ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜಫ್ಫರ್‌ನಗರ: 40 ಮಕ್ಕಳ ಸಾವಿಗೆ ಸುಪ್ರೀಂ ಕೋರ್ಟ್‌ ಕಳವಳ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೋಮು ಗಲಭೆಗೆ ತುತ್ತಾದ ಉತ್ತರ ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ ಆರಂ­ಭಿ­ಸಲಾದ ಪರಿಹಾರ ಶಿಬಿರ­ದಲ್ಲಿ 40 ಮಕ್ಕಳು ಸಾವಿಗೀಡಾ­ಗಿ­ರುವ ವಿಷಯದ ಬಗ್ಗೆ ಸುಪ್ರೀಂ­ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿ­ಸಿದ್ದು, ಮಿತಿ ಮೀರಿದ ಚಳಿಯಿಂದ ರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ­ಗಳನ್ನು ಕೈಗೊಳ್ಳಬೇಕು ಎಂದು ಆದೇಶಿಸಿದೆ.

ಪರಿಹಾರ ಕೇಂದ್ರಗಳಲ್ಲಿ ದಾಖ­ಲಾ­ದವರ ಆರೋಗ್ಯದ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ತಾನು ಆದೇಶ ನೀಡಿದ ನಂತರವೂ ಸಾವಿನ ಪ್ರಕರಣ ವರದಿಯಾಗುತ್ತಿದ್ದು, ಈ ಬಗ್ಗೆ ಮಾಧ್ಯಮ ವರದಿಗಳು ಗಮನ­ಸೆಳೆದಿವೆ. ಹಾಗಾಗಿ ಈ ಕುರಿತು ರಾಜ್ಯದ ಆಡಳಿತ ಸರಿಯಾದ ಮಾಹಿತಿ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ.

‘ಮಕ್ಕಳ ಸಾವಿನ ಪ್ರಕರಣ ಹೆಚ್ಚು­ತ್ತಿರುವ ಕುರಿತು ಸಂಸತ್ತಿನಲ್ಲೂ ತೀವ್ರ ಚರ್ಚೆಯಾಗುತ್ತಿದ್ದು, ಮಾಧ್ಯಮ ವರದಿಗಳನ್ನು ನಾವು ಓದಿದ್ದೇವೆ’ ಎಂದು ಮುಖ್ಯ ನ್ಯಾಯ­ಮೂರ್ತಿ ಪಿ. ಸದಾಶಿವಂ ಹಾಗೂ ನ್ಯಾಯ­ಮೂರ್ತಿಗಳಾದ ರಂಜನಾ ಪ್ರಕಾಶ್‌ ದೇಸಾಯಿ ಹಾಗೂ ರಂಜನ್‌ ಗೊಗೋಯಿ ಅವರನ್ನು ಒಳಗೊಂಡ ಪೀಠ ಕಳವಳವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT