ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಳಿಕುಮಾರ್‌ಗೆ ‘ಚಾಂಪಿಯನ್‌’ ಗೌರವ

ಮಿಸ್ಟರ್‌ ಸತೀಶ ಶುಗರ್‍ಸ್‌ ಕ್ಲಾಸಿಕ್–-2013
Last Updated 3 ಡಿಸೆಂಬರ್ 2013, 9:37 IST
ಅಕ್ಷರ ಗಾತ್ರ

ಬೆಳಗಾವಿ: ಭಾರತೀಯ ನೌಕಾಪಡೆಯ ಮುರುಳಿಕುಮಾರ ಅವರು 6ನೇ ಮಿಸ್ಟರ್‌ ಸತೀಶ ಶುಗರ್‍ಸ ಕ್ಲಾಸಿಕ್–- 2013 ರಾಷ್ಟ್ರ ಮಟ್ಟದ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಗೌರವಕ್ಕೆ ಪಾತ್ರರಾದರು.

ಸತೀಶ ಶುಗರ್‍ಸ ಹಾಗೂ ಭಾರತೀಯ ದೇಹದಾರ್ಢ್ಯ ಸಂಸ್ಥ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಮುರುಳಿಕುಮಾರ ಅಂಗಾಂಗ ಮತ್ತು ಸ್ನಾಯುಗಳಿಗಾಗಿ ನಡೆದ ಎಲ್ಲ ಏಳು ಪೋಸ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಮುರುಳಿಕುಮಾರ ಅವರು 90 ಕೆ.ಜಿ. ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಉತ್ತಮ ಅಂಗಸೌಷ್ಟವ ಮತ್ತು ಬಲವಾದ ಸ್ನಾಯು ಪ್ರದರ್ಶನದಲ್ಲಿ ಇತರರನ್ನು ಹಿಂದಿಕ್ಕಿದ ಇವರು ₨ 3,33,333 ನಗದು, ಟ್ರೋಫಿ ಹಾಗೂ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಮೇತ್ರಿ ‘ಡಬಲ್’ ಬೆಸ್ಟ್ ಪೋಸರ್: ಕರ್ನಾಟಕದ ವಿನೋದ ಮೇತ್ರಿ ಅವರು ಬೆಸ್ಟ್ ಪೋಸರ್ ಸ್ಪರ್ಧೆಯನ್ನು ₨ 25,000 ನಗದು ಮತ್ತು ಚಿನ್ನದ ಪದಕ ಗೆದ್ದು ಡಬಲ್ ಸಾಧನೆಗೈದರು. ಮೇತ್ರಿ ಅವರು ರಾಜ್ಯ ಚಾಂಪಿಯನ್‌ಷಿಪ್‌ನಲ್ಲೂ ಬೆಸ್ಟ್ ಪೋಸರ್ ಆಗಿದ್ದರು. ಕರ್ನಾಟಕದ ಕೆ. ಪಾಲಾನಿ ಮತ್ತು ಆನಂದ ಸುವರ್ಣ ಅವರು ಅನುಕ್ರಮವಾಗಿ 55 ಕೆ.ಜಿ. ಮತ್ತು 65 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.

ಕರ್ನಾಟಕ ಚಾಂಪಿಯನ್‌: ರಾಷ್ಟ್ರೀಯ ಸ್ಪರ್ಧೆಯಲ್ಲಿ ಆತಿಥೇಯ ಕರ್ನಾಟಕವು ತಲಾ 3 ಚಿನ್ನ ಮತ್ತು ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಪಡೆದು ಟೀಮ್‌ ಚಾಂಪಿಯನ್‌ ಪಟ್ಟವನ್ನು ಗಿಟ್ಟಿಸಿಕೊಂಡಿತು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ವಿಜೇತರಿಗೆ ಪ್ರಶಸ್ತಿ ನೀಡಿದರು.

ಫಲಿತಾಂಶ: 55 ಕೆಜಿ ವಿಭಾಗ: ಪಾಲಾನಿ ಕೆ. (ಕರ್ನಾಟಕ)–1, ಉಮೇಶ ಗಂಗಾಣಿ (ಕರ್ನಾಟಕ)–2, ಪ್ರತಾಪ ಕಾಲಕುಂದ್ರೀಕರ (ಕರ್ನಾಟಕ)–3, ವಿವೇಕ ಪವಾರ (ಕರ್ನಾಟಕ)–4, ಅಬ್ದುಲ್ ಖಾದರ ಕಾಗಡಿ (ಗುಜರಾತ್‌)–5.

60 ಕೆಜಿ ವಿಭಾಗ: ರಾಮ ಮಯಾಂಕ (ಮಹಾರಾಷ್ಟ್ರ)–1, ಪುರುಷೋತ್ತಮ (ಕರ್ನಾಟಕ)–2, ನಿತಿನ್ ಮಾತ್ರೆ (ಮಹಾರಾಷ್ಟ್ರ)–3, ಹನಿ (ಪಂಜಾಬ್‌) –4, ವಿಜಯಗೌಡ (ಕರ್ನಾಟಕ)–5.

65 ಕೆಜಿ ವಿಭಾಗ: ಆನಂದ ಎಸ್. ಸುವರ್ಣ (ಕರ್ನಾಟಕ)–1, ರಾಜು ಗಡಗೆ (ಮಹಾರಾಷ್ಟ್ರ)–2, ಸಯ್ಯದ್‌ ಅಕ್ಬರ್‌ (ತೆಲಂಗಾಣ)–3, ನಿಜಾಮು­ದ್ದೀನ್‌ ಸೆಪ್ಪಿ (ಉತ್ತರಪ್ರದೇಶ)–4, ನಾಮಧರ ಮೋರೆ (ಗುಜರಾತ್‌)–5.

70 ಕೆಜಿ ವಿಭಾಗ: ಎಂ. ವೆಂಕಟೇಶನ್ (ತಮಿಳುನಾಡು)–1, ಎಫ್. ಆರ್ಮು­ಗಮ್‌ (ತಿಮಿಳುನಾಡು)–2, ಜಿ. ಉದಯಕುಮಾರ (ತಮಿಳುನಾಡು)–3, ರಮೇಶ ಕೆ.ಆರ್ (ಕರ್ನಾಟಕ)–4, ಸಂಜುಕುಮಾರ ಝಾ (ದೆಹಲಿ)–5.

75 ಕೆಜಿ ವಿಭಾಗ: ವಿಘ್ನೇಶ (ತಮಿಳುನಾಡು)–1, ಸಾಗರ ಕುಟ್ಟುರ್ಡೆ (ಮಹಾರಾಷ್ಟ್ರ)–2, ನೀರಜ್‌ ಕುಮಾರ(ದೆಹಲಿ)–3, ಅಬ್ದುಲ್ ಹನ್ಸಾರಿ(ಮಹಾರಾಷ್ಟ್ರ)–4, ರಾಬಿ ಮಿಠಾಯಿ(ಅಸ್ಸಾಂ)–5.

80 ಕೆಜಿ ವಿಭಾಗ: ಬಿ. ಮಹೇಶ್ವರನ್ (ಮಹಾರಾಷ್ಟ್ರ)–1, ಸಿದ್ದು ದೇಶನೂರ (ಕರ್ನಾಟಕ)–2, ನಿತ್ಯಾನಂದ ಕೋಟ್ಯನ್‌ (ಕರ್ನಾಟಕ)–3, ಸಮಿತ್ ವರ್ಖಡೆ(ಮಹಾರಾಷ್ಟ್ರ)–4, ಮನೀಶ ಮಂಜೇಶ್ವರ (ಕರ್ನಾಟಕ)–5.

85 ಕೆಜಿ ವಿಭಾಗ: ವಿಜಯ ಬಹದ್ದೂರ (ಉತ್ತರ ಪ್ರದೇಶ)–1, ಸತ್ಯಜೋಯ್ ಸಾಹಾ(ಸೇನೆ)–2, ಅನಿಕೇತ್ ಗೌಳಿ (ಮಹಾರಾಷ್ಟ್ರ)–3, ರಾಬಿನ್ಸಿಂಗ್ (ಉತ್ತರ ಪ್ರದೇಶ)–4, ಗೋವಿಂದ ಝಾ(ಉತ್ತರ ಪ್ರದೇಶ)–5.

90 ಕೆಜಿ ವಿಭಾಗ: ಎಂ. ರಾಣಿಚಂದ್ರನ್ (ತಮಿಳುನಾಡು)–1, ಸತ್ಯನಾರಾಯಣ (ರೈಲ್ವೆ)–2, ವಿಕ್ರಾಂತ ಶರ್ಮಾ (ಮಹಾರಾಷ್ಟ್ರ)–3, ಅವಿನಾಶ ಶರ್ಮಾ (ಉತ್ತರ ಪ್ರದೇಶ)–4, ಸಾಗರ ಮಾಲಿ (ಮಹಾರಾಷ್ಟ್ರ)–5.


90 ಕೆಜಿ ಮೇಲ್ಪಟ್ಟವರು:  ಮುರಳಿಕುಮಾರ ಆರ್. (ಭಾರತೀಯ ನೌಕಾಪಡೆ)–1, ಹಿಬ್ಬಜೂರ್‌ ರೆಹಮಾನ್(ದೆಹಲಿ)–2, ವಿಕ್ರಮ (ಹರಿಯಾಣ)–3, ಶೀನಕುಮಾರ (ತಮಿಳುನಾಡು)–4, ನಾಗೇಶ ಡಗ್ಗರೆ(ಮಹಾರಾಷ್ಟ್ರ)–5.

ರಾಷ್ಟ್ರ ಚಾಂಪಿಯನ್ ಆಫ್ ಚಾಂಪಿ­ಯನ್ಸ್: ಮುರಳಿಕುಮಾರ ಆರ್.
ಬೆಸ್ಟ್‌ ಪೋಸರ್‌: ವಿನೋದ ಮೇತ್ರಿ (ಕರ್ನಾಟಕ), ಟೀಮ್‌ ಚಾಂಪಿಯನ್‌: ಕರ್ನಾಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT