ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಶಕಗಳ ಸಂಭ್ರಮ

Last Updated 2 ಮೇ 2012, 19:30 IST
ಅಕ್ಷರ ಗಾತ್ರ

ತಮ್ಮ ಚಿಕ್ಕ ಸಾಧನೆಗೆ ದೊಡ್ಡ ಪುರಸ್ಕಾರ ನೀಡಲಾಗಿದೆ ಎಂದರು ನಿರ್ದೇಶಕ ಗಿರೀಶ್ ಕಾಸರವಳ್ಳಿ. `ವಿಜಯ ಫಿಲ್ಮ್ ಇನ್‌ಸ್ಟಿಟ್ಯೂಟ್ ನೀಡಿದ `ಗೋಲ್ಡನ್ ಫ್ರೇಮ್~ ಪ್ರಶಸ್ತಿ ಪಡೆದ ನಂತರ ಅವರಾಡಿದ ಮಾತು ಅದು.

`ವಿಜಯ ಫಿಲ್ಮ್ ಇನ್‌ಸ್ಟಿಟ್ಯೂಟ್~ಗೆ 30 ವರ್ಷ ತುಂಬಿದೆ. ಇತ್ತೀಚೆಗೆ ಆ ಸಂಭ್ರಮವನ್ನು ಆಚರಿಸಿಕೊಂಡ ಸಂಸ್ಥೆ ನಿರ್ದೇಶಕ ತಿಪಟೂರು ರಘು ಅವರಿಗೂ `ಸಿಲ್ವರ್ ಸ್ಕ್ರೀನ್~ ಪ್ರಶಸ್ತಿ ಪ್ರದಾನ ಮಾಡಿತು.

`ಸಿನಿಮಾ ತರಬೇತಿ ಸಂಸ್ಥೆ ಎರಡು ರೀತಿಯಲ್ಲಿ ಕಲಿಸಬಹುದು. ಮೊದಲನೆಯದು ತಾಂತ್ರಿಕ ಕಲಿಕೆ. ಎರಡನೆಯದು ಸಿನಿಮಾ ಬಗೆಗಿನ ಫಿಲಾಸಫಿಯನ್ನು ಹೇಳುತ್ತಾ ಹೋಗುವುದು. ಈ ನಿಟ್ಟಿನಲ್ಲಿ ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್ ಉತ್ತಮ ಉದಾಹರಣೆ.

ಇಂದಿನ ಸಂದರ್ಭದಲ್ಲಿ ಹೊಸ ಆಕಾಂಕ್ಷೆ ಮತ್ತು ಹೊಸ ದಿಕ್ಕಿನಲ್ಲಿ ಯೋಚಿಸುವುದು ಮುಖ್ಯ. ಫಿಲ್ಮ್ ತರಬೇತಿ ಸಂಸ್ಥೆಗಳಿಗೆ ಪರಂಪರೆ ಹಾಗೂ ಪ್ರಗತಿಯ ಕೊಡುವಿಕೆಯೂ ತಿಳಿದಿರಬೇಕು. ಅನುದಾನ ನೀಡುವ ಸರ್ಕಾರವು ಸ್ಪಷ್ಟ ನಿಲುವು ತಳೆದರೆ ನಮ್ಮ ಸಿನಿಮಾಗಳಲ್ಲಿ ಯುವ ಪಡೆಯನ್ನು ಬೆಳೆಸಬಹುದು~ ಎಂದು ಅಭಿಪ್ರಾಯಪಟ್ಟರು ಕಾಸರವಳ್ಳಿ. ಜೊತೆಗೆ ಸಂಸ್ಥೆಗೆ ಅಗತ್ಯ ಸಲಹೆಗಳನ್ನು ನೀಡುವುದಾಗಿಯೂ ನುಡಿದರು.

ಸಮಾರಂಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಮನರಂಜನಾ ಕಾರ್ಯಕ್ರಮ ನೀಡಿದರು. ಹಾಗೆಯೇ ಗಿರೀಶ್ ಕಾಸರವಳ್ಳಿಯವರ ಸಾಕ್ಷ್ಯಚಿತ್ರ ಹಾಗೂ ಸಂಸ್ಥೆಯ ಮೂರು ದಶಕದ ಸಾಧನೆಯನ್ನು ದೃಶ್ಯರೂಪದಲ್ಲಿ ತೋರಿಸಿದ್ದು ವಿಶೇಷ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು, ವಾರ್ತಾ ಇಲಾಖೆ ನಿರ್ದೇಶಕ ಬೇವಿನ ಮರದ, ಹಿರಿಯ ನಿರ್ದೇಶಕರಾದ ಭಾರ್ಗವ, ಗೀತಪ್ರಿಯ, `ವಿಜಯ ಫಿಲ್ಮ್ ಇನ್‌ಸ್ಟಿಟ್ಯೂಟ್~ ವ್ಯವಸ್ಥಾಪಕ ನಿರ್ದೇಶಕ ಈ.ವಿ. ಕುಮಾರ್ ಉಪಸ್ಥಿತರಿದ್ದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT