ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಗೆ ಹತ್ತು ಅಂಶಗಳ ಮನವಿ

Last Updated 20 ಸೆಪ್ಟೆಂಬರ್ 2013, 8:25 IST
ಅಕ್ಷರ ಗಾತ್ರ

ಕೂಡಲಸಂಗಮ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ 4ನೇ ಬಸವ ಪಂಚಮಿಯ ಅಂಗವಾಗಿ ಬಸವ ಜಯಂತಿ ಆಚರಣೆಯ ಶತಮಾನೋತ್ಸವ ಹಾಗೂ ಸರ್. ಸಿದ್ದಪ್ಪ  ಕಂಬಳಿಯವರ 131ನೇ ಜಯಂತು್ಯತ್ಸವ, ಒಂದು ನೂರು ಕಾಯಕ ಸಮಾಜಗಳಿಗೆ ಗೌರವಾ­ರ್ಪಣೆ  ಸಮಾರಂಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಕೂಡಲ­ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ರಾಷ್ಟ್ರೀಯ ಪಂಚಮಸಾಲಿ ಘಟಕದ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಮನವಿ ಪತ್ರವನ್ನು ಕೊಟ್ಟರು.

ಮನವಿ ಪತ್ರದಲ್ಲಿರುವ ಅಂಶಗಳನ್ನು ನೀಲಕಂಠ ಅಸೂಟಿ ಹೇಳಿದರು. ಆ ಅಂಶಗಳು ಈ ರೀತಿ ಇವೆ.  ಈ ದೇಶದಲ್ಲಿ ಒಂದು ಕೋಟಿಗೂ ಅಧಿಕವಿರುವ ಕೃಷಿ ಆಧಾರಿತ ಪಂಚಮಸಾಲಿ ಸಮಾಜದ ಶೈಕ್ಷಣಿಕ ಪ್ರಗತಿಗಾಗಿ ಈ ಸಮಾಜವನ್ನು ಪ್ರವರ್ಗ 2ಎ ಮೀಸಲಾತಿಯಲ್ಲಿ ಸೇರಿಸಬೇಕು; ಸಾಮಾಜಿಕ ನ್ಯಾಯದ ಹರಿಕಾರ ಸರ್ ಸಿದ್ದಪ್ಪ ಕಂಬಳಿಯವರ ಹೆಸರನ್ನು ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕು; ಪ್ರತಿವರ್ಷ ಸರ್ಕಾರ ಆಚರಿಸುವ ಬಸವ ಜಯಂತಿಯನ್ನು ‘ರೈತರ ದಿನ’ ವನ್ನಾಗಿ ಆಚರಿಸಲು ಘೋಷಣೆ ಮಾಡಬೇಕು; ಬೆಳಗಾವಿ ಸುವರ್ಣ ವಿಧಾನ ಸೌಧದ ಮುಂಬಾಗದಲ್ಲಿ ವೀರಮಾತೆ ಕಿತ್ತೂರು ಚೆನ್ನಮ್ಮ ಮತ್ತು ಅವರ ಬಲಗೈ ಬಂಟ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು;

ಕೂಡಲಸಂಗಮ ಗ್ರಾಮದ ಜನರ ಪುನರ್ವಸತಿಗಾಗಿ ಪುನರ್‌ವ್ಯವಸ್ಥೆ ಕಲ್ಪಿಸಬೇಕು; ಕೂಡಲಸಂಗಮ ಮತ್ತು ಕಲ್ಯಾಣ ಕರ್ನಾಟಕವನ್ನು ಸೇರಿಸುವ ಅಡವಿಹಾಳ ಸೇತುವೆ / ಬ್ಯಾರೇಜನು್ನು ನಿರ್ಮಿಸುವ ಘೋಷಣೆ ಮಾಡಿ ತಕ್ಷಣವೇ ಕಾಮಗಾರಿ ಪ್ರಾರಂಭಿಸ­ಬೇಕು; ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ರೈತರ ಜೀವನದಿಗಳಾದ ಕೃಷ್ಣೆ, ಮಲಪ್ರಭಾ, ಭೀಮಾ ಮತ್ತು ಘಟಪ್ರಭಾ ನದಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಸಮಗ್ರ ನೀರಾವರಿ ಯೋಜನೆಗೆ ಜಾರಿ ತರಬೇಕು; ಕೂಡಲಸಂಗಮಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಬಿಜಾಪುರ, ಆಲಮಟ್ಟಿ, ಇಲಕಲ್ ಮತ್ತು ಕೊಪ್ಪಳ ರೈಲು ಮಾರ್ಗವನ್ನು ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು; ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ ಕೂಡಲಸಂಗಮದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು; ಮುಂಬರುವ ಲೋಕಸಭೆ ಚುನಾವಣೆಗಳಲ್ಲಿ ಮತ್ತು ನಿಗಮ ಮಂಡಳಿ ಅಧ್ಯಕ್ಷರ ನಾಮನಿರ್ದೇಶನಗಳಲ್ಲಿ ನಮ್ಮ ಸಮಾಜಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT