ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೇ ದಿನದಲ್ಲಿ 1379 ವ್ಯಾಜ್ಯಗಳ ಇತ್ಯರ್ಥ; ರಾಜ್ಯಕ್ಕೆ ಮಾದರಿ

Last Updated 6 ಫೆಬ್ರುವರಿ 2012, 7:15 IST
ಅಕ್ಷರ ಗಾತ್ರ

ರೋಣ: `ವ್ಯಾಜ್ಯ ಪ್ರಕರಣಗಳ ನಿರ್ವಹಣೆಗಾಗಿ ಲೋಕ ಆದಾಲತ್‌ಗಳನ್ನು  ಸ್ಥಾಪಿಸಿದ್ದು, ಆ ಮೂಲಕ ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರೆಯಲಿದೆ~ ಎಂದು  ಹಿರಿಯ ಶ್ರೇಣಿ ನ್ಯಾಯಾಧೀಶ ಜಿ.ಡಿ. ಮಾಹುರ್ಕರ ಹೇಳಿದರು.

ಪಟ್ಟಣದ ಕೋರ್ಟ್ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು. ಹಾಗೂ ಪುರಸಭೆ  ಸಹಯೋಗದಲ್ಲಿ  ಶನಿವಾರ ಏರ್ಪಡಿಸಲಾಗಿದ್ದ ಮೆಗಾ ಲೋಕ ಅದಾಲತ್ ಸಮಾರೋಪದಲ್ಲಿ ಅವರು ಮಾತನಾಡಿದರು.

`ಜೀವನದಲ್ಲಿ ಉಳಿತಾಯ ಮಾಡಿದ ಹಣವನ್ನು ವ್ಯಾಜ್ಯಕ್ಕಾಗಿ ಖರ್ಚು ಮಾಡುವುದು ಬೇಡ. ಕಕ್ಷಿದಾರರು ವಿಶಾಲ ಮನೋಭಾವನೆ ಹೊಂದಿದ್ದರೆ, ಕೋರ್ಟ್ ಮೆಟ್ಟಲು ಹತ್ತುವ ಸಂದರ್ಭ ಬರಲಾರದು. ಆದ್ದರಿಂದ ಸಣ್ಣ ಪುಟ್ಟ ವ್ಯಾಜ್ಯಗಳನ್ನು ತಮ್ಮಲ್ಲಿ ಬಗೆ ಹರಿಸಿಕೊಂಡು ಜೀವನ ಸಾಗಿಸಬೇಕು~ ಎಂದು ಹೇಳಿದರು.

`ಲೋಕ ಅದಾಲತ್ ಮೂಲಕ  1588  ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಬಗೆ ಹರಿಸಿ ರಾಜ್ಯದಲ್ಲಿಯೇ ಇಲಾಖೆ ವಿರುದ್ದ ಪ್ರಕರಣ ದಾಖಲಿಸಿದ್ದರು. ನಂತರ ಲೋಕ ಅದಾಲತ್ ಮೂಲಕ ಈ ವ್ಯಾಜ್ಯ ಪ್ರಕರಣಗಳನ್ನು ಕೇವಲ ಮೂರು ದಿನದಲ್ಲಿ ಬಗೆ ಹರಿಸಿದ್ದು ರಾಜ್ಯಕ್ಕೆ ಮಾದರಿಯಾಗಿದೆ~ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಕಂದಗಲ್ ಮಾತನಾಡಿ, `ಲೋಕ ಅದಾಲತ್‌ನ ಮುಖ್ಯ ಉದ್ದೇಶ ಹಣ ಮತ್ತು ವೇಳೆಯನ್ನು ಉಳಿಸುವುದಾಗಿದೆ. ಈಗಾಗಲೆ ರೈತರಿಗೆ ಸಂಬಂಧ ಪಟ್ಟ ವ್ಯಾಜ್ಯಗಳನ್ನು ಬಗೆಹರಿಸಿ ಭೂಮಿ ಕಳೆದುಕೊಂಡ ರೈತರಿಗೆ ರೂ. 6 ಕೋಟಿ  ಪರಿಹಾರ ಧನವನ್ನು ಏಪ್ರಿಲ್ ಅಂತ್ಯದೊಳಗೆ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ~ ಎಂದರು.

ವಕೀಲರಾದ ವಿ.ಎ.ದಿಂಡೂರ, ಎಲ್. ಬಿ. ಬಾಣದ ಮಾತನಾಡಿದರು.
ಪಿ.ಎಸ್. ಬಂಗಾರಿ ಸ್ವಾಗತಿಸಿದರು. ಬಿ.ಆರ್.ಯಳವತ್ತಿ ನಿರೂಪಿಸಿದರು.  ಬಿ.ಎಸ್. ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT