ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರ್ಡೇಶ್ವರ ಜಾತ್ರೆ ನಾಳೆ

Last Updated 19 ಜನವರಿ 2012, 8:20 IST
ಅಕ್ಷರ ಗಾತ್ರ

ಭಟ್ಕಳ: ಶಿವನ ಪಂಚಕ್ಷೇತ್ರ ಗಳಲ್ಲೊಂದಾದ ಶ್ರೀ ಮುರ್ಡೇಶ್ವರ ದೇವರ ಮಹಾ ರಥೋತ್ಸವ ನಾಳೆ (ಜ.20)ರಂದು ವಿಜೃಂಭಣೆಯಿಂದ ನಡೆಯಲಿದೆ.

ಮಕರ ಸಂಕ್ರಮಣ ದಿನದಿಂದಲೇ ರಥೋತ್ಸವದ ಪೂರ್ವಭಾವಿ ಧಾರ್ಮಿಕ ಕಾರ್ಯಗಳು ಆರಂಭವಾ ಗಿದೆ. ಜ.15 ಮಕರ ಸಂಕ್ರಮಣದಂದು ಮೃತ್ತಿಕಾಹರಣ, ಧ್ವಜಾರೋಹಣ, ಬೀಜವಾಪನ, ಭೇರಿತಾಡನ, ಐನಬಲಿ, ಶಿಬಿಕಾ ಯಂತ್ರೋತ್ಸವ ಹಾಗೂ ಸಣ್ಣ ರಥೋತ್ಸವ ನಡೆಯಿತು. 16ರಂದು ಮಯೂರ ಯಂತ್ರೋತ್ಸವ, 17 ರಂದು ಗಜ ಯಂತ್ರೋತ್ಸವ, 18 ರಂದು ವೃಷಭ ಯಂತ್ರೋತ್ಸವ ನಡೆ ಯಿತು. 19ರಂದು ಡೋಲಾ ಯಂತ್ರೋತ್ಸವ, ಜ.20ರಂದು ಶ್ರೀ ದೇವರ ಮಹಾ ರಥೋತ್ಸವ ನಡೆಯ ಲಿದೆ.

ಜ.22ರಂದು ಚೂರ್ಣೋತ್ಸವ, ಅವಭೃತಸ್ನಾನ, ಅಂಕುರಾರೋಪಣ, ಧ್ವಜಾರೋಹಣದ ನಂತರ ರಥೋತ್ಸ ವದ ರೂವಾರಿಗಳಾದ ಆರ್.ಎನ್. ಶೆಟ್ಟಿ ಕುಟುಂಬದವರ ಓಕುಳಿಯೊಂದಿಗೆ ರಥೋತ್ಸವ ಸಂಪನ್ನಗೊಳ್ಳಲಿದೆ. ಸಾವಿರಾರು ಭಕ್ತಾಧಿಗಳು ರಥೋತ್ಸವ ದಲ್ಲಿ ಪಾಲ್ಗೊಳ್ಳಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT