ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಆರೋಪಿಗೆ ಗಲ್ಲು ಶಿಕ್ಷೆ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ: ಖಾನಾಪುರ ತಾಲ್ಲೂಕಿನ ಡುಕ್ಕರವಾಡಿ ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗೆ ಗಲ್ಲು ಶಿಕ್ಷೆ ಹಾಗೂ ಇನ್ನೊಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಎಂ.ಎಸ್. ಬಾಲಕೃಷ್ಣ ಅವರು, ಪ್ರಮುಖ ಆರೋಪಿ ಡುಕ್ಕರವಾಡಿ ಗ್ರಾಮದ ಶಿವಾನಂದ ಗುರವನಿಗೆ ಗಲ್ಲು ಶಿಕ್ಷೆ ಹಾಗೂ ಕಮಲವ್ವ ಪಾವಸಕರನಿಗೆ ಜೀವಾವಧಿ ಶಿಕ್ಷೆ ಮತ್ತು ಆರು ತಿಂಗಳ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದರು.

ಘಟನೆಯ ವಿವರ: ಡುಕ್ಕರವಾಡಿ ಗ್ರಾಮದ ಅರ್ಜುನ ಪಾಟೀಲ ಹಾಗೂ ರಾಮಲಿಂಗ ಪಾಟೀಲ ಅವರ ನಡುವೆ 30 ಎಕರೆ ಭೂಮಿಗೆ ಸಂಬಂಧಿಸಿದಂತೆ ವಿವಾದ ನಡೆಯುತ್ತಿತ್ತು. ನವೆಂಬರ್ 15, 2006ರಂದು ರಾಮಲಿಂಗ ಪಾಟೀಲರ ಜಮೀನಿನಲ್ಲಿ ಅವರ ಪತ್ನಿ ಬಸವ್ವ ಮತ್ತಿತರರು ಭತ್ತದ ರಾಶಿ ಮಾಡುತ್ತಿದ್ದರು.   ಈ ವೇಳೆ ಅಲ್ಲಿಗೆ ಆಗಮಿಸಿದ ಅರ್ಜುನ ಪಾಟೀಲ, ಶಿವಾನಂದ ಗುರವ ಹಾಗೂ ಸಂಜಯ ಪಾಟೀಲ ಈ ಜಾಗದಲ್ಲಿ ರಾಶಿ ಮಾಡಬೇಡಿ ನಮಗೆ ಸಾಲದ ಸೌಲಭ್ಯ ಸಿಗುವುದಿಲ್ಲ ಎಂದು ತಕರಾರು ತೆಗೆದರು. 

 ಜಗಳವು ವಿಕೋಪಕ್ಕೆ ಹೋದಾಗ ಶಿವಾನಂದ ಕೊಡಲಿಯಿಂದ ಬಸಮ್ಮನ ಕುತ್ತಿಗೆ ಮೇಲೆ ಹೊಡೆದು ಕೊಲೆ ಮಾಡಿದ್ದ. ಅಲ್ಲಿಗೆ ಬಂದ ಗೌಡಪ್ಪ ಅರಳಿಕಟ್ಟಿ ಅವರ ಕುತ್ತಿಗೆ ಮೇಲೂ ಹೊಡೆದು ಕೊಲೆ ಮಾಡ್ದ್ದಿದ. ಇದನ್ನು ತಡೆಯಲು ಬಂದ ಗೌಡಪ್ಪನ ಹೆಂಡತಿ ಗೌರವ್ವಳನ್ನು ಕಮಲವ್ವ ಹಿಡಿದುಕೊಂಡಾಗ, ಅರ್ಜುನ ಪಾಟೀಲ ಗೌರವ್ವಳನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡ್ದ್ದಿದ.  

  ಘಟನೆಯನ್ನು ನೋಡಿದ ಈರವ್ವ ಪೊಂಡಪ್ಪ ಅರಳಿಕಟ್ಟಿ ತಪ್ಪಿಸಿಕೊಂಡು ಓಡುತ್ತಿದ್ದಾಗ ಬೆನ್ನು ಹತ್ತಿದ ಶಿವಾನಂದ ಆಕೆಯನ್ನೂ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರತ್ಯಕ್ಷದರ್ಶಿ ಪೊಂಡಪ್ಪ ಅರಳಿಕಟ್ಟಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಒಂದನೇ ಆರೋಪಿಯಾದ ಶಿವಾನಂದ ಗುರವ, 2ನೇ ಆರೋಪಿ ಅರ್ಜುನ ಪಾಟೀಲ, 3ನೇ ಆರೋಪಿ ಸಂಜಯ ಪಾಟೀಲ ಹಾಗೂ 4ನೇ ಆರೋಪಿ ಕಮಲವ್ವ ಪಾವಸಕರ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 

 ಪ್ರಕರಣದ ವಿಚಾರಣೆ ಪೂರ್ಣವಾಗುವ ಮುನ್ನ ಅರ್ಜುನ ಪಾಟೀಲ ಹಾಗೂ ಸಂಜಯ ಪಾಟೀಲ ಮೃತಪಟ್ಟಿದ್ದರು.
ಸರ್ಕಾರದ ಪರವಾಗಿ 2ನೇ ತ್ವರಿತಗತಿ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲ ಕೆ.ಟಿ. ಪಾಟೀಲ ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಹಿರಿಯ ಸರ್ಕಾರಿ ವಕೀಲ ರವಿ ಎನ್. ಚಾಟೆ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT