ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷರಫ್ ಬಂಧನಕ್ಕೆ ವಾರೆಂಟ್

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಬಲೂಚಿಸ್ತಾನದ ಮುಖಂಡ ನವಾಬ್ ಅಕ್ಬರ್ ಬುಗ್ತಿ ಅವರನ್ನು 2006ರಲ್ಲಿ ಹತ್ಯೆ ಮಾಡಿದ ಆಪಾದನೆಗಾಗಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಮತ್ತು ಮಾಜಿ ಪ್ರಧಾನಿ ಶೌಕತ್ ಅಜಿಜ್ ಅವರನ್ನು ಬಂಧಿಸಲು ನ್ಯಾಯಾಲಯವು ವಾರೆಂಟ್ ಹೊರಡಿಸಿದೆ.

ಈ ಪ್ರಕರಣದಲ್ಲಿ ಪ್ರಾಂತೀಯ ಸರ್ಕಾರದ ಮಾಜಿ ಗೃಹ ಸಚಿವ ಶೋಯೆಬ್ ಅಹಮದ್ ಅವರನ್ನು ಬಂಧಿಸಲು ಪೊಲೀಸರು ಈಗಾಗಲೇ ವಾರೆಂಟ್ ಪಡೆದಿದ್ದಾರೆ. ಸದ್ಯ ಗಡೀಪಾರಾಗಿರುವ ಮುಷರಫ್ ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಬಲೂಚಿಸ್ತಾನ ಸರ್ಕಾರವು  ಫೆಡರಲ್ ಸರ್ಕಾರವನ್ನು ಕೋರಿತ್ತು.

ಈ ಹಿನ್ನೆಲೆಯಲ್ಲಿ ಅದು ಬಂಧನದ ವಾರೆಂಟ್ ಪಡೆಯುವಂತೆ ಬಲೂಚಿಸ್ತಾನ ಸರ್ಕಾರಕ್ಕೆ ತಿಳಿಸಿತ್ತು. ನ್ಯಾಯಾಲಯದ ಬಂಧನದ ವಾರೆಂಟ್ ಇದ್ದರೆ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನ್‌ರ್ ನೋಟಿಸ್ ಜಾರಿ ಮಾಡಲು ಸಾಧ್ಯವಾಗುತ್ತದೆ ಎಂದು ಫೆಡರಲ್ ಸರ್ಕಾರ ತಿಳಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT