ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖರ್ಜಿಯನ್ನೂ ಬಿಡದ 2ಜಿ ಗುಮ್ಮ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಐ): 2ಜಿ ತರಂಗಾಂತರ ಹಗರಣದ ಬಿಸಿ ಗೃಹ ಸಚಿವ ಪಿ.ಚಿದಂಬರಂ ಅವರ ನಂತರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೂ ತಟ್ಟುತ್ತಿದೆ.

2008ರಲ್ಲಿ ತರಂಗಾಂತರ ಹಂಚಿಕೆಯಾಗುವ ಎರಡು ವಾರ ಮೊದಲು ಆಗ ವಿದೇಶಾಂಗ ಸಚಿವರಾಗಿದ್ದ ಮುಖರ್ಜಿ ಅವರು ಪ್ರಧಾನಿ ಕೋರಿಕೆಯಂತೆ ಸಿದ್ಧಪಡಿಸಿದ್ದ ಟಿಪ್ಪಣಿಯಲ್ಲಿ `ದೂರಸಂಪರ್ಕ ಖಾತೆಯು ತರಂಗಾಂತರ ಹಂಚಿಕೆಗೆ ಜಾರಿಯಲ್ಲಿರುವ ನೀತಿಯನ್ನೇ ಮುಂದುವರಿಸಬಹುದು~ ಎಂದು ಸ್ಪಷ್ಟಪಡಿಸಿದ್ದರು ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯಿಂದ ತಿಳಿದು ಬಂದಿದೆ.

ಇದರಿಂದ ವಿವಾದ ಹೊಸ ತಿರುವು ಪಡೆಯುವುದರ ಜತೆಗೆ ಇನ್ನಷ್ಟು ಕಾವೇರುತ್ತಿದೆ. ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಸಚಿವರ ತಂಡದ ಮುಖ್ಯಸ್ಥರಾಗಿದ್ದ ಮುಖರ್ಜಿ ಟಿಪ್ಪಣಿಯಲ್ಲಿ `ಭವಿಷ್ಯದಲ್ಲಿ ತರಂಗಾಂತರ ಹಂಚಿಕೆಯ ವ್ಯವಹಾರಗಳನ್ನು ಸಾರ್ವಜನಿಕರ ಗಮನಕ್ಕೆ ತಂದು ಪಾರದರ್ಶಕ ನೀತಿಯನ್ನು ಅಳವಡಿಸಬೇಕು~ ಎಂದು ಶಿಫಾರಸು ಮಾಡಿದ್ದರು.

ವಕೀಲರಾದ ವಿವೇಕ್ ಗರ್ಗ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ, ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎಲ್ಲ ಪತ್ರ ವ್ಯವಹಾರಗಳ ವಿವರ ಲಭ್ಯವಾಗಿದೆ. ದೂರಸಂಪರ್ಕ ಖಾತೆ ಸಚಿವರಾಗಿದ್ದ ಎ.ರಾಜಾ ತರಂಗಾಂತರ ಹಂಚಿಕೆಯ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಎರಡು ವಾರ ಮೊದಲು, ಅಂದರೆ 2007ರ ಡಿಸೆಂಬರ್ 26ರಂದು ಪ್ರಣವ್ ಅವರು ಪ್ರಧಾನಿ ಕಚೇರಿಗೆ ಟಿಪ್ಪಣಿಯನ್ನು ರವಾನಿಸಿದ್ದರು. ನೀತಿಯಲ್ಲಿ ಬದಲಾವಣೆಯಾಗುವವರೆಗೂ ಜಾರಿಯಲ್ಲಿ ಇರುವ ನೀತಿಯನ್ನೇ ಅನುಸರಿಸಿಕೊಂಡು ಪರವಾನಗಿ ನೀಡಬಹುದಾಗಿದೆ ಎಂದು ಮುಖರ್ಜಿ ಅದರಲ್ಲಿ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಸೇವೆ ಒದಗಿಸುತ್ತಿರುವ ಕಂಪೆನಿಗಳಿಗೆ ತರಂಗಾಂತರ ಹಂಚಿಕೆ ಮಾಡಿ, ಉಳಿದ ವಲಯಗಳಿಗೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಆಧಾರದ ಮೇಲೆ ಪರವಾನಗಿ ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಷ್ಯದಲ್ಲಿ ಹೊಸ ಪರವಾನಗಿ ನೀಡುವಾಗ ಪಾರದರ್ಶಕ ನೀತಿಯನ್ನು ಅಳವಡಿಸಿಕೊಳ್ಳಲು ದೂರಸಂಪರ್ಕ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದೂ ಅವರು ಸಲಹೆ ಮಾಡಿದ್ದರು.

ಪ್ರಣವ್ ಮುಖರ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT