ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗೂರು: ಹೂವಿನ ಪಲ್ಲಕ್ಕಿ ಉತ್ಸವ

Last Updated 1 ಫೆಬ್ರುವರಿ 2013, 9:49 IST
ಅಕ್ಷರ ಗಾತ್ರ

ತಿ.ನರಸೀಪುರ: ತಾಲ್ಲೂಕಿನ ಮೂಗೂರು ಜಾತ್ರಾ ಮಹೋತ್ಸವದ ಅಂಗವಾಗಿ ಮೂಗೂರು ಚಿಗುರು ಕಡೆಯುವ ಹಾಗೂ ಹೂವಿನ ಪಲ್ಲಕ್ಕಿ ಉತ್ಸವ ವಿಶೇಷ ಕಾರ್ಯಕ್ರಮ ಬುಧವಾರ ನಡೆಯಿತು.

ಗ್ರಾಮದಲ್ಲಿ ನಡೆಯುವ ಶ್ರೀತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ 4ನೇ ದಿನವಾದ ಬುಧವಾರ ಹೊಸಹಳ್ಳಿ ಗ್ರಾಮದಲ್ಲಿರುವ ನೇರಳೆ ಮರದಲ್ಲಿ ಹೊಸ ಎಲೆಗಳು ಚಿಗುರೊಡೆದಿದ್ದವು. ಇದಕ್ಕೆ ಮೂಗೂರು- ಚಿಗುರು ಎನ್ನಲಾಗುತ್ತದೆ.

ಸಾಂಪ್ರಾದಾಯಿಕವಾಗಿ ಪೂಜೆ ಸಲ್ಲಿಸುವ ಕುಟುಂಬದವರೊಬ್ಬರು ಹಿಂದಿನ ನಡು ರಾತ್ರಿ ಗ್ರಾಮದಿಂದ ಹೊಸಹಳ್ಳಿ ಗ್ರಾಮ ಸಮೀಪವಿರುವ ನೇರಳೆ ಮರದ ಬಳಿಗೆ ತೆರಳಿ ಅಲ್ಲಿ ಪೂಜೆ ಮಾಡಿ ಒಂದು ಕೊಂಬೆಯ ಎಲೆಗಳನ್ನು ಬಿಡಿಸುತ್ತಾರೆ. (ಎಲೆಗಳನ್ನು ಹೂರುವುದು) ಮಾರನೇ  ಮುಂಜಾನೆ ಮರದ ಬಳಿ ತೆರಳಿದರೆ ಅಲ್ಲಿ ಎಲೆ ಬಿಡಿಸಿದ ಕೊಂಬೆಯಲ್ಲಿ ಹೊಸ ಎಲೆಗಳು ಚಿಗುರೊಡೆದಿರುತ್ತವೆ. ಎಲೆಗಳ ಸಂಖ್ಯೆಯ ಮೇಲೆ ಗ್ರಾಮಕ್ಕೆ ಶುಭ ಹಾಗೂ ಅಶುಭ ಸೂಚನೆಗಳು ತಿಳಿಯುತ್ತದೆ ಎಂಬ ಜನರ ನಂಬಿಕೆ ಇದೆ.  ಮಂಗಳವಾರ ಗ್ರಾಮದ ಸಾಂಪ್ರಾದಾಯಿಕ ಮನೆತನದವರು ಹೊಸಹಳ್ಳಿ ಗ್ರಾಮದ  ಬಳಿಯ ನೇರಳೆ ಮರಕ್ಕೆ ಪೂಜೆ ಸಲ್ಲಿಸಿದ್ದರು. ಕೊಂಬೆಯ ಎಲೆಗಳನ್ನು ಬಿಡಿಸಿದ್ದರು. ಬುಧವಾರ ಮುಂಜಾನೆ ಕೊಂಬೆಯಲ್ಲಿ ಹೊಸ ಎಲೆಗಳು ಚಿಗುರೊಡೆದಿದ್ದವು.

ಗ್ರಾಮದಲ್ಲಿ ಬುಧವಾರ ಹರಕೆ ಹೊತ್ತ ಮಹಿಳೆಯರು ದೀವಟಿಗೆ ಸೇವೆ, ಬಾಯಿ ಬೀಗ ಮತ್ತಿತರ ಸೇವಾ ಕೈಂಕರ್ಯಗಳನ್ನು  ನಡೆಸಿದರು

ಪ್ರತಿ ವರ್ಷ ಜನವರಿ ಜಾತ್ರಾ ಮಹೋತ್ಸವದ ಬಹಳ ವಿಶೇಷ ವಾದ ಈ ಕಾರ್ಯಕ್ರಮದಲ್ಲಿ ಗ್ರಾಮ ದೇವತೆ ಶ್ರೀತ್ರಿಪುರ ಸುಂದರಿ ಅಮ್ಮನವರನ್ನು ಚಿನ್ನಾಭರಣಗಳಿಂದ ಅಲಂಕಾರ ಮಾಡಿ ಮೊದಲು ದೇವಾಲಯದಲ್ಲಿ ಪ್ರದಕ್ಷಿಣೆ ನಡೆಸಿ ನಂತರ ರಥದ ಬೀದಿ ಮಾರ್ಗವಾಗಿ ಹೊಸಹಳ್ಳಿ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿಯೂ ಕೂಡ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಗೌಜಲಹಕ್ಕಿಗಳ ಕಾಳಗವನ್ನು ಹೊಸಹಳ್ಳಿ ಗ್ರಾಮದಲ್ಲಿ ಆಚರಿಸುವ ಪದ್ಧತಿ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT