ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ರಣ ಆವೃತ್ತಿ ಸ್ಥಗಿತಗೊಳಿಸಿದ `ನ್ಯೂಸ್‌ವೀಕ್' ನಿಯತಕಾಲಿಕ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್/ ರಿಯಾ ನೊವೊಸ್ಟಿ): ಜನಮನ್ನಣೆಗೆ ಪಾತ್ರವಾಗಿರುವ ಅಮೆರಿಕದ ಸಾಪ್ತಾಹಿಕ ನಿಯತಕಾಲಿಕ `ನ್ಯೂಸ್‌ವೀಕ್'ದ ಸೋಮವಾರದ ಆವೃತ್ತಿಯು ಅದರ ಕಟ್ಟಕಡೆಯ ಮುದ್ರಣ ಆವೃತ್ತಿಯಾಗಿದೆ.

`ನಿಮ್ಮ ಕೈಯಲ್ಲಿರುವ ಆವೃತ್ತಿಯು ನಿಯತಕಾಲಿಕದ ಕಟ್ಟಕಡೆಯ ಮುದ್ರಣ ಆವೃತ್ತಿಯಾಗಿದೆ' ಎಂದು ಮುಖ್ಯ ಸಂಪಾದಕ ಟಿನಾ ಬ್ರೌನ್ ಅದರಲ್ಲಿ ಹೇಳಿದ್ದಾರೆ.

`ನಿಯತಕಾಲಿಕದ ಮುಂದಿನ ಆವೃತ್ತಿ, ಅಂದರೆ ಜನವರಿ ಮೊದಲ ವಾರದ ಆವೃತ್ತಿಯು ನಿಮ್ಮ ಐಪಾಡ್ ಅಥವಾ ಕಿಂಡ್ಲ್ ಅಥವಾ ಫೋನ್ ಪರದೆಯ ಮೇಲಿರುತ್ತದೆ. ಫೆಬ್ರುವರಿ ಅಂತ್ಯದ ವೇಳೆಗೆ ನಿಯತಕಾಲಿಕವು ಸಂಪೂರ್ಣ ಡಿಜಿಟಲ್ ರೂಪ ಪಡೆಯುತ್ತದೆ' ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

80ನೇ ವರ್ಷಾಚರಣೆಯ ಸಿದ್ಧತೆಯಲ್ಲಿರುವ ಸಂದರ್ಭದಲ್ಲಿ ನಿಯತಕಾಲಿಕವು ಈ ಬದಲಾವಣೆಗೆ ಒಡ್ಡಿಕೊಂಡಿದೆ. ಜಾಹೀರಾತುದಾರರು ಈಗ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂತರಜಾಲ ಮಾಧ್ಯಮದ ಕಡೆಗೆ ವಾಲಿರುವುದೇ ಮುದ್ರಣ ಆವೃತ್ತಿ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT