ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಚಿರತೆ ಮರಿ ಪತ್ತೆ

Last Updated 15 ಡಿಸೆಂಬರ್ 2013, 19:52 IST
ಅಕ್ಷರ ಗಾತ್ರ

ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ಸಮೀಪದ ಕಡೂರ ಗ್ರಾಮದ ಹೊರ­ವಲಯದಲ್ಲಿ ಮೂರು ಚಿರತೆ ಮರಿ­ಗಳು ಪತ್ತೆಯಾಗಿವೆ. ಅವುಗಳನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು.

ಕುಡಿವ ನೀರು ಪೂರೈಕೆ ಕೊಳವೆ ಒಳಗೆ ಮರಿಗಳು ಇದ್ದುದರಿಂದ ಅವು ಕಾಣಿಸುತ್ತಿರಲಿಲ್ಲ. ಆದರೆ ಬ್ಯಾಟರಿ (ಟಾರ್ಚ್‌) ಹಾಕಿ ನೋಡಿದರೆ ಕಾಣಿಸುತ್ತಿ­ದ್ದವು. ಕೊಳವೆ ಮಧ್ಯ­ಭಾಗದಲ್ಲಿ ಚಿರತೆಗಳಿದ್ದುದರಿಂದ ಅವುಗಳನ್ನು ಹೊರ ತೆಗೆಯುವ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ.

ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ­ಯಿಂದಲೇ ಮರಿಗಳನ್ನು ಕಾಯು­ತ್ತಿದ್ದು, ರಕ್ಷಣೆಗೆ ಪ್ರಯತ್ನಿಸುತ್ತಿ­ದ್ದಾರೆ. ರಾತ್ರಿ ವೇಳೆ ತಾಯಿ ಚಿರತೆ ಪ್ರತ್ಯಕ್ಷ­ವಾದರೆ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಅರಣ್ಯ ಇಲಾಖೆಯ  ಅಧಿಕಾರಿಗಳು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT