ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ರಿತ ಪ್ರತಿ ಕಳುಹಿಸಲು ಅ.31 ಗಡುವು

ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆ
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕಳೆದ ಎರಡು ತೆರಿಗೆ ಲೆಕ್ಕಾಚಾರ ವರ್ಷಗಳಲ್ಲಿ (2011­–­12 ಮತ್ತು 2012–13) ಆನ್‌ಲೈನ್‌ ಮೂಲಕ(ಇ–ಫೈಲಿಂಗ್‌) ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐ.ಟಿ ರಿಟರ್ನ್ಸ್‌) ಸಲ್ಲಿಸಿರುವ ತೆರಿಗೆದಾರರು ಅದರ ಮುದ್ರಿತ ಪ್ರತಿಯನ್ನು ಬೆಂಗ­ಳೂರಿನಲ್ಲಿರುವ ಕೇಂದ್ರ ಸಂಸ್ಕರಣೆ ಘಟಕಕ್ಕೆ (ಸಿಪಿಸಿ) ಕಳು­ಹಿಸಲು ವಿಳಂಬ ಮಾಡಿದ್ದರೆ, ಕೂಡಲೇ ಅಂಚೆ ಮೂಲಕ ಕಳುಹಿಸುವಂತೆ ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿದೆ.

ಮುದ್ರಿತ ಪ್ರತಿ ಕಳುಹಿಸಲು ಅಕ್ಟೋಬರ್‌ 31 ಅಂತಿಮ ಗಡುವು. ಈ ಬಾರಿ ಡಿಜಿಟಲ್‌ ಸಹಿ ಇಲ್ಲದೆ  ರಿಟರ್ನ್ಸ್‌  ಸಲ್ಲಿಸಿರುವ ತೆರಿಗೆದಾರರು ಅದರ ಮುದ್ರಿತ ಪ್ರತಿಯನ್ನು ‘ಸಿಪಿಸಿ’ಗೆ ಕಳು­ಹಿಸುವುದು ಕಡ್ಡಾಯ. ಒಂದು ವೇಳೆ ಮುದ್ರಿತ ಪ್ರತಿಯನ್ನು ಈಗಾಗಲೇ ಕೇಂದ್ರ ಕಚೇರಿಗೆ ಕಳು­ಹಿಸಿದ್ದರೂ, ಅದಕ್ಕೆ ಸ್ವೀಕೃತಿ ಪತ್ರ ಲಭಿ­ಸದಿದ್ದರೆ, ಇನ್ನೊಮ್ಮೆ ಕಳುಹಿಸು­ವಂತೆಯೂ ತೆರಿಗೆ ಇಲಾಖೆ ಸೂಚನೆ ನೀಡಿದೆ.

ಮುದ್ರಿತ ಪ್ರತಿ ಕಳುಹಿಸಲು ವಿಫಲ ವಾಗಿರುವ ತೆರಿಗೆದಾರರ ಆನ್‌­ಲೈನ್‌ ಲೆಕ್ಕಪತ್ರ ವಿವರ ಸಲ್ಲಿಕೆಯನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ ಎಂದೂ ಪ್ರಕಟಣೆ ತಿಳಿಸಿದೆ.

ವಿಳಾಸ: ಅಂಚೆ ಪೆಟ್ಟಿಗೆ ಸಂಖ್ಯೆ 1, ಎಲೆಕ್ಟ್ರಾನಿಕ್‌ ಸಿಟಿ ಅಂಚೆ ಕಚೇರಿ, ಬೆಂಗಳೂರು–560 100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT