ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಅಂಗನವಾಡಿ ಕೇಂದ್ರ

Last Updated 4 ಜೂನ್ 2011, 6:05 IST
ಅಕ್ಷರ ಗಾತ್ರ

ಹಳೇಬೀಡು: ಕಳೆದ ವರ್ಷ ಅರಂಭವಾದ ಬೂದಿಗುಂಡಿಯ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಕಿಷ್ಕಿಂಧೆ ಪ್ರದೇಶದ  ಮೂಲಸೌಲಭ್ಯಗಳೇ ಇಲ್ಲದ ಬಾಡಿಗೆ ಮನೆಯೊಂದರಲ್ಲಿ ಕೇಂದ್ರ ನಡೆಯುತ್ತಿದೆ.

ಮಕ್ಕಳು ಆಟ ಆಡುವುದಕ್ಕೆ ಜಾಗವಿಲ್ಲ, ಗಾಳಿ ಬೆಳಕಿನ ಕೊರತೆ,  ಕೋಣೆ ತುಂಬಾ ಕಿರಿದಾಗಿದೆ. ಇಲ್ಲಿನ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇಂಥ ಅಸುರಕ್ಷಿತ ಮನೆಯಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ.

ಮಕ್ಕಳಿಗೆ ಅಗತ್ಯವಿರುವ ಆಟಿಕೆಗಳು ಸಹ ಕೇಂದ್ರದಲ್ಲಿ ಇಲ್ಲ. ಮಕ್ಕಳಿಗೆ ನೀಡುವ ಆಹಾರ ತಯಾರಿಸಲು ಇಲಾಖೆ ಪಾತ್ರೆಗಳನ್ನು ನೀಡಿಲ್ಲ, ಕುಳಿತುಕೊಳ್ಳಲು ಮಣೆ ಇಲ್ಲ. ಕಾರ್ಯಕರ್ತೆ,  ಸಹಾಯಕಿ ಮನೆ ಬಾಡಿಗೆ ಕೊಡುವುದಲ್ಲದೇ, ಅವರ ಮನೆಯಿಂದಲೇ ಪಾತ್ರೆ ತಂದು ಬಿಸಿ ನೀರು, ಆಹಾರ ತಯಾರಿಸುತ್ತಿದ್ದಾರೆ. ಮಕ್ಕಳು ಕುಳಿತುಕೊಳ್ಳಲು ಪ್ಲಾಸ್ಟಿಕ್ ಚೀಲದ ತಡಪಾಲುಗಳನ್ನು ಸಹ ಸಿಬ್ಬಂದಿಯೇ ಹೊಂದಿಸಿದ್ದಾರೆ.

ಅಂಗನವಾಡಿಗೆ ಕಟ್ಟಡ ನಿರ್ಮಿಸಲು ಗ್ರಾಮ ಪಂಚಾಯತಿಯವರು ನಿವೇಶನ ಕಲ್ಪಿಸಿದ್ದಾರೆ. ಕಾಮಗಾರಿಗೆ ಮಹಿಳಾ -ಮಕ್ಕಳ ಕಲ್ಯಾಣ ಇಲಾಖೆ ಹಣ ಒದಗಿಸಬೇಕು. ಈ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷ ಜಿಯಾವುಲ್ಲಾ ಹೇಳಿದ್ದಾರೆ.

ಮಹಿಳಾ - ಕಲ್ಯಾಣ ಇಲಾಖೆ ಇತ್ತ ಗಮನ ಹರಿಸಿ ಈ ಅಂಗನವಾಡಿ ಕೇಂದ್ರ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಬೂದಿಗುಂಡಿ ನಿವಾಸಿಗಳು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT