ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಢನಂಬಿಕೆಯ ಮಡೆಸ್ನಾನ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದೇವರ ಹೆಸರಿನಲ್ಲಿ ನಡೆಯುವ ಯಾವುದೇ ಆಚರಣೆಗಳು  ಮಾರಕ ಹಾಗೂ ಕಂಟಕವಾಗುವಂತಿರಬಾರದು. ಮಡೆ ಮಡೆ ಸ್ನಾನ ಆಚರಣೆಯಲ್ಲಿ ಯಾವುದೇ ಜಾತಿ ಜನಾಂಗ ಎನ್ನುವುದು ಮುಖ್ಯವಲ್ಲ . ಯಾರೇ ಉಂಡ ಎಂಜಲೆಲೆ ಮೇಲೆ ಉರುಳಾಡುವುದು ಮಾರಕ ರೋಗಗಳಿಗೂ ಕಾರಣವಾಗಬಹುದು.

ವಿದ್ಯೆ-ಬುದ್ಧಿ ಇರುವ ಮಾನವ ಕುಲ  ಶುಚಿಯಾಗಿರುವುದನ್ನು ರೂಢಿಸಿಕೊಂಡರೆ, ಅದರ ಬಗ್ಗೆ ತಿಳಿವಳಿಕೆ ಮೂಡಿಸಿಕೊಂಡು, ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗೆಯೇ ದೇವರಿಗೆ ನೈವೇದ್ಯ ಮಾಡಿದ ಅನ್ನ ಭಕ್ತಿಯಿಂದ ಸ್ವೀಕರಿಸುವ ಪ್ರಸಾದವಾಗಬೇಕೆ ವಿನಾ ಕೈ-ಕಾಲುಗಳಲ್ಲಿ ತುಳಿಯುವ ಕಸವಾಗಬಾರದು. ಹಾಗಾಗಿ ನೈವೇದ್ಯದ ಮಡೆಸ್ನಾನ ಕೂಡ ಅನ್ನಕ್ಕೆ ಮಾಡುವ ಅಪಚಾರವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT