ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ್ಕಿಯಿಂದ ಶತಧ್ವಜ ಪಾದಯಾತ್ರೆ

Last Updated 8 ಅಕ್ಟೋಬರ್ 2012, 8:55 IST
ಅಕ್ಷರ ಗಾತ್ರ

ಮೂಲ್ಕಿ: ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಸ್ಥಾಪನೆಯ ಶತಮಾನೋತ್ಸವ ಆಚರಣೆಯ ಪ್ರಯುಕ್ತ ಮೂಲ್ಕಿ ಯುವವಾಹಿನಿ ಘಟಕ ಆಯೋಜಿಸಿದ್ದ ಶತಧ್ವಜ ಪಾದಯಾತ್ರೆಗೆ  ಅಭೂತ ಪೂರ್ವ ಸ್ವಾಗತ ದೊರೆಯಿತು.

ಶತಧ್ವಜ ಪಾದಯಾತ್ರೆ ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಮಟ್ಟು, ಕೆ.ಎಸ್.ರಾವ್ ನಗರ ಹಳೆಯಂಗಡಿ, ಮುಕ್ಕ, ಸಸಿಹಿತ್ಲು, ಚೇಳ್ಯಾರು ಸುರತ್ಕಲ್ ಶ್ರೀಗುರು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಊಟದ ವ್ಯವಸ್ಥೆ ಬಳಿಕ ಪಾದಯಾತ್ರೆ ಮುಂದುವರಿಯಿತು.

ಕುಳಾಯಿ, ಬೈಕಂಪಾಡಿ, ಅಗ್ಗಿದಕಳಿಯ, ಪಣಂಬೂರು, ಕೂಳೂರು, ಕೊಡಿಕಲ್ ಪ್ರದೇಶದ ಬಿಲ್ಲವ ಸಂಘದ ಸದಸ್ಯರು ಅಭೂತ ಪೂರ್ವವಾಗಿ ಸ್ವಾಗತಿಸಿ ಪಾದಯಾತ್ರೆ ಯಲ್ಲಿ ಪಾಲ್ಗೊಂಡರು. ಬಳಿಕ ಮಂಗಳೂರು ಲೇಡಿಹಿಲ್ ಬಳಿ ಕುದ್ರೋಳಿ ದೇವಳದವತಿಯಿಂದ ಶತದ್ವಜ ಪಾದಯಾತ್ರೆ ಸ್ವಾಗತಿಸ ಲಾಯಿತು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಗುರು ಪೂಜೆಯ ಬಳಿಕ ಬಿಲ್ಲವ ಮಹಾ ಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳರವರು ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮೀನ್ ಅವರಿಗೆ ಧ್ವಜ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಶಾಸಕ ಅಭಯಚಂದ್ರ ಜೈನ್, ಯುವವಾಹಿನಿ ಕೇಂದ್ರ ಸಮಿತಿಯ ಕಿಶೋರ್ ಬಿಜೈ, ಪೈಯೊಟ್ಟು ಸದಾಶಿವ ಸಾಲ್ಯಾನ್, ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ.ಸಾಲ್ಯಾನ್,ರಾಘು ಸುವರ್ಣ,ರಮಾನಾಥ ಸುವರ್ಣ, ಶಶಿ ಅಮೀನ್, ರಮೇಶ್ ಕೊಕ್ಕರಕಲ್,ಗೋಪೀನಾಥ ಪಡಂಗ, ಉದಯ ಅಮೀನ್, ಚಂದ್ರಶೇಖರ ಸುವರ್ಣ,ರತ್ನಾಕರ ಸಾಲ್ಯಾನ್, ಕರಿಯ ಪೂಜಾರಿ, ಹರಿಶ್ಚಂದ್ರ.ವಿ. ಕೋಟ್ಯಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT