕದ ಹಿಂದಿ ಚಿತ್ರರಂಗವನ್ನು ನೆನಪಿಸಲಿದ್ದಾರೆ.

“ಭಾರತೀಯ ಚಿತ್ರರಂಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮುಕೇಶ್ ಅವರಿಗೆ ಸ್ವರ ಶ್ರದ್ಧಾಂಜಲಿ ಅರ್ಪಿಸುವ ಉದ್ದೇಶದಿಂದ ನಮ್ಮ `ಸುರ್‌ಬಹಾರ್~ ಸಂಸ್ಥೆ ಈ ನೇರ ಸಂಗೀತ ಕಛೇರಿ ಆಯೋಜಿಸಿದೆ ಎನ್ನುತ್ತಾರೆ ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ.

ಮುಕೇಶ್ ಹಾಗೂ ಲಕ್ಷ್ಮೀಕಾಂತ ಪ್ಯಾರೇಲಾಲ್ ಅವರೊಂದಿಗೆ ಕಾರ್ಯನಿರ್ವಹಿಸಿದ ಬಾಲಿವುಡ್‌ನ ವಾದ್ಯಗಾರ ಸುರೇಶ್ ಯಾದವ್, ಲಯವಾದ್ಯಗಾರ ಗಜಾನನ ಹಾಗೂ ಕೇರಳದ ವಯೊಲಿನ್ ತಂಡ ಸಂಗೀತ ಸಂಜೆಯಲ್ಲಿ ಗಾಯನದ ರಸದೌತಣ ಉಣಬಡಿಸಲಿದೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ.ಕೆ. ಮೂರ್ತಿ ಅವರಿಗೆ ಸನ್ಮಾನ ಮಾಡಲಾಗುತ್ತಿದ್ದು, ಈ ಸಂಗೀತ ಸಂಜೆಗೆ ಚಿತ್ರರಂಗದ ಗಣ್ಯರು, ನಟರು ಹಾಗೂ ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ಪಾಲ್ಗೊಳ್ಳಲಿದ್ದಾರೆ. ಮುಕೇಶ್ ಅವರು `ಪಹಲಿ ನಜರ್~ ಚಿತ್ರಕ್ಕೆ ಹಾಡಿದ ಮೊದಲ ಗೀತೆ `ದಿಲ್ ಜಲ್ತಾ ಹೈ ತೋ ಜಲ್‌ನೇ ದೇ~ ಯಿಂದ ಆರಂಭವಾಗಿ ಆಯ್ದ 25 ಸೂಪರ್‌ಹಿಟ್ ಗೀತೆಗಳನ್ನು ಹಾಡಲಾಗುತ್ತದೆ ಎಂದು ಹೇಳುತ್ತಾರೆ ಸಂಗೀತಾಕಟ್ಟಿ.

`ಇಂದಿನ ಪೀಳಿಗೆಯವರಿಗೆ ನೇರ ಸಂಗೀತ ಕಛೇರಿ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. `ಅಂದಾಜ್~ ಚಿತ್ರದ ಗೀತೆಯೊಂದಕ್ಕೆ ಲತಾ ಮಂಗೇಶ್ಕರ್ ಅವರು ಎರಡೂವರೆ ತಿಂಗಳು ಅಭ್ಯಾಸ ಮಾಡಿದ್ದಾಗಿ ನೌಷಾದ್ ಅವರು ಹೇಳಿಕೊಂಡಿದ್ದರು. ಆದರೆ ಇಂದು ತಂತ್ರಜ್ಞಾನ ಮುಂದುವರೆದಿದ್ದರೂ ಕೆಲ ಗಾಯಕರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಆಸಕ್ತಿ ಕಡಿಮೆಯಾಗುತ್ತಿದೆ. ಇಂದಿನ ಸಂಗೀತಕ್ಕೆ ಜೀವವೂ ಇಲ್ಲ, ಭಾವವೂ ಇಲ್ಲ~ ಎಂದು ಬೇಸರ ವ್ಯಕ್ತಪಡಿಸಿದ ಅವರು ಇಂಥ ಸಂಗೀತ ಕಛೇರಿಗಳು ಯುವಕರನ್ನು ಸಂಗೀತದತ್ತ ಒಲವು ಮೂಡಿಸುವಂತೆ ಮಾಡುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸಂಗೀತಾ ಕಟ್ಟಿ ಅವರೊಂದಿಗೆ ಅಸಿತ್ ತ್ರಿಪಾಠಿ, ಕೌಸ್ತುಭ್ ಭಟ್ಟಾಚಾರ್ಯ ಸೇರಿದಂತೆ 35 ಕಲಾವಿದರ ತಂಡ ಮುಕೇಶ್ ಗೀತೆಗಳನ್ನು ಹಾಡಲಿದ್ದಾರೆ.

ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಉಚಿತ ಪ್ರವೇಶವಿದೆ. ಸಂಜೆ 6.30
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT