ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷರಫ್‌ಗೆ ತೀವ್ರ ಹೃದಯಾಘಾತ!

ದೇಶದ್ರೋಹ ಆಪಾದನೆ ವಿಚಾರಣೆಗೆ ಮೂರನೇ ಬಾರಿಯೂ ಗೈರು
Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌(ಪಿಟಿಐ): ದೇಶ­ದ್ರೋಹದ ಆರೋಪ ಎದುರಿಸುತ್ತಿರುವ  ಪಾಕಿಸ್ತಾನದ ಮಾಜಿ  ಸರ್ವಾಧಿ­ಕಾರಿ ಪರ್ವೇಜ್‌  ಮುಷರಫ್‌  (೭೦) ಗುರು­ವಾರ ರಾವಲ್ಪಿಂಡಿಯ ವಿಶೇಷ ನ್ಯಾಯಾ­ಲಯಕ್ಕೆ ತೆರಳು­ತ್ತಿದ್ದಾಗ ಮಾರ್ಗ­ಮಧ್ಯೆ  ‘ತೀವ್ರ ಹೃದಯಾ­ಘಾತ’ಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ ಘಟನೆ ನಡೆಯಿತು.
 
ತೋಟದ ಮನೆ­ಯಿಂದ ಬೆಳಿಗ್ಗೆ ನ್ಯಾಯಾಲಯದತ್ತ ಹೊರಟ ಅವರ ಕಾರು ಏಕಾಏಕಿ ಆಸ್ಪತ್ರೆಯತ್ತ ಹೊರ­ಳಿತು.   ಹೃದಯಾ­ಘಾತಕ್ಕೆ ಒಳ­ಗಾಗಿದ್ದ ಅವರನ್ನು ರಾವ­ಲ್ಪಿಂಡಿಯ ಸೇನಾ ಆಸ್ಪತ್ರೆಗೆ ಸೇರಿಸಲಾಯಿತು.

ಹೀಗಾಗಿ ಮುಷ­ರಫ್‌ ಸತತ 3ನೇ ಬಾರಿಗೂತಮ್ಮ ವಿರು­ದ್ಧದ ದೇಶದ್ರೋಹ ಆಪಾದನೆ ವಿಚಾ­ರಣೆಯಿಂದ ತಪ್ಪಿಸಿಕೊಂಡಿ­ದ್ದಾರೆ.
ಇದಕ್ಕೂ ಮೊದಲು, ತಮ್ಮ ಕಕ್ಷಿದಾರ­ರಿಗೆ ಸೋಮವಾರ­ದ­ವರೆಗೆ ನ್ಯಾಯಾಲ­ಯದ ವಿಚಾರಣೆಗೆ ಹಾಜರಾ­ಗುವುದ­ರಿಂದ ವಿನಾಯ್ತಿ ನೀಡು­ವಂತೆ ಅವರ ವಕೀಲರು ಮನವಿ ಮಾಡಿ­ಕೊಂಡಿ­ದ್ದರು.  ಮನವಿ­ ತಳ್ಳಿ ಹಾಕಿದ ನ್ಯಾಯಾ­ಲಯ, ಯಾವುದೇ ಕಾರಣಕ್ಕೂ ಗುರು­ವಾರ ನ್ಯಾಯಾ­ಲಯಕ್ಕೆ ಹಾಜ­ರಾಗು­ವು­ದ­ರಿಂದ ಅವರು ತಪ್ಪಿಸಿ­ಕೊಳ್ಳು­­ವಂತೆ­ ಇಲ್ಲ ಎಂದು ಕಟ್ಟಪ್ಪಣೆ ಮಾಡಿತ್ತು. 

2007ರಲ್ಲಿ ತುರ್ತು ಪರಿಸ್ಥಿತಿ ಹೇರಿ ನ್ಯಾಯಮೂರ್ತಿ­ಗಳನ್ನು ಬಂಧಿಸಿದ್ದ ಪ್ರಕರಣದಲ್ಲಿ ದೇಶದ್ರೋಹ  ಆಪಾದನೆ ಎದುರಿಸುತ್ತಿರುವ ಮುಷರಫ್‌,  ಆರೋಪ ಸಾಬೀತಾದಲ್ಲಿ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಗೆ ಒಳಗಾಗುವ ಸಾಧ್ಯತೆ ಇದೆ.

ಇದಕ್ಕೂ ಮೊದಲು ನಡೆದ ಮತ್ತೊಂದು ನಾಟಕೀಯ ಬೆಳವಣಿಗೆ­ಯಲ್ಲಿ ಮುಷರಫ್‌ ಪರ ವಾದ ಮಂಡಿಸಬೇಕಿದ್ದ ವಕೀಲ ಅನ್ವರ್‌ ಮನ್ಸೂರ್‌,  ರಾತ್ರಿ ತಮಗೆ ಸರಿಯಾಗಿ ನಿದ್ದೆಯಾಗಿಲ್ಲ ಎಂಬ ಕಾರಣ ನೀಡಿ ಹೊರ ನಡೆದರು.

ಬುಧವಾರ ರಾತ್ರಿಯಿಂದ ಬೆಳಗಿನ ಜಾವದವರೆಗೂ ಅಪರಿಚಿತರು  ಮನೆ  ಕರೆಗಂಟೆ  ಒತ್ತಿ ತೊಂದರೆ ನೀಡಿದರು. ಇದ­ರಿಂದ ಒತ್ತಡಕ್ಕೆ ಒಳಗಾಗಿದ್ದೇನೆ ಎಂದರು. ಈ ಕುರಿತು ಸೂಕ್ತ ತನಿಖೆ ನಡೆಸಲು ಆದೇಶಿಸುವುದಾಗಿ ನ್ಯಾಯಾ­ಧೀಶರು ಭರವಸೆ ನೀಡಿದರೂ ಮನ್ಸೂರ್‌  ಹೊರ ನಡೆದರು.

ಮುಷರಫ್‌ ವಕೀಲರ ತಂಡದ ಮುಖ್ಯಸ್ಥ ಶರೀಫುದ್ದೀನ್‌ ಪೀರ್‌ಜಾದಾ ಅವರು, ಸರ್ಕಾರಿ ವಕೀಲರು ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಿದೇಶಕ್ಕೆ ಕರೆದೊಯ್ಯಲು ಚಿಂತನೆ
ಹೆಚ್ಚಿನ ಚಿಕಿತ್ಸೆಗಾಗಿ ಮುಷರಫ್‌ ಅವರನ್ನು ವಿದೇಶಕ್ಕೆ ಕರೆ­ದೊಯ್ಯುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುಷ­ರಫ್‌  ಪಕ್ಷದ ವಕ್ತಾರ ಆಸಿಯಾ ಇಶಾಕ್‌ ತಿಳಿಸಿದ್ದಾರೆ.

ದೇಶಬಿಟ್ಟು ತೆರಳದಂತೆ ಮುಷರಫ್‌ ಅವರಿಗೆ ಪಾಕಿಸ್ತಾನ ಸರ್ಕಾರ ಈ  ಮೊದಲೇ ನಿರ್ಬಂಧ ಹೇರಿದೆ.  ಇದರಿಂದಾಗಿ ಸರ್ಕಾರದ ಅನುಮತಿ ಇಲ್ಲದೇ  ಅವರು ದೇಶ ಬಿಟ್ಟು ತೆರಳುವಂತಿಲ್ಲ.

ದೃಢಪಡಿಸಿದ ವೈದ್ಯರು
ಮುಷರಫ್‌ ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತ­ವಾಗಿ­ರುವು­ದನ್ನು ದೃಢಪಡಿಸಿದರು.  

ಸದ್ಯ ಅವರನ್ನು ರಾವಲ್ಪಿಂಡಿಯ ಸೇನಾ ಆಸ್ಪತ್ರೆ ತುರ್ತು ನಿಗಾ ಘಟಕ­ದಲ್ಲಿ (ಸಿಸಿಯು) ಇರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT