ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನವಳ್ಳಿಯಲ್ಲಿ 57 ಜೋಡಿ ಸಾಮೂಹಿಕ ವಿವಾಹ

Last Updated 8 ಮಾರ್ಚ್ 2011, 8:30 IST
ಅಕ್ಷರ ಗಾತ್ರ

ಮುನವಳ್ಳಿ (ತಾ.ಸವದತ್ತಿ): ಮುನವಳ್ಳಿಯ ಆರಾಧ್ಯದೈವ ಶ್ರೀ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಜರುಗಿದ 57 ಜೋಡಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಸೋಮವಾರ ಸಹಸ್ರಾರು ಜನರ ಮಧ್ಯದಲ್ಲಿ ಅತ್ಯಂತ ಸರಳ ಹಾಗೂ ಸುಂದರವಾಗಿ ನಡೆಯಿತು. ದಾಂಪತ್ಯ ಜೀವನಕ್ಕೆ  ಹೆಜ್ಜೆ ಇಟ್ಟ 57 ಜೋಡಿಗಳನ್ನು ಹರಸಿ, ಮಾತನಾಡಿದ ಹುಬ್ಬಳ್ಳಿ ಮೂರುಸಾವಿರಮಠ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ‘ಮನೆಗೆ ಒಂದು ಮಗುವಿರಲಿ; ಅದು ದೇಶಕ್ಕೆ ಮುಡುಪಾಗಿರಲಿ’ ಎಂದು ಆಶೀರ್ವದಿಸಿದರು.

ಗಚ್ಚಿನಮಠದ ಚೆನ್ನಮಲ್ಲ ಶಿವಾಚಾರ್ಯರು, ಸಾಮೂಹಿಕ ವಿವಾಹಗಳನ್ನು  ಎಲ್ಲರೂ ಮಾಡಬಹುದು ಆದರೆ ಉಚಿತವಾಗಿ ಮಾಡುವುದು ಕಷ್ಟಸಾಧ್ಯ  ಎಂದರು.  ಈಗಿನ ಕಾಲ ಎಲ್ಲವೂ ವ್ಯವಹಾರಿಕವಾಗಿದ್ದು ಅದರಲ್ಲಿ ಮುನವಳ್ಳಿಯ ಸದ್ಭಕ್ತರು ಕೂಡಿ ಸಮಾಜದ ಒಳಿತಿಗಾಗಿ ಧರ್ಮದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಸೋಮಶೇಖರಮಠದ ಶ್ರೀ ಮುರುಘೇಂದ್ರ ಶ್ರೀಗಳು, ಸವದತ್ತಿ ಸ್ವಾದಿಮಠದ ಶಿವಬಸವ ಸ್ವಾಮೀಜಿ, ಕಮತಗಿಯ ಹುಚ್ಚೇಶ್ವರ ಶ್ರೀಗಳು ಪಂಚನಗೌಡ ದ್ಯಾಮನಗೌಡರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಜಿ.ಪಂ. ಹಾಗೂ ತಾ.ಪಂ. ಸದಸ್ಯರನ್ನು ಸನ್ಮಾನಿಸಲಾಯಿತು. ಮೋಹನ ಕಾಮಣ್ಣವರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಕಮತಗಿ ಸ್ವಾಗತಿಸಿದರು. ಬಾಳು ಹೊಸಮನಿ ವಂದಿಸಿದರು. ಪಿ. ಡಿ. ಪಾಟೀಲ, ರವೀಂದ್ರ ಯಲಿಗಾರ, ನಿಂಗನಗೌಡ ಮಲಗೌಡ್ರ ದುಂಡಪ್ಪ ಬುರ್ಜಿ. ವಿರುಪಯ್ಯನವರಮಠ, ಬೋದ್ಲೇಖಾನ, ಗೀದಿ,  ದ್ಯಾಮನಗೌಡ್ರ, ಬಾಳಿ, ದೇವಣಗಾಂವಿ, ಹದ್ದನ್ನವರ, ಜಾತ್ರಾ ಕಮೀಟಿ ಅಧ್ಯಕ್ಷ ಅಂಬರೀಷ ಯಲಿಗಾರ, ಜಯದೇವ ಅಷ್ಠಗಿಮಠ, ಅಶೋಕ ಪಟ್ಟಣಶೆಟ್ಟಿ, ಕಲ್ಲಪ್ಪ ಕಿತ್ತೂರ, ಚಂದ್ರಯ್ಯ ಸ್ವಾಮೀಜಿ, ನಾಗಪ್ಪ ಕಾಮಣ್ಣವರ, ಸಿಂಗಯ್ಯ ಹಿರೇಮಠ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT