ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಮರೀಚಿಕೆ !

Last Updated 6 ಜನವರಿ 2014, 6:37 IST
ಅಕ್ಷರ ಗಾತ್ರ

ಬ್ಯಾಡಗಿ: ಚುನಾವಣೆಯ ಸಂದರ್ಭ­ದಲ್ಲಿ ಭರಪೂರ ಭರವಸೆ ನೀಡುವ ರಾಜ­ಕಾರಣಿ­ಗಳು ಅಧಿಕಾರ ಸಿಕ್ಕ ಬಳಿಕ ಜನರನ್ನು ಮರೆಯುತ್ತಾರೆ. ಅಧಿಕಾರ­ಸ್ಥರ ದೃಷ್ಟಿಯಲ್ಲಿ ಬಡವರು ಮತ ಬ್ಯಾಂಕ್‌ಗಳಷ್ಟೆ ಎಂದು ಬ್ಯಾಡಗಿಯ ಯಡಿಯೂರಪ್ಪ ಬಡಾವಣೆಯ ನಿವಾಸಿ­ಗಳು ವಿಷಾದದಿಂದ ಹೇಳುತ್ತಾರೆ.

ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣದ ನಿವೇಶನರಹಿತ ಕಡುಬಡವ­ರಿಗೆ ನಿವೇಶನ ಒದಗಿಸುವ ಉದ್ದೇಶ­ದಿಂದ ವಾಯು­ವಿಹಾರಕ್ಕೆ ಮೀಸಲಿಟ್ಟಿದ್ದ ಸರ್ಕಾರಿ ಜಾಗವನ್ನು ವಶಕ್ಕೆ ತೆಗೆದು­ಕೊಂಡು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿ­ಯೂರಪ್ಪ ಬಡಾವಣೆ ಎಂದು ಹೆಸರಿಸಿ  ಅಭಿವೃದ್ಧಿಪಡಿಸ­ಲಾಯಿತು.

ತುರಾತುರಿಯಲ್ಲಿ ಹಕ್ಕುಪತ್ರಗಳನ್ನು ಸಹ ವಿತರಿಸ­ಲಾ­ಯಿತು. ಆದರೆ ನಿವೇಶನ ವಿತರಿಸುವಲ್ಲಿ ಕಾಣದ ಕೈ ಕೆಲಸ ಮಾಡಿತ್ತು. ನಿವೇಶನ ಕೊಡಿಸುವ ನೆಪ­ದಲ್ಲಿ ಬಡವರಿಂದ ಹಣ ವಸೂಲಿ ಸಹ ಮಾಡಲಾಯಿತು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಆದರೆ ಎರಡು ವರ್ಷ ಕಳೆದರೂ ಬಡಾವಣೆ­ಯಲ್ಲಿ ಮೂಲ ಸೌಲಭ್ಯ ಒದಗಿಸಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಕತ್ತಲೆಯಲ್ಲಿಯೇ ಬದುಕು ಸಾಗಿಸಬೇಕಾಗಿದೆ.

‘ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ರಾತ್ರಿ ಮೇಣದ ಬತ್ತಿ, ಚಿಮಣಿಗಳನ್ನೇ ಅವಲಂಭಿಸ­ಬೇಕಾ­ಗಿದೆ. ಕತ್ತಲೆಯಾದರೆ ಸಾಕು ಹಾವು, ಚೇಳುಗಳ ಭಯ ಕಾಡುತ್ತದೆ’ ಎನ್ನುತ್ತಾರೆ ಸೋಮವ್ವ.

‘ಆಶ್ರಯ ಬಡಾವಣೆಯ ರಸ್ತೆ ಸಂಪೂರ್ಣ ಹಾಳಾಗಿದ್ದು ಅಲ್ಲಿ ತಿರು­ಗಾಡು­ವುದು ಕಷ್ಟವಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆಗಾಲದಲ್ಲಿ ಇಲ್ಲಿನ ಜನರ ಸ್ಥಿತಿ ಹೇಳತೀರದು. ಮೂಲಸೌಕರ್ಯ ಕಲ್ಪಿ­ಸು­ವಂತೆ ಪುರಸಭೆಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನ­ವಾಗಿಲ್ಲ’ ಎನ್ನುತ್ತಾರೆ ಇಲ್ಲಿನ ನಿವಾಸಿ ಪರಸಪ್ಪ.

ಮೂಲಸೌಕರ್ಯ ಕಲ್ಪಿಸಲು ಸರ್ಕಾ­ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನು­ಮೋದನೆ ಸಿಕ್ಕಿ, ಅನುದಾನ ಬಿಡುಗಡೆ­ಯಾದಾಗ ಅಭಿವೃದ್ಧಿ ಕಾರ್ಯ ಕೈಗೊಳ್ಳ­ಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT