ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆರಂಭ

Last Updated 10 ಸೆಪ್ಟೆಂಬರ್ 2011, 10:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ನೃಪತುಂಗ ಬೆಟ್ಟದ ಮೇಲಿರುವ ಮೂರು ಜಲ ಸಂಗ್ರಹಾಗಾರಗಳು ಶುಕ್ರವಾರ ಅಮ್ಮಿನಬಾವಿ ಪಂಪ್ ಸ್ಟೇಶನ್‌ನಿಂದ ನೀರು ಪಡೆಯುವ ಮೂಲಕ ಅವಳಿನಗರದ ಜನರ      ಬಹು ದಿನಗಳ ಬೇಡಿಕೆ ಕೊನೆಗೂ     ಈಡೇರಿತು.

ಮೂರನೇ ಹಂತದ ಯೋಜನೆಯಂತೆ ಸವದತ್ತಿ ಜಾಕ್‌ವೆಲ್‌ನಿಂದ ನೀರು ಪಡೆಯುವ ಪ್ರಕ್ರಿಯೆ ಗುರುವಾರವೇ ಆರಂಭವಾಗಿತ್ತು. ಕೊಳವೆ ಮಾರ್ಗ ಹಾಗೂ ಜಲ ಸಂಗ್ರಹಾಗಾರಗಳನ್ನು ಒಮ್ಮೆ ಸ್ವಚ್ಛಗೊಳಿಸಬೇಕಾಗಿದ್ದ ಕಾರಣ ನೀರು ಸಂಗ್ರಹವನ್ನು ಶುಕ್ರವಾರ ಆರಂಭಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ `ಪ್ರಜಾವಾಣಿ~ಗೆ ತಿಳಿಸಿದರು.

ಜಲ ಮಂಡಳಿ ಅಧಿಕಾರಿಗಳು `ಮಾತು ಕೊಟ್ಟಂತೆ ನಡೆಯಲು ಬುಧವಾರದಿಂದ ಶುಕ್ರವಾರ ಸಂಜೆವರೆಗೆ ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ನೃಪತುಂಗ ಬೆಟ್ಟದಿಂದ ನೀರು ಪಡೆದಿದ್ದೇವೆ ಎಂಬ ಸಂದೇಶ ಸಿಗುತ್ತಿದ್ದಂತೆಯೇ ಅಮ್ಮಿನಬಾವಿ ಸ್ಟೇಶನ್‌ನಲ್ಲಿ ಬೀಡುಬಿಟ್ಟಿದ್ದ ಅಧಿಕಾರಿಗಳ ತಂಡ ಸಂಭ್ರಮದಿಂದ ನಲಿಯಿತು. ಪರಸ್ಪರರು ಅಭಿನಂದಿಸಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡರು.

ಹಳೇ ಹುಬ್ಬಳ್ಳಿ ಸೇರಿದಂತೆ ಎಲ್ಲ ಭಾಗಕ್ಕೂ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆರಂಭವಾ–ಗಿದ್ದು, ಶನಿವಾರ ನೀರು ಪಡೆದವರು ಮೂರು ದಿನಕ್ಕೆ ಮತ್ತೆ ನೀರು ಪಡೆಯಲಿದ್ದಾರೆ ಎಂದು ಜಲ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಕೆ.ಪಿ. ಜಯರಾಂ, ಕೃಷ್ಣಮೂರ್ತಿ ಹಾಗೂ ಸಿದ್ಧನಾಯಕ ಹರ್ಷದಿಂದ ಹೇಳಿದರು.

ಶುಕ್ರವಾರದಿಂದ ನಮಗೆ ಹೆಚ್ಚುವರಿಯಾಗಿ ನಿತ್ಯ 68 ದಶಲಕ್ಷ ಲೀಟರ್ ನೀರು ಲಭ್ಯವಾಗಿದ್ದರಿಂದ ಈಗ ನೀರಿನ ಸಮಸ್ಯೆ ಇಲ್ಲ. ಪೂರೈಕೆ ವ್ಯವಸ್ಥೆ ಕೂಡ ಸುಧಾರಣೆಯಾದರೆ ಹುಬ್ಬಳ್ಳಿ-ಧಾರವಾಡದಲ್ಲಿ ಇನ್ನುಮುಂದೆ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಅವರು ವಿವರಿಸಿದರು.

~ಪಾಲಿಕೆ ಸಾಮಾನ್ಯ ಸಭೆಯಲ್ಲಿ ನೀಡಿದ ಪ್ರಕಟಣೆಯಂತೆ ನಾವು ನಡೆದುಕೊಂಡಿದ್ದೇವೆ. ಅವಳಿನಗರ ಇನ್ನುಮುಂದೆ ಬೇಕಾದಷ್ಟು ನೀರು ಪಡೆಯಲಿದೆ. ಸವದತ್ತಿ ಜಾಕ್‌ವೆಲ್‌ನಿಂದ ಮೂರ ನೇ ಹಂತದ ಯೋಜನೆ ಯಶಸ್ವಿಯಾಗಿ ಕಾರ್ಯಾಚರಣೆ ಆರಂಭಿಸಿದ ವರ್ತಮಾನ ಕೇಳಿ ಆನಂದವಾಗಿ–ದೆ~ ಎಂದು ಮೇಯರ್ ಪೂರ್ಣಾ ಪಾಟೀಲ ಪ್ರತಿಕ್ರಿಯಿಸಿದರು.

~ಹಲವು ತಿಂಗಳ ಹಿಂದೆಯೇ ಈ ಯೋಜನೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ದೊಡ್ಡ ಯೋಜನೆ ಹಲವು ಕಾರಣಗಳಿಂದ ವಿಳಂಬವಾಗಿದೆ. ಆದರೆ, ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆ ಆರಂಭವಾಗಿದ್ದು ಅವಳಿನಗರದ ಜನತೆಗೆ ಸಂತಸ ತಂದಿದೆ. ಈ ಹರ್ಷದಲ್ಲಿ ನಾವೂ ಭಾಗಿಯಾ–ಗಿದ್ದೇವೆ~ ಎಂದು ಅವರು ಹೇಳಿದರು.

~ಇನ್ನು ಎಂಟು ದಿನಗಳ ನಂತರ ಧಾರವಾಡದಲ್ಲೂ ಮೂರು ದಿನಕ್ಕೊಮ್ಮೆ ನೀರು ಪೂರೈಕೆಯಾ–ಗಲಿದೆ~ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ~ಪೂರೈಕೆ ವ್ಯವಸ್ಥೆ ಸುಧಾರ–ಣೆಯಾದರೆ ನಿತ್ಯ ನೀರು ಪೂರೈಕೆ ಮಾಡುವ ಯೋಜನೆ ಇದೆ~ ಎಂದು ಡಾ.ತ್ರಿಲೋಕಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT